ಹುಬ್ಬಳ್ಳಿ: ಹದಗೆಟ್ಟ ರಸ್ತೆಗಳು: ಗುಂಡಿಗಳ ಕಾರುಬಾರು, ಓಡಾಡೋದೆ ಕಷ್ಟ

Hubballi News: ಹುಬ್ಬಳ್ಳಿ ಮಹಾನಗರದ ಯಾವುದೇ ರಸ್ತೆಗೆ ಕಾಲಿಟ್ಟರೂ ರಾಡಿ ರಾಡಿ ನಿಮ್ಮ ಕಣ್ಣಿಗೆ ಕಾಣಸಿಗುತ್ತದೆ. ರಸ್ತೆಗಳ ತುಂಬಾ ತಗ್ಗು ದಿಣ್ಣೆಗಳು, ರಸ್ತೆಯಲ್ಲಿ ಗುಂಡಿಗಳಿವೆಯೋ, ಗುಂಡಿಯಲ್ಲಿಯೇ ರಸ್ತೆಗಳಿವೆಯೋ ಎನ್ನುವ ಅನುಮಾನ ಕಾಡುತ್ತದೆ. ರಾಜ್ಯಕ್ಕೆ ಇಬ್ಬರು ಸಿಎಂಗಳನ್ನು ಕೊಟ್ಟ ಊರಿಗೆ ಇದೆಂತಹ ಪರಿಸ್ಥಿತಿ ಎನ್ನುತ್ತಿದ್ದಾರೆ.

ಹುಬ್ಬಳ್ಳಿ: ಹದಗೆಟ್ಟ ರಸ್ತೆಗಳು: ಗುಂಡಿಗಳ ಕಾರುಬಾರು, ಓಡಾಡೋದೆ ಕಷ್ಟ
ಹದಗೆಟ್ಟ ರಸ್ತೆ
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ಗಂಗಾಧರ​ ಬ. ಸಾಬೋಜಿ

Updated on: Aug 07, 2023 | 9:26 PM

ಹುಬ್ಬಳ್ಳಿ, ಆಗಸ್ಟ್​ 07: ರಾಜ್ಯಕ್ಕೆ ಈ ಹಿಂದೆ ಇಬ್ಬರು ಮುಖ್ಯಮಂತ್ರಿಗಳನ್ನು ಕೊಟ್ಟಿದ್ದ ಊರು ಇದು. ಆದರೂ ಈ ಊರಿನ ರಸ್ತೆಗಳಲ್ಲಿ ಕಾಲಿಡುವುದಕ್ಕೆ ಆಗಲ್ಲ ಬಿಡ್ರೀ. ಅಷ್ಟರ ಮಟ್ಟಿಗೆ ಇಲ್ಲಿನ ರಸ್ತೆಗಳು (Roads) ಹದಗೆಟ್ಟಿವೆ. ಬೇರೆ ಕಡೆಯಿಂದ ಬಂದವರು ಬೈದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ವಾಣಿಜ್ಯ ನಗರಿ ಹುಬ್ಬಳ್ಳಿಯ ಸದ್ಯದ ಸ್ಥಿತಿಯಾಗಿದೆ.

ಹುಬ್ಬಳ್ಳಿ ಮಹಾನಗರದ ಯಾವುದೇ ರಸ್ತೆಗೆ ಕಾಲಿಟ್ಟರೂ ರಾಡಿ ರಾಡಿ ನಿಮ್ಮ ಕಣ್ಣಿಗೆ ಕಾಣಸಿಗುತ್ತದೆ. ರಸ್ತೆಗಳ ತುಂಬಾ ತಗ್ಗು ದಿಣ್ಣೆಗಳು, ರಸ್ತೆಯಲ್ಲಿ ಗುಂಡಿಗಳಿವೆಯೋ, ಗುಂಡಿಯಲ್ಲಿಯೇ ರಸ್ತೆಗಳಿವೆಯೋ ಎನ್ನುವ ಅನುಮಾನ ರಸ್ತೆಗಳನ್ನು ನೋಡಿದಾಗ ಮೂಡುವುದು ಸಹಜ. ಹುಬ್ಬಳ್ಳಿಯ ವಾಣಿಜ್ಯ ಕೇಂದ್ರ ಭಾಗದ ರಸ್ತೆಗಳೇ ಸಂಪೂರ್ಣ ಹಾಳಾಗಿವೆ.

ಇದನ್ನೂ ಓದಿ: ಹೆಸ್ಕಾಂನ ವಿದ್ಯುತ್ ಗ್ರಿಡ್ ವಿವಾದ: ಧಾರವಾಡದ ಪಾರಂಪರಿಕಾ ಕಟ್ಟಡಗಳಿಗೆ ಧಕ್ಕೆ ಆತಂಕ

ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳು ಸಂಪೂರ್ಣ ಗುಂಡಿಗಳಿಂದ ತುಂಬಿ ಹೋಗಿವೆ. ಕೊಪ್ಪಿಕರ ರಸ್ತೆ, ದಾಜೀಬಾನ್ ಪೇಟೆ, ಮರಾಠಾ ಗಲ್ಲಿ, ಶಹಾ ಬಜಾರ್, ದುರ್ಗದ ಬೈಲು, ಬಾಬಾಸಾನ್ ಗಲ್ಲಿ, ಜವಳಿ ಸಾಲು, ಸಿಬಿಟಿ ಮುಖ್ಯ ರಸ್ತೆ, ಗಣೇಶ ಪೇಟೆ ರಸ್ತೆ ಸೇರಿದಂತೆ ಬಹುತೇಕ ರಸ್ತೆಗಳು ಅಧೋಗತಿಯಾಗಿವೆ. ನಗರದ ಬಹುತೇಕ ರಸ್ತೆಗಳು ಕೆಸರು ಗದ್ದೆಗಳಾಗಿ ಮಾರ್ಪಟ್ಟಿವೆ. ನಗರದ ಬೇರೆ ಕಡೆಯ ರಸ್ತೆಗಳದ್ದೂ ಇದೇ ಕಥೆಯಾಗಿದೆ.

ಹುಬ್ಬಳ್ಳಿಯ ರಸ್ತೆಗಳಲ್ಲಿ ವಾಹನ ಸಂಚಾರ ಮಾಡುವುದೆಂದ್ದರೆ ದೊಡ್ಡ ಸರ್ಕಸ್ ಎನ್ನುವ ಸ್ಥಿತಿ ಇದೆ. ಪಾದಚಾರಿಗಳಿಂಗೆ ರಸ್ತೆಗಳಲ್ಲಿ ಓಡಾಡೋದೆ ದೊಡ್ಡ ಕಷ್ಟವಾಗಿದೆ. ಬೇರೆ ಬೇರೆ ಊರುಗಳಿಂದ ವಸ್ತುಗಳ ಖರೀದಿಗೆ ಬಂದವರು ರಸ್ತೆಗಳನ್ನು ನೋಡಿ ವಾಕರಿಕೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಗಳ ದುಸ್ಥಿತಿಯನ್ನು ನೋಡಿ ಹುಬ್ಬಳ್ಳಿಯ ಸಹವಾಸವೇ ಬೇಡ ಅಂತಿದಾರೆ ಪರ ಊರಿನಿಂದ ಬಂದ ಜನ. ಇನ್ನೂ ಪಾಲಿಕೆ ಮೇಯರ್ ಅವರನ್ನ ಕೇಳಿದರೆ ಹೇಳುವುದೇ ಬೇರೆ.

ಇದನ್ನೂ ಓದಿ: ಜೆಪಿ ನಡ್ಡಾ ವಿರುದ್ಧದ ಎಫ್​ಐಆರ್ ರದ್ದು; ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠ ತೀರ್ಪು

ಯಾರೇ ಅಧಿಕಾರಕ್ಕೆ ಬಂದರೂ ವಾಣಿಜ್ಯ ನಗರಕ್ಕೆ ಏನೂ ಮಾಡಿಲ್ಲ. ಕನಿಷ್ಟ ಮೂಲಭೂತ ಸೌಲಭ್ಯ ಕಲ್ಪಿಸಲೂ ಆಗಲ್ಲವೆಂದರೆ ಯಾರಿಗೆ ಮತ ಹಾಕಿದ್ರೂ ಏನು ಪ್ರಯೋಜನೆ ಅನ್ನೋ ಪ್ರಶ್ನೆ ಜನತೆಯದ್ದಾಗಿದೆ. ನೂತನ ಸಿಎಂ ಸಿದ್ದರಾಮಯ್ಯರಿಂದಲಾದ್ರೂ ರಸ್ತೆಗಳು ಸುಧಾರಿಸುತ್ತವೆಯಾ ಎಂದು ಹುಬ್ಬಳ್ಳಿಗರು ಪ್ರಶ್ನೆ ಮಾಡುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.