ಸೊಳ್ಳೆಗಳಿಗೆ ಕುಖ್ಯಾತಿಯಾಗಿರುವ ಶಿಡ್ಲಘಟ್ಟ ತಾಲೂಕಿನಲ್ಲಿ ಸೊಳ್ಳೆಗಳ ಹುಟ್ಟಡಗಿಸಲು ವಿನೂತನ ಕ್ರಮ, ಫೀಲ್ಡಿಗಿಳಿದ ವಿಶೇಷ ಮೀನುಗಳು! ಟಿವಿ9 ರಿಯಾಲಿಟಿ ಚೆಕ್

Sidlaghatta: ಸೊಳ್ಳೆಘಟ್ಟ ಎಂದೇ ಕುಖ್ಯಾತಿಯಾಗಿರುವ ಶಿಡ್ಲಘಟ್ಟ ತಾಲೂಕಿನಲ್ಲಿ ಸೊಳ್ಳೆಗಳ ಹುಟ್ಟಡಗಿಸಲು ವಿನೂತನ ಕ್ರಮ, ಸೊಳ್ಳೆಗಳ ನುಂಗಿಹಾಕಲು ಫೀಲ್ಡಿಗಿಳಿದ ವಿಶೇಷ ಮೀನುಗಳು! ಕೊನೆಗೂ ಗ್ರಾಮ ನೈರ್ಮಲ್ಯಕ್ಕೆ ಮುಂದಾದ ತಲಕಾಯಲಬೆಟ್ಟ ಗ್ರಾ. ಪಂ, ಗರ್ಭಿಣಿಯರು ತಕ್ಷಣ ವೈದ್ಯಕೀಯ ತಪಾಸಣೆಗೆ - ಟಿವಿ9 ರಿಯಾಲಿಟಿ ಚೆಕ್

ಸೊಳ್ಳೆಗಳಿಗೆ ಕುಖ್ಯಾತಿಯಾಗಿರುವ ಶಿಡ್ಲಘಟ್ಟ ತಾಲೂಕಿನಲ್ಲಿ ಸೊಳ್ಳೆಗಳ ಹುಟ್ಟಡಗಿಸಲು ವಿನೂತನ ಕ್ರಮ, ಫೀಲ್ಡಿಗಿಳಿದ ವಿಶೇಷ ಮೀನುಗಳು! ಟಿವಿ9 ರಿಯಾಲಿಟಿ ಚೆಕ್
ಸೊಳ್ಳೆಘಟ್ಟ ಎಂದೇ ಕುಖ್ಯಾತಿಯಾಗಿರುವ ಶಿಡ್ಲಘಟ್ಟ ತಾಲೂಕಿನಲ್ಲಿ ಸೊಳ್ಳೆಗಳ ಹುಟ್ಟಡಗಿಸಲು ವಿನೂತನ ಕ್ರಮ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Nov 03, 2023 | 11:15 AM

ಚಿಕ್ಕಬಳ್ಳಾಪುರ, ನವೆಂಬರ್​ 3: ಸೊಳ್ಳೆಘಟ್ಟ ಎಂದು ದಶಕಗಳಿಂದಲೂ ಕುಖ್ಯಾತಿ ಗಳಿಸಿರುವ ಶಿಡ್ಲಘಟ್ಟ (Sidlaghatta) ತಾಲೂಕಿನಲ್ಲಿ ಈಗ ಸೊಳ್ಳೆಗಳದ್ದೇ ಸದ್ದು ಸುದ್ದಿ! ದಿಬ್ಬೂರಹಳ್ಳಿಯ ವ್ಯಕ್ತಿಗೆ ಜ್ವರ ತಪಾಸಣೆ ಮಾಡುವಾಗ ಜಿಕಾ ವೈರಸ್ ಇರುವ ಅನುಮಾನ ಬಂದು ಮತ್ತಷ್ಟು ಪರೀಕ್ಷೆಗಳನ್ನು ನಡೆಸಿದಾಗ ಸೊಳ್ಳೆಗಳಲ್ಲಿ ( Aedes aegypti mosquitoes) ಜಿಕಾ ವೈರಸ್ ಇರುವುದು ಪತ್ತೆಯಾಗಿತ್ತು. ತಕ್ಷಣವೇ ಎಚ್ಚೆತ್ತ ಜಿಲ್ಲಾಡಳಿತ ಸಮರೋಪಾದಿಯಲ್ಲಿ ನಿಯಂತ್ರಣ ಕ್ರಮಗಳಿಗೆ ಮುಂದಾಗಿದೆ. ಅದರಲ್ಲೂ ವಿಶೇಷವಾಗಿ ಸೊಳ್ಳೆಗಳ ನಾಶಕ್ಕೆ ವಿನೂತನ ಕ್ರಮ ಕೈಗೊಳ್ಳಲು ಮುಂದಾಗಿದೆ. ಸೊಳ್ಳೆಗಳ ನುಂಗಿಹಾಕಲು ವಿಶೇಷ ಮೀನುಗಳನ್ನು ಫೀಲ್ಡಿಗೆ ಬಿಡಲಾಗಿದೆ. ಅಂದರೆ ಸೊಳ್ಳೆಗಳ (mosquitoes) ಉತ್ಪತ್ತಿಯಾಗುತ್ತಿರುವುದು ನಿಂತ ನೀರಿನಲ್ಲಿ. ಹಾಗಾಗಿ ಆ ನೀರಿಗೆ ಗಪ್ಪಿ ಹಾಗೂ ಗಾಂಬೋಸಿಯಾ ಜಾತಿಯ ಮೀನುಗಳನ್ನು ಇಳಿಬಿಟ್ಟು, ಅಲ್ಲೇ ಸೊಳ್ಳೆಗಳನ್ನು ಸ್ವಾಹಾ ಮಾಡುವುದು ಈ ಮೀನುಗಳ (fishes) ಕೆಲಸವಾಗಲಿದೆ. ಅದರಿಂದ ಜಿಕಾ ವೈರಸ್ ಹುಟ್ಟಡಗಿಸುವುದು ಈ ಕಾರ್ಯಯೋಜನೆಯ ತಂತ್ರವಾಗಿದೆ. ನಿರ್ದಿಷ್ಟವಾಗಿ ತಲಕಾಯಲಬೆಟ್ಟ (Talakayalabetta) ಗ್ರಾಮದ ಸೊಳ್ಳೆಗಳಲ್ಲಿ ಜಿಕಾ ವೈರಸ್ ಕಂಡು ಬಂದಿರುವ ಹಿನ್ನೆಲೆಯಲ್ಲಿ ಸೊಳ್ಳೆಗಳನ್ನು ಸಾಯಿಸಲು ಆರೋಗ್ಯ ಇಲಾಖೆ ಸಿಬ್ಬಂದಿಯು ಗಪ್ಪಿ ಹಾಗೂ ಗಾಂಬೋಸಿಯಾ ಮೀನುಗಳನ್ನು ಹಿಡಿದುಕೊಂಡು ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ, ಚಿಕ್ಕಬಳ್ಳಾಫುರ ಜಿಲ್ಲೆ ಶಿಡ್ಲಘಟ್ಟ ತಾಲೂಕು ತಲಕಾಯಲಬೆಟ್ಟ ಗ್ರಾಮದ ಸೊಳ್ಳೆಗಳಲ್ಲಿ ಜಿಕಾ ವೈರಸ್ ಕಂಡು ಬಂದಿದ್ದು, ಸೊಳ್ಳೆಗಳು ಹಾಗೂ ಅವುಗಳ ಉತ್ಪತ್ತಿಯನ್ನು ನಾಶ ಮಾಡಲು ಮುಂದಾಗಿರುವ ಆರೋಗ್ಯ ಇಲಾಖೆ ಸೊಳ್ಳೆಯನ್ನು ತಿಂದು ಹಾಕು ವಿಶೇಷ ಜಾತಿಯ ಮೀನುಗಳನ್ನು ನೀರಿನ ತೊಟ್ಟಿಗೆ ಹಾಕುವ ಕೆಲಸ ಮಾಡುತ್ತಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತಲಕಾಯಲಬೆಟ್ಟ ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದಾರೆ. ಜಿಲ್ಲಾ ಆರೋಗ್ಯಾಧಿಕಾರಿ ಮಹೇಶಕುಮಾರ್, ತಾಲೂಕು ಆರೋಗ್ಯಾಧಿಕಾರಿ ವೆಂಕಟೇಶಮೂರ್ತಿ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ, ಆಶಾ ಕಾರ್ಯಕರ್ತರು ಗ್ರಾಮ ಭಾಗದಲ್ಲಿ ಬಿಡಾರ ಹೂಡಿದ್ದಾರೆ.

ಈ ಮಧ್ಯೆ, ಚಿಕ್ಕಬಳ್ಳಾಪುರ ಜಿಲ್ಲೆಯ ಸೊಳ್ಳೆಗಳಲ್ಲಿ ಝೀಕಾ ವೈರಸ್​​ ಪತ್ತೆಯಾಗುತ್ತಿದ್ದಂತೆ ತಲಕಾಯಲಬೆಟ್ಟ ಗ್ರಾ. ಪಂ. ವಿರುದ್ಧ ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಸ್ಥಳೀಯರು ತಲಕಾಯಲಬೆಟ್ಟ ಗ್ರಾಮ ಪಂಚಾಯತಿಯ ನಿರ್ಲಕ್ಷ್ಯದಿಂದ ಈ ಪರಿಸ್ಥಿತಿ ಉದ್ಭವಿಸಿದೆ ಎಂದು ಕಿಡಿಕಾರಿದ್ದಾರೆ. ತಲಕಾಯಲಬೆಟ್ಟ ಗ್ರಾಮದಲ್ಲಿ ನೈರ್ಮಲ್ಯ ಕೊರತೆ ಕಾಡುತ್ತಿದೆ. ಗ್ರಾಮದ ಚರಂಡಿಗಳನ್ನು ಶುಚಿಗೊಳಿಸಿ ಯಾವುದೋ ಕಾಲವಾಗಿದೆ. ಇನ್ನಾದರೂ ಗ್ರಾ. ಪಂ. ಎಚ್ಚೆತ್ತುಕೊಂಡು, ಸ್ವಚ್ಛತೆ ಅಭಿಯಾನ ಶುರುಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಗ್ರಾಮ ಪಂಚಾಯತಿ ಸದಸ್ಯ ಅಶ್ವತ್ಥರೆಡ್ಡಿಯನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ.

ದಿಬ್ಬೂರಹಳ್ಳಿ, ತಲಾಕಾಯಲ ಬೆಟ್ಟ ಸುತ್ತಮುತ್ತ ಜಿಕಾ ಆತಂಕ: ಟಿವಿ9 ತಂಡ ರಿಯಾಲಿಟಿ ಚೆಕ್

ಕೇರಳ ಬಿಟ್ಟರೆ ಕರ್ನಾಟಕದಲ್ಲಿ ಮಾತ್ರವೇ ಈ ಜಿಕಾ ವೈರಸ್ ಪತ್ತೆಯಾಗಿದೆ. ಇದರಿಂದ ಸಹಜವಾಗಿ ರಾಜ್ಯದ ಜನತೆ ಆತಂಕಗೊಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ 5 ಗ್ರಾಮಗಳ ವ್ಯಾಪ್ತಿಯಲ್ಲಿ ವೈರಸ್ ಆತಂಕ ಎದುರಾಗಿದೆ. ದಿಬ್ಬೂರಹಳ್ಳಿ, ತಲಾಕಾಯಲ ಬೆಟ್ಟ, ಸುತ್ತಮುತ್ತ ಜಿಕಾ ಆತಂಕ ಮನೆ ಮಾಡಿದೆ. ಸೊಳ್ಳೆಗಳಲ್ಲಿ ಜಿಕಾ ವೈರಸ್​​ ಪತ್ತೆ ಹಿನ್ನೆಲೆ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಹೆಚ್ಚು ಆತಂಕ ಮೂಡಿಸಿದೆ.

ಈ ಜಿಕಾ ವೈರಸ್ ಆತಂಕದ ಸಮ್ಮುಖದಲ್ಲಿ ತಲಕಾಯಲಬೆಟ್ಟ ಸುತ್ತಮುತ್ತ ಟಿವಿ9 ತಂಡ ರಿಯಾಲಿಟಿ ಚೆಕ್ ಮಾಡುತ್ತಿದೆ. ಸುತ್ತಮುತ್ತಲ ಗ್ರಾಮಗಳಲ್ಲಿ ಕಾಲಕಾಲಕ್ಕೆ ಚರಂಡಿಗಳಲ್ಲಿ ಹೂಳು ತೆಗೆಯುತ್ತಿಲ್ಲ. ಹೀಗಾಗಿ ಸೊಳ್ಳೆಗಳು ಉತ್ಪತ್ತಿ ಆಗುತ್ತಿವೆ. ಅದರಿಂದ ಜಿಕಾ ವೈರಸ್ ಬಂದಿದೆ ಅಂತ ಆರೋಗ್ಯ ಇಲಾಖೆಯವರು ಹೇಳುತ್ತಿದ್ದಾರೆ. ಅದು ನಮ್ಮ ಆತಂಕವನ್ನು ಹೆಚ್ಚಿಸಿದೆ ಎಂದು ಗ್ರಾಮಸ್ಥರು ತಮ್ಮ ಅಸಹಾಯಕ ಸ್ಥಿತಿ ಬಗ್ಗೆ ಆಕ್ರೋಶಗೊಂಡಿದ್ದಾರೆ. ನಿನ್ನೆ ಆರೋಗ್ಯ ಇಲಾಖೆಯವರು ಬಂದು ಸೊಳ್ಳೆಗಳ ನಿವಾರಣೆಗೆ ರಾಸಾಯನಿಕ ಸಿಂಪಡಣೆ ಮಾಡಿದ್ದಾರೆ, ಆದ್ರೆ ಇದರ ಬಗ್ಗೆ ಜನರಲ್ಲಿ ಇನ್ನಷ್ಟು ಅರಿವು ಮೂಡಿಸಬೇಕು ಎಂದು ಗ್ರಾಮಸ್ಥರರು ಟಿವಿ 9 ಪ್ರತಿನಿಧಿ ಶಿವರಾಜ್ ಕುಮಾರ್ ಜೊತೆ ಮಾತುಕತೆ ನಡೆಸುತ್ತಾ ತಿಳಿಸಿದ್ದಾರೆ.

ತಲಕಾಯಲಬೆಟ್ಟ ಗರ್ಭಿಣಿಯರು ತಕ್ಷಣ ವೈದ್ಯಕೀಯ ತಪಾಸಣೆಗೆ:

ಚಿಕ್ಕಬಳ್ಳಾಫುರ ಜಿಲ್ಲೆ ಶಿಡ್ಲಘಟ್ಟ ತಾಲೂಕು ತಲಕಾಯಲಬೆಟ್ಟ ಗ್ರಾಮದ ಸೊಳ್ಳೆಗಳಲ್ಲಿ ಜಿಕಾ ವೈರಸ್ ಕಂಡು ಬಂದ ಹಿನ್ನೆಲೆ ಗ್ರಾಮದ ಗರ್ಭಿಣಿ ಮಹಿಳೆಯರು ಆತಂಕಕ್ಕೊಳಗಾಗಿದ್ದಾರೆ. ಜಿಕಾ ವೈರಸ್ ಗರ್ಭಿಣಿ ಮಹಿಳೆಯರಿಗೆ ತಗುಲಿದ್ರೆ ಹುಟ್ಟುವ ಮಕ್ಕಳ ನರಮಂಡಲ ಮೇಲೆ ಪರಿಣಾಮ ಬೀರುವ ಕಾರಣ ಈಗ ಗರ್ಭಿಣಿಯರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲು ನಿರ್ಧರಿಸಲಾಗಿದೆ. ಹುಟ್ಟುವ ಮಕ್ಕಳಲ್ಲಿ ಯಾವುದೆ ನ್ಯೂನತೆ ಕಂಡು ಬಂದರೆ ಅದನ್ನು ಪತ್ತೆ ಹಚ್ಚಲು ಆರೋಗ್ಯ ಇಲಾಖೆ ಮುಂದಾಗಿದೆ. ವೈದ್ಯಾಧಿಕಾರಿಗಳು ಗರ್ಭಿಣಿ ಮಹಿಳೆಯರ ಮನೆ ಮನೆಗೆ ಭೇಟಿ ನೀಡಿ ತಪಾಸಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಝಿಕಾ ವೈರಸ್ ಪತ್ತೆ: ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

ತಲಕಾಯಲಬೆಟ್ಟದಲ್ಲಿ ಜೀಕಾ ವೈರಸ್​​ ಪತ್ತೆ ಬಗ್ಗೆ DHO ಮಹೇಶ್ ಕುಮಾರ್​ ಟಿವಿ9ಗೆ ನೀಡಿದ ಮಾಹಿತಿ:

ಚಿಕ್ಕಬಳ್ಳಾಪುರ ಜಿಲ್ಲೆಯ ಸೊಳ್ಳೆಗಳಲ್ಲಿ ಜೀಕಾ ವೈರಸ್​​ ಪತ್ತೆಯಾಗಿದ್ದು, ತಲಕಾಯಲಬೆಟ್ಟದಲ್ಲಿ ಜಿಲ್ಲಾ ವೈದ್ಯಾಧಿಕಾರಿ S S ಮಹೇಶ್ ಕುಮಾರ್ (Chikkaballapur District Health Officer -DHO)​ ಟಿವಿ9 ಜೊತೆ ಮಾತನಾಡಿದ್ದಾರೆ. ತಲಕಾಯಲಬೆಟ್ಟದ ಗ್ರಾ.ಪಂ. ವ್ಯಾಪ್ತಿಯಲ್ಲಿ ಜೀಕಾ ವೈರಸ್ ಪತ್ತೆಯಾಗಿದೆ. ನಮ್ಮ ವೈದ್ಯಕೀಯ ಸರ್ವೇಕ್ಷಣಾ ಸಮಿತಿ ಕಳೆದ ಆಗಸ್ಟ್​​ ತಿಂಗಳಲ್ಲಿ ಪರೀಕ್ಷೆ ನಡೆಸಿದಾಗ ಇದು ಸಾಬೀತಾಗಿದೆ. ಪರೀಕ್ಷೆ ವೇಳೆ ಸೊಳ್ಳೆಗಳಲ್ಲಿ ಜೀಕಾ ವೈರಸ್ ಪತ್ತೆಯಾಗಿರುವುದು ದೃಢಪಟ್ಟಿದೆ. ಜೀಕಾ ವೈರಸ್​​ ಸಮ್ಮುಖದಲ್ಲಿ ಐದು ಗ್ರಾಮಗಳ ವ್ಯಾಪ್ತಿಯಲ್ಲಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈಗಾಗಲೇ 30 ಗರ್ಭಿಣಿಯರ ರಕ್ತ ಪರೀಕ್ಷೆ ಮಾಡಿದ್ದೇವೆ. 34 ರಕ್ತದ ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಕಳಿಸಿದ್ದೇವೆ. ಹೆಚ್ಚಿನ ಪರೀಕ್ಷೆಗಳಿಗಾಗಿ ಬೆಂಗಳೂರು, ಪುಣೆಗೂ (National Institute of Virology -NIV) ಮಾದರಿಗಳನ್ನ ಕಳಿಸಿದ್ದೇವೆ. ಜೀಕಾ ವೈರಸ್​ ಬಗ್ಗೆ ಯಾವುದೇ ಆತಂಕಪಡುವ ಅಗತ್ಯವಿಲ್ಲ. ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವುದರಿಂದ ರೋಗ ನಿಯಂತ್ರಣ ಸಾಧ್ಯ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:02 am, Fri, 3 November 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ