ಚಿಕ್ಕಬಳ್ಳಾಪುರ ಉತ್ಸವದಲ್ಲಿ ಕುದುರೆ ಟಾಂಗಾಗಳ ಸದ್ದು, ಉತ್ಸವಕ್ಕೆ ಬರುವವರಿಗೆ ಉಚಿತ ಟಾಂಗಾ ರೌಂಡ್ಸ್
ಜನವರಿ 7 ರಿಂದ 14 ರವರೆಗೆ 7 ದಿನಗಳ ಕಾಲ ದಸರಾ ಮಾದರಿಯಲ್ಲಿ ವಿಜೃಂಭಣೆಯಿಂದ ನಡೆಯುತ್ತಿರುವ ಚಿಕ್ಕಬಳ್ಳಾಪುರ ಉತ್ಸವದಲ್ಲಿ, ಜನರನ್ನ ಸೆಳೆಯಲು ಉಚಿತ ಟಾಂಗಾ ಸಂಚಾರ ಸೇವೆ ಶುರು ಮಾಡಿದ್ದಾರೆ. ಅದರಲ್ಲೂ ಪ್ಲವರ್ ಶೋ, ಅಡುಗೆ ಮೇಳ ಸೇರಿದಂತೆ ಒಂದು ಕಡೆಯಿಂದ ಇನ್ನೊಂದು ಕಡೆ ಜನರು ಸಂಚರಿಸಲು ಉಚಿತವಾಗಿ ಕುದುರೆ ಸಾರೋಟವನ್ನ ಬಳಸಬಹುದಾಗಿದೆ.
ಚಿಕ್ಕಬಳ್ಳಾಪುರ: ನೂತನ ಜಿಲ್ಲೆಯಾಗಿ ಬರೋಬ್ಬರಿ 15 ವರ್ಷಗಳ ನಂತರ ಇದೇ ಪ್ರಥಮ ಬಾರಿಗೆ ಅದ್ಧೂರಿ ಚಿಕ್ಕಬಳ್ಳಾಪುರ ಉತ್ಸವ ನಡೆಯುತ್ತಿದೆ. ದಸರಾ ಮಾದರಿಯಲ್ಲಿ ಉತ್ಸವ ನಡೆಸಲು ಮುಂದಾಗಿರುವ ಸ್ಥಳಿಯ ಶಾಸಕರು ಹಾಗೂ ಆರೋಗ್ಯ ಖಾತೆ ಸಚಿವ ಡಾ.ಕೆ.ಸುಧಾಕರ್, ಉತ್ಸವದ ಪ್ರಯುಕ್ತ ಜನರನ್ನ ಸೆಳೆಯಲು ವಿನೂತನ ಪ್ರಯೋಗ ನಡೆಸಿದ್ದಾರೆ. ಸ್ವತಃ ಸುಧಾಕರ್ ಪೌಂಡೇಷನ್ನಿಂದ 20 ಕ್ಕೂ ಹೆಚ್ಚು ಕುದುರೆ ಸಾರೋಟಗಳನ್ನು ಮೈಸೂರಿನಿಂದ ಚಿಕ್ಕಬಳ್ಳಾಪುರಕ್ಕೆ ಕರೆಸಿದ್ದು, ಸಾರ್ವಜನಿಕರು ಉಚಿತವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾರೋಟದಲ್ಲಿ ಸವಾರಿ ನಡೆಸಬಹುದಾಗಿದೆ.
ಇನ್ನು ಉತ್ಸವದ ಪ್ರಯುಕ್ತ ಸೋಲಾಲಪ್ಪನದಿನ್ನೆಯಲ್ಲಿ ತೋಟಗಾರಿಕೆ ಇಲಾಖೆಯಿಂದ ಕಲರ್ ಪುಲ್ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಪ್ಲವರ್ ಶೋನಲ್ಲಿ ತಾಲೂಕಿನ ನಂದಿ ಗ್ರಾಮದಲ್ಲಿರುವ ಶ್ರೀ ಭೋಗನಂದೀಶ್ವರ ದೇವಸ್ಥಾನವನ್ನು ಎರಡುವರೆ ಲಕ್ಷ ಗುಲಾಬಿ ಹೂಗಳಲ್ಲಿ ಅರಳಿಸಿದ್ದು ವಿಶೇಷವಾಗಿತ್ತು. ಮತ್ತೊಂದೆಡೆ ಆಹಾರ ಮೇಳ ಆಯೋಜನೆ ಮಾಡಲಾಗಿದ್ದು, ಇದರಿಂದ ಜನ ನಗರದ ಬಿಬಿ ರಸ್ತೆಯಿಂದ ಸೋಲಾಲಪ್ಪನದಿನ್ನೆವರೆಗೂ ಉಚಿತವಾಗಿ ಕುದುರೆ ಸಾರೋಟದಲ್ಲಿ ಪ್ರಯಾಣಿಸಬಹುದಾಗಿದೆ.
ಇದನ್ನೂ ಓದಿ:ಜ.7 ರಿಂದ ಚಿಕ್ಕಬಳ್ಳಾಪುರ ಉತ್ಸವ 2023 ಪ್ರಾರಂಭ, ಮೆರವಣಿಗೆಯ ಫೋಟೋಗಳು ಇಲ್ಲಿವೆ
ಮೈಸೂರಿನಲ್ಲಿ ಹೇರಳವಾಗಿದ್ದ ಕುದುರೆ ಸಾರೋಟಗಳು. ಈಗ ಚಿಕ್ಕಬಳ್ಳಾಪುರ ಉತ್ಸವ ಪ್ರಯುಕ್ತ ಚಿಕ್ಕಬಳ್ಳಾಪುರ ನಗರಕ್ಕೆ ಶಿಪ್ಟ್ ಆಗಿದ್ದು, ಎಲ್ಲಾ ಸಾರೋಟಗಳನ್ನು ಸಚಿವ ಸುಧಾಕರ್ ಕಡೆಯವರು ಗುತ್ತಿಗೆ ಪಡೆದು ಸಾರ್ವಜನಿಕರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದ್ರಿಂದ ಸ್ಥಳಿಯರು ಫಸ್ಟ್ ಟೈಂ ಟಾಂಗಾ ಗಾಡಿಯಲ್ಲಿ ಕುಳಿತು ಸಂಚಾರ ಮಾಡುತ್ತಿದ್ದಾರೆ.
ವರದಿ: ಭೀಮಪ್ಪ ಪಾಟೀಲ ಟಿವಿ9 ಚಿಕ್ಕಬಳ್ಳಾಪುರ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ