ಮಳೆ ಎಫೆಕ್ಟ್: ಚಿಕ್ಕಮಗಳೂರಿನ ಪ್ರವಾಸಿ ತಾಣಗಳು ಖಾಲಿ, ಪ್ರವಾಸಿಗರ ಸಂಖ್ಯೆ ಗಣನೀಯ ಇಳಿಕೆ: ಹೋಂ ಸ್ಟೇ, ಹೋಟೆಲ್ ಉದ್ಯಮಕ್ಕೆ ಹೊಡೆತ
Chikkamagaluru News: ವೀಕೆಂಡ್ನಲ್ಲಿ 35 ಸಾವಿರಕ್ಕೂ ಹೆಚ್ಚಿನ ಪ್ರವಾಸಿಗರು ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ರಾಜ್ಯದ ಅತಿ ಎತ್ತರದ ಶಿಖರ ಮುಳ್ಳಯ್ಯನಗಿರಿ, ದತ್ತಪೀಠ, ಕೆಮ್ಮಣ್ಣುಗುಂಡಿ, ಹೊನ್ನಮ್ಮನಹಳ್ಳಕ್ಕೆ ಆಗಮಿಸುತ್ತಿದ್ದರು. ಆದರೆ ಮಳೆ ಎಫೆಕ್ಟ್ ನಿಂದ ವೀಕೆಂಡ್ನಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು, ಜಸ್ಟ್ 3000 ಪ್ರವಾಸಿಗರು ಭಾನುವಾರ ಭೇಟಿ ನೀಡಿದ್ದಾರೆ.
ಚಿಕ್ಕಮಗಳೂರು, ಆಗಸ್ಟ್ 07: ವೀಕೆಂಡ್ನಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಚಿಕ್ಕಮಗಳೂರಿನ ಪ್ರವಾಸಿ ತಾಣಗಳು ಪ್ರವಾಸಿಗರಿಲ್ಲದೆ (Tourist) ಖಾಲಿ ಖಾಲಿಯಾಗಿವೆ. ಒಂದು ವಾರ ಸುರಿದ ಮಳೆ ಅವಾಂತರ ಸೃಷ್ಟಿ ಮಾಡಿದ್ದು, ಮಳೆ ಎಫೆಕ್ಟ್ ನಿಂದ ಚಿಕ್ಕಮಗಳೂರಿನ ಪ್ರಸಿದ್ಧ ಪ್ರವಾಸಿ ತಾಣಗಳ ಕಡೆ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹೋಟೆಲ್, ಹೋಂ ಸ್ಟೇ ಮಾಲೀಕರು ಕೂಡ ಕಕ್ಕಾಬಿಕ್ಕಿಯಾಗಿದ್ದಾರೆ.
ಮಳೆ ಎಫೆಕ್ಟ್: ಗಣನೀಯ ಇಳಿಮುಖವಾದ ಪ್ರವಾಸಿಗರ ಸಂಖ್ಯೆ
ಕಾಫಿನಾಡಿನ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು. ವೀಕೆಂಡ್ನಲ್ಲಿ 35 ಸಾವಿರಕ್ಕೂ ಹೆಚ್ಚಿನ ಪ್ರವಾಸಿಗರು ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ರಾಜ್ಯದ ಅತಿ ಎತ್ತರದ ಶಿಖರ ಮುಳ್ಳಯ್ಯನಗಿರಿ, ದತ್ತಪೀಠ, ಕೆಮ್ಮಣ್ಣುಗುಂಡಿ, ಹೊನ್ನಮ್ಮನಹಳ್ಳಕ್ಕೆ ಆಗಮಿಸುತ್ತಿದ್ದರು. ಆದರೆ ಮಳೆ ಎಫೆಕ್ಟ್ ನಿಂದ ಈ ವೀಕೆಂಡ್ನಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು, ಜಸ್ಟ್ 3000 ಪ್ರವಾಸಿಗರು ಭಾನುವಾರ ಭೇಟಿ ನೀಡಿದ್ದಾರೆ.
ಮಳೆಯಿಂದ ಚಂದ್ರದ್ರೋಣ ಪರ್ವತದ ಸಾಲಿನ ಪ್ರವಾಸಿ ತಾಣಗಳಿಗೆ ಚಿಕ್ಕಮಗಳೂರು ಜಿಲ್ಲಾಡಳಿತ ಕಳೆದ ವಾರದ ವೀಕೆಂಡ್ನಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಿತು. ಮಳೆ ಗುಡ್ಡ ಕುಸಿತದಿಂದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದ್ದು ಪ್ರವಾಸಿಗರಿಲ್ಲದೆ ಈ ವೀಕೆಂಡ್ ಖಾಲಿ ಖಾಲಿಯಾಗಿದೆ.
ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿರುವ ಕಾಫಿನಾಡು ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತಕ್ಕೆ ಜಸ್ಟ್ ಒಂದೇ ವರ್ಷದಲ್ಲಿ 30 ಲಕ್ಷದಷ್ಟು ಪ್ರವಾಸಿಗರು ಭೇಟಿ ನೀಡಿದ್ದರು. ಆದರೆ ಜುಲೈ ಕೊನೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಇಳಿಕೆ ಆಗಿದೆ.
ಇದನ್ನೂ ಓದಿ: ಚಿಕ್ಕಮಗಳೂರು: ಕ್ರಿಶ್ಚಿಯನ್ ಇಲ್ಲದ ಗ್ರಾಮದಲ್ಲಿ ಚರ್ಚ್ ನಿರ್ಮಾಣ: ಹಿಂದೂಪರ ಸಂಘಟನೆ, ಗ್ರಾಮಸ್ಥರ ವಿರೋಧ
ಹೋಂ ಸ್ಟೇ ,ಹೋಟೆಲ್ಗಳಿಗೆ ಕೋಟ್ಯಾಂತರ ರೂಪಾಯಿ ನಷ್ಟ
ಹೋಂ ಸ್ಟೇ ,ಹೋಟೆಲ್ಗಳಲ್ಲಿ ವೀಕೆಂಡ್ನಲ್ಲಿ ಪ್ರವಾಸಿಗರಲ್ಲಿದೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದ್ದು. ಹೋಂ ಸ್ಟೇಗಳಲ್ಲಿ ಇನ್ನೂ ಒಂದು ತಿಂಗಳ ವರೆಗೂ ಪ್ರವಾಸಿಗರು ಬುಕಿಂಗ್ ಮಾಡಿಲ್ಲ. ಪ್ರವಾಸಿ ತಾಣಗಳ ಕಡೆ ಬಾರದ ಪ್ರವಾಸಿಗರಿಂದ ಪ್ರವಾಸಿಗರನ್ನ ನಂಬಿರುವ ಉದ್ಯಮದ ಮೇಲೆ ಪರಿಣಾಮ ಬೀರಿದ್ದು ಆತಂಕ ಮೂಡಿಸಿದೆ.
ಸದಾ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಕಾಫಿನಾಡಿನ ಚಂದ್ರದ್ರೋಣ ಪರ್ವತ ಪ್ರವಾಸಿಗರಿಲ್ಲದೆ ಖಾಲಿ ಖಾಲಿಯಾಗಿದ್ದು, ಮಳೆ ಮುಗಿಯುವ ವರೆಗೂ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಪ್ರವಾಸಿಗರನ್ನು ನಂಬಿರುವ ಉದ್ಯಮಕ್ಕೆ ಟೆನ್ಶನ್ ಶುರುವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:54 pm, Mon, 7 August 23