ಬಾರಿ ಗಾಳಿ, ಮಳೆಗೆ ಚಿಕ್ಕಮಗಳೂರಿನಲ್ಲಿ ಉರುಳಿತು ಬೃಹತ್ ಮರ, ವಿದ್ಯುತ್ ಕಂಬ! ಕೂದಳೆಲೆ ಅಂತರದಲ್ಲಿ ಕಾರಿನಲ್ಲಿದ್ದವರು ಪಾರು

| Updated By: sandhya thejappa

Updated on: May 05, 2022 | 12:43 PM

ಮರ ಹಾಗೂ ವಿದ್ಯುತ್ ಕಂಬ ಕಾರಿನ ಮುಂಭಾಗ ಬಿದ್ದಿದ್ದರಿಂದ ಕಾರಿನಲ್ಲಿದ್ದ ಐವರು ಬಚಾವ್ ಆಗಿದ್ದಾರೆ. ರಸ್ತೆಯಲ್ಲಿ ಕಾರಿನ ಮೇಲೆ ಮರ ಬಿದ್ದ ಪರಿಣಾಮ ಬಾಳೆಹೊನ್ನೂರು-ಕೊಟ್ಟಿಗೆಹಾರ ಮಾರ್ಗ ಕೂಡ ಕೆಲ ಕಾಲ ಬಂದ್ ಆಗಿತ್ತು.

ಬಾರಿ ಗಾಳಿ, ಮಳೆಗೆ ಚಿಕ್ಕಮಗಳೂರಿನಲ್ಲಿ ಉರುಳಿತು ಬೃಹತ್ ಮರ, ವಿದ್ಯುತ್ ಕಂಬ! ಕೂದಳೆಲೆ ಅಂತರದಲ್ಲಿ ಕಾರಿನಲ್ಲಿದ್ದವರು ಪಾರು
ಕಾರಿನ ಮೇಲೆ ಬಿದ್ದ ಬೃಹತ್ ಮರ
Follow us on

ಚಿಕ್ಕಮಗಳೂರು: ಭಾರಿ ಗಾಳಿ, ಮಳೆಗೆ ಬೃಹತ್ ಮರ (Tree) ಹಾಗೂ ವಿದ್ಯುತ್ ಕಂಬ (Electric Pole) ಕಾರಿನ ಮೇಲೆ ಬಿದ್ದರೂ ಕಾರಿನಲ್ಲಿದ್ದವರು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮದಲ್ಲಿ ನಡೆದಿದೆ. ಮೂಡಿಗೆರೆ ತಾಲೂಕಿನಲ್ಲಿ ನಿನ್ನೆ (ಮೇ 04) ಸಂಜೆಯಿಂದಲೂ ಮಳೆಯಾಗುತ್ತಿದೆ. ಕಳೆದ ರಾತ್ರಿ ಕೊಟ್ಟಿಗೆಹಾರ, ಬಾಳೂರು, ಬಣಕಲ್, ಚಾರ್ಮಾಡಿ ಘಾಟ್ ಭಾಗದಲ್ಲಿ ಭಾರಿ ಮಳೆಯಾಗಿದೆ. ಇಂದು ಬೆಳಿಗ್ಗೆ ಬೀಸಿದ ಭಾರಿ ಗಾಳಿಗೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರಿನ ಮೇಲೆ ರಸ್ತೆ ಬದಿಯ ಬೃಹತ್ ಮರ ಹಾಗೂ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಆದರೆ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮರ ಹಾಗೂ ವಿದ್ಯುತ್ ಕಂಬ ಕಾರಿನ ಮುಂಭಾಗ ಬಿದ್ದಿದ್ದರಿಂದ ಕಾರಿನಲ್ಲಿದ್ದ ಐವರು ಬಚಾವ್ ಆಗಿದ್ದಾರೆ. ರಸ್ತೆಯಲ್ಲಿ ಕಾರಿನ ಮೇಲೆ ಮರ ಬಿದ್ದ ಪರಿಣಾಮ ಬಾಳೆಹೊನ್ನೂರು-ಕೊಟ್ಟಿಗೆಹಾರ ಮಾರ್ಗ ಕೂಡ ಕೆಲ ಕಾಲ ಬಂದ್ ಆಗಿತ್ತು. ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿದ್ದ ಕೃಷ್ಣ, ಮಂಜುನಾಥ್, ಸಚಿನ್ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯರು ಹಾಗೂ ಪೊಲೀಸರು ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿ ರೋಡ್ ಕ್ಲಿಯರ್ ಮಾಡಿದ್ದಾರೆ. ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿದ್ದ ಮರವನ್ನು ತೆರವುಗೊಳಿಸುತ್ತಿದ್ದಾರೆ.

ಕುಸಿದ ಸೇತುವೆ:
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಣವೆಬಿಳಚಿ ಬಳಿ ಭಾರಿ ಮಳೆಯಿಂದ ಸೇತುವೆ ಕುಸಿದುಬಿದ್ದಿದೆ. ಕಣವೆಬಿಳಚಿ ಸುತ್ತಮುತ್ತಲಿನ ಹತ್ತಾರು ಗ್ರಾಮಸ್ಥರು ಪರದಾಟ ಪಡುತ್ತಿದ್ದಾರೆ. ನಿನ್ನೆ ರಾತ್ರಿ ಸುರಿದ ಮಳೆಗೆ ಸೇತುವೆ ಕುಸಿದುಬಿದ್ದಿದೆ.

ಹಾರಿ ಹೋದ ಸಂತ್ರಸ್ತರ ತಾತ್ಕಾಲಿಕ ಶೆಡ್‌ಗಳು:
ಇನ್ನು ಬಾಗಲಕೋಟೆ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಗಾಳಿ ಸಹಿತ ಭಾರಿ ಮಳೆ ಸುರಿದಿದೆ. ಪರಿಣಾಮ ಬೀಳಗಿ ತಾಲೂಕಿನ ಕೊರ್ತಿಯಲ್ಲಿ ಸಂತ್ರಸ್ತರ ತಾತ್ಕಾಲಿಕ ಶೆಡ್‌ಗಳು ಹಾರಿ ಹೋಗಿವೆ. ರಸ್ತೆಯ ಅಕ್ಕಪಕ್ಕದಲ್ಲಿದ್ದ ಪ್ರವಾಹ ಸಂತ್ರಸ್ತರ ನೂರಕ್ಕೂ ಹೆಚ್ಚು ಶೆಡ್​ಗೆ ಹಾನಿಯಾಗಿದೆ.

ಇದನ್ನೂ ಓದಿ

ಆಗಾಗ ಅರುಂಧತಿ: ಭಾವಸಮಾಧಿಗೆ ಜಾರಿದಾಗ ಅರಿವಿಲ್ಲದೆ ಸಂತೋಷದಿಂದ ಕಣ್ಣೀರಿಳಿಯುತ್ತಿತ್ತು

ಹಾಸನದ ಹೇಮ ಗಂಗೋತ್ರಿ ಟ್ರಕ್‌ ಟರ್ಮಿನಲ್‌ ದಂಗಲ್‌; ರಾಜಕೀಯ ಜಿದ್ದಾಜಿದ್ದು ಶಮನಕ್ಕೆ ಎಚ್ಚರಿಕೆ ಹೆಜ್ಜೆ ಇಟ್ಟ ಸರ್ಕಾರ

Published On - 12:32 pm, Thu, 5 May 22