ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಭರ್ಜರಿ ಮಳೆಗೆ ಅಯ್ಯನಕೆರೆ-ಮದಗದಕೆರೆ ಭರ್ತಿ, ಲಕ್ಷಾಂತರ ರೈತರಿಗೆ ಇನ್ನೆರಡು ವರ್ಷ ಇಲ್ಲ ಟೆನ್ಶನ್!

ಐತಿಹಾಸಿಕ ಅಯ್ಯನಕೆರೆ, ಮದಗದ ಕೆರೆ ಭರ್ತಿಯಾಗಿ ಕೋಡಿ ಬಿದ್ದಿದ್ದು ರೈತರು ಫುಲ್ ಖುಷಿಯಾಗಿದ್ದಾರೆ. ಪ್ರವಾಸಿಗರು ಹುಚ್ಚಾಟ ಮಾಡುತ್ತಿದ್ದು ಚಿಕ್ಕಮಗಳೂರು ಜಿಲ್ಲಾಡಳಿತ ಅನಾಹುತಗಳು ನಡೆಯುವ ಮುನ್ನ ಬಿಗಿ ಬಂದೋಬಸ್ತ್ ಮಾಡಬೇಕಿದೆ.

ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಭರ್ಜರಿ ಮಳೆಗೆ ಅಯ್ಯನಕೆರೆ-ಮದಗದಕೆರೆ ಭರ್ತಿ, ಲಕ್ಷಾಂತರ ರೈತರಿಗೆ ಇನ್ನೆರಡು ವರ್ಷ ಇಲ್ಲ ಟೆನ್ಶನ್!
ಭರ್ಜರಿ ಮಳೆಗೆ ಅಯ್ಯನಕೆರೆ-ಮದಗದಕೆರೆ ಭರ್ತಿ
Follow us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಸಾಧು ಶ್ರೀನಾಥ್​

Updated on: Aug 07, 2023 | 2:14 PM

ಜಸ್ಟ್ ಒಂದು ವಾರದಲ್ಲಿ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಆರ್ಭಟಿಸಿದ ವರುಣನಿಂದಾಗಿ (Chikmagalur rains) ಕೆರೆಗಳಿಗೆ (Lake) ಜೀವ ಕಳೆ ಬಂದಿದೆ. ನೀರಿಲ್ಲದೆ ಬತ್ತಿ ಹೋಗಿದ್ದ ಬಯಲು ಸೀಮೆ ಭಾಗದ ಜೀವನಾಡಿ ಐತಿಹಾಸಿಕ ಮದಗದಕೆರೆ, ಅಯ್ಯನಕೆರೆ ಭರ್ತಿಯಾಗಿ ಕೋಡಿಬಿದ್ದಿದ್ದು ರೈತರು ನೆಮ್ಮದಿಯಾಗಿದ್ರೆ.ಮಾತು ಕೇಳದ ಪ್ರವಾಸಿಗರು ಅಪಾಯವನ್ನು ಲೆಕ್ಕಿಸದೆ ಮೋಜು ಮಸ್ತಿ ಮಾಡುತ್ತಿದ್ದು, ಜಿಲ್ಲಾಡಳಿತಕ್ಕೆ ಟೆನ್ಶನ್‌ ನೀಡಿದೆ. ಬಯಲುಸೀಮೆ ಭಾಗದ ರೈತರಿಗಿದ್ದ ಆತಂಕ ದೂರವಾಗಿದೆ. ಜೂನ್ ತಿಂಗಳಿನಲ್ಲಿ ಬರಬೇಕಿದ್ದ ವಾಡಿಕೆ ಮಳೆ ಜಸ್ಟ್ ಜುಲೈ ಕೊನೆಯ ವಾರದಲ್ಲಿ ಸುರಿದಿದ್ದು, ಚಂದ್ರದ್ರೋಣ ಪರ್ವತದ ಸಾಲಿನಲ್ಲಿ (Chandradrona mountains) ಸುರಿದ ಧಾರಾಕಾರ ಮಳೆಯಿಂದ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಅಯ್ಯನಕೆರೆ ,ಮದಗದಕೆರೆ (Ayyanakere, Madagada Kere) ಸಂಪೂರ್ಣ ಭರ್ತಿಯಾಗಿದ್ದು ಎರಡೂ ಕೆರೆಯ ಕೋಡಿ ಬಿದ್ದಿದೆ.

ಕಡೂರು ತಾಲೂಕಿನ ಬಯಲುಸೀಮೆ ಭಾಗದ ಲಕ್ಷಾಂತರ ರೈತರ ಬದುಕಿನ ಜೀವನಾಡಿಯಾಗಿರುವ ಅಯ್ಯನಕೆರೆ ,ಮದಗದಕೆರೆ ಒಮ್ಮೆ ಭರ್ತಿಯಾಗಿ ಕೆರೆ ಕೋಡಿ ಬಿದ್ರೆ ಎರಡು ವರ್ಷ ರೈತರು ನೆಮ್ಮದಿಯಾಗುತ್ತಾರೆ. ಇದೆ ಮೊದಲ ಬಾರಿಗೆ. ಜುಲೈನಲ್ಲಿ ಅಯ್ಯನಕೆರೆ ,ಮದಗದಕೆರೆಗಳ ಕೋಡಿ ಬಿದ್ದಿದ್ದು ರೈತರು ಹರುಷಗೊಂಡಿದ್ದಾರೆ. ಅಪಾರ ಪ್ರಮಾಣದಲ್ಲಿ ಕೆರೆಗಳಿಗೆ ನೀರು ಹರಿದು ಬರುತ್ತಿದ್ದು ನಾಲೆಗಳ ಮೂಲಕ ಬಯಲುಸೀಮೆ ಭಾಗದಕ್ಕೆ ನೀರು ಹರಿಯುತ್ತಿದ್ದು ಕೃಷಿ ಚಟುವಟಿಕೆ ಆರಂಭವಾಗಿದೆ.

Also Read:  ಬಾಗಲಕೋಟೆ ಕರಾಟೆ ಕಲಿ, ಎಲೆಕ್ಟ್ರಿಷಿಯನ್ ಮಗಳು ಚಿನ್ನ ಗೆದ್ದು ವಿಶ್ವಮಟ್ಟಕ್ಕೆ ಲಗ್ಗೆಯಿಟ್ಟಿದ್ದಾರೆ! ಆರ್ಥಿಕ ನೆರವು ಬೇಕಿದೆ

2000 ಸಾವಿರ ವಿಸ್ತೀರ್ಣದ ಏಳು ಗುಡ್ಡಗಳ ನಡುವೆ ಇರುವ ಅಯ್ಯನಕೆರೆ ಪ್ರವಾಸಿಗರನ್ನ ತನ್ನತ್ತ ಸೆಳೆಯುತ್ತಿದ್ರೆ ,ಮದಗದಕೆರೆ 2036 ಎಕರೆ ವಿಸ್ತೀರ್ಣವೊಂದಿದ್ದು ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಸುರಿದ ಮಳೆಯಿಂದ ಕಣ್ಣು ಹಾಯಿಸಿದಷ್ಟು ದೂರ ಕೆರೆಯಲ್ಲಿ ನೀರು ಕಾಣಿಸುತ್ತಿದ್ದು ಪ್ರವಾಸಿಗರನ್ನ ಸೆಳೆಯುತ್ತಿದೆ. ಗುಡ್ಡದ ನಡುವೆ ತುಂಬಿ ಹರಿಯುತ್ತಿರುವ ಅಯ್ಯನಕೆರೆ ಮತ್ತು ಮದಗದಕೆರೆಯನ್ನ ನೋಡಲು ಸುತ್ತಮುತ್ತಲಿನ ಗ್ರಾಮದವರೂ ಸೇರಿದಂತೆ ರಾಜ್ಯ ,ಹೊರ ಜಿಲ್ಲೆಯಿಂದ ಪ್ರವಾಸಿಗರು ಆಗಮಿಸುತ್ತಿದ್ದು ಎಂಜಾಯ್ ಮಾಡುತ್ತಿದ್ದಾರೆ. ಇನ್ನೂ ಕೆಲ ಪ್ರವಾಸಿಗರು ಅಪಾಯದ ಮಟ್ಟದಲ್ಲಿರುವ ಕೆರೆಯಲ್ಲಿ ಮೋಜು ಮಸ್ತಿ ಮಾಡುತ್ತಿದ್ದು ನೂರಾರು ಅಡಿ ಆಳದ ಕೆರೆಗೆ ಜಿಗಿದು ಹುಚ್ಚಾಟ ಮಾಡುತ್ತಿದ್ದಾರೆ.

ಐತಿಹಾಸಿಕ ಹಿನ್ನೆಲೆ ಇರುವ ಅಯ್ಯನಕೆರೆ, ಮದಗದ ಕೆರೆ ಭರ್ತಿಯಾಗಿ ಕೋಡಿ ಬಿದ್ದಿದ್ದು ರೈತರು ಫುಲ್ ಖುಷಿಯಾಗಿದ್ದಾರೆ. ನೂರಾರು ಅನಾಹುತ ನಡೆದಿರುವ ಕೆರೆಯಲ್ಲಿ ಪ್ರವಾಸಿಗರು ಹುಚ್ಚಾಟ ಮಾಡುತ್ತಿದ್ದು ಚಿಕ್ಕಮಗಳೂರು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಅನಾಹುತಗಳು ನಡೆಯುವ ಮುನ್ನ ಬಿಗಿ ಬಂದೋಬಸ್ತ್ ಮಾಡಬೇಕಿದೆ..

ಚಿಕ್ಕಮಗಳೂರು ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ