ಆಗಾಗ ಅರುಂಧತಿ: ಭಾವಸಮಾಧಿಗೆ ಜಾರಿದಾಗ ಅರಿವಿಲ್ಲದೆ ಸಂತೋಷದಿಂದ ಕಣ್ಣೀರಿಳಿಯುತ್ತಿತ್ತು

Love : ಪ್ರೀತಿಯಲ್ಲಿ ಸೋತು ಹೋದವರು, ಎಲ್ಲದರಲ್ಲಿಯೂ ಸೋತು ಹೋಗುತ್ತಾರೆ. ಇದೇನಿದು ಹೀಗೆ ಮುಂದೆ ಹೋಗುತ್ತಿದ್ಧಾಳೆ. ಮಂಕಾಗಿದ್ದವಳು ಇದ್ದಕ್ಕಿದ್ದಂತೆ ಆತನ ಮದುವೆ ಬೇರೆಯವಳೊಂದಿಗೆ ಆಗುತ್ತಲೇ ಏಕಿಷ್ಟು ಚೂಟಿಯಾದಳು?

ಆಗಾಗ ಅರುಂಧತಿ: ಭಾವಸಮಾಧಿಗೆ ಜಾರಿದಾಗ ಅರಿವಿಲ್ಲದೆ ಸಂತೋಷದಿಂದ ಕಣ್ಣೀರಿಳಿಯುತ್ತಿತ್ತು
ಸೌಜನ್ಯ : ಅಂತರ್ಜಾಲ
Follow us
ಶ್ರೀದೇವಿ ಕಳಸದ
|

Updated on:May 05, 2022 | 12:14 PM

ಆಗಾಗ ಅರುಂಧತಿ : ಆ ಲಂಪಟ ಪ್ರೊಫೆಸರ್ ಹೆಂಡತಿ ಎರಡು ದಿನಗಳ ಹಿಂದೆ ದೇವಸ್ಥಾನದ ಬಳಿ ಬರೋದಕ್ಕೆ ಹೇಳಿದರು. ನಾನು ಅಮ್ಮನೊಂದಿಗೆ ಹೋದೆ. ಆದರೆ ತನ್ನದೇನೂ ತಪ್ಪಿಲ್ಲವೆಂದೇ ವಾದಿಸಿದ. ಚಪ್ಪಲಿಯಿಂದ ಹೊಡೆದೆ. ಅವನ ಹೆಂಡತಿಯೂ ಹೊಡೆದಳು. ಅಲ್ಲಿಗೆ ಆ ಅಧ್ಯಾಯ ಮುಗಿಯಿತು. ಇನ್ನು ಇನ್ನೊಬ್ಬನಿದ್ದಾನಲ್ಲ ಶೋಕಿಲಾಲ! ಅವನ  ಹುಟ್ಟಡಗಿಸಿದೆ ಎಂದು ಬೀಗುತ್ತಿದ್ದಾಗಲೇ ಡಿಗ್ರಿ ಕೊನೆಯ ಸೆಮಿಸ್ಟರ್​ನಲ್ಲಿ ಟ್ರಿಪ್ಪು ಏರ್ಪಡಿಸಿದ್ದ ನೆನಪು ನುಗ್ಗಿಬಂತು. ಸತತ ಒಂದೂವರೆ ವರ್ಷಗಳಿಂದ ಆ ಶೋಕೀಲಾಲನ ಮಾತುಗಳಿಂದ ಬೇಸತ್ತು ಹೋಗಿದ್ದೆ. ಆದರೂ ಅವನ ಅಜ್ಜ ಅಜ್ಜಿ ನನ್ನನ್ನು ನನ್ನಮ್ಮನ ಹೊಟ್ಟೆಯಲ್ಲಿದ್ದಾಗಲೇ ಕಾಪಾಡಿದ್ದರಿಂದ ತಡೆದುಕೊಂಡಿದ್ದೆ. ಕೊನೆಗೂ ಓಡಿಸಿಬಿಟ್ಟೆ. ಅವ ಬೇರೆ ಮದುವೆಯಾದ. ಅದೇನೂ ನನಗೆ ವಿಷಾದವೆನಿಸಲಿಲ್ಲ. ಬದಲಿಗೆ ನಿರಾಳವೆನಿಸಿತು. ಕೈಕಾಲನ್ನು ಕಟ್ಟಿದ್ದ ಹಗ್ಗ ಬಿಚ್ಚಿದಂತೆ. ಕಟ್ಟಿಹಾಕಿದ್ದ ರೆಕ್ಕೆಗಳನ್ನ ಪುನಾ ಹಾರಲು ಬಿಟ್ಟಂತೆ. ಭೋರ್ಗರೆವ ನದಿಯನ್ನು ಹರಿಯಲು ಬಾರದಂತೆ ತಡೆಯಲು ಕಟ್ಟಿರುವ ಅಣೆಕಟ್ಟನ್ನು ಒಡೆದಂತೆ. ಕೊನೆಯ ಸೆಮಿಸ್ಟರಿನ ಇಂಟರ್ನಲ್ಲುಗಳನ್ನು ಮುಗಿಸಿದವಳು ಜಿಗಿದದ್ದು ಕೆಮ್ಮಣ್ಣಗುಂಡಿ ಟ್ರಿಪ್ಪಿಗೆ. ಅರುಂಧತಿ (Arundhathi) 

(ಸತ್ಯ 3)

ಅಲ್ಲಿಂದ ನನ್ನದು ನಿಲ್ಲದ ಪ್ರವಾಸ . ಅದೇ ತಿಂಗಳಿನಲ್ಲಿ ನನ್ನ ಪ್ರಥಮ ಕವನ ಸಂಕಲನ ಬಿಡುಗಡೆ . ಡಿಗ್ರಿಯಲ್ಲಿ ರ್ಯಾಂಕ್ ಗಳಿಸಿ, ದಿನಪತ್ರಿಕೆಗಳ ತುಂಬಾ ಕಾಲೇಜಿನ ಫ್ಲೆಕ್ಸ್​ಗಳ ತುಂಬ ನನ್ನ ಹೆಸರು ರಾರಾಜಿಸಿದ್ದು ಈಗ ಇತಿಹಾಸ. ಮುಂದೆ ಯೂನಿವರ್ಸಿಟಿಗೆ ತೆರಳಲು ಪ್ರವೇಶ ಪರೀಕ್ಷೆ ಬರೆಯಬೇಕಿತ್ತು. ಮೊದಲ ಸುತ್ತಿನಲ್ಲಿಯೇ ಸೀಟು ಸಿಕ್ಕಿತು. ನನ್ನ ಕೆಲವು ಸಂಬಂಧಿಕರಿಗೆ, ಕೆಲ ಗೆಳತಿಯರಿಗೆ ಇದು ತುಂಬಾ ಅಚ್ಚರಿಯಾಗಿತ್ತು. ಪ್ರೀತಿಯಲ್ಲಿ ಸೋತು ಹೋದವರು, ಎಲ್ಲದರಲ್ಲಿಯೂ ಸೋತು ಹೋಗುತ್ತಾರೆ. ಇದೇನಿದು ಹೀಗೆ ಮುಂದೆ ಹೋಗುತ್ತಿದ್ಧಾಳೆ.  ಮಂಕಾಗಿದ್ದವಳು ಇದ್ದಕ್ಕಿದ್ದಂತೆ ಆತನ ಮದುವೆ ಬೇರೆಯವಳೊಂದಿಗೆ ಆಗುತ್ತಲೇ ಏಕಿಷ್ಟು ಚೂಟಿಯಾದಳು? ಆದರೆ ಅವರೆಲ್ಲರಿಗೂ ತಿಳಿದಿಲ್ಲ ‘ಆತ ನನ್ನನ್ನ ಹೇಗೆ ಕಟ್ಟಿ ಹಾಕಿದ್ದನೆಂದು! ನನಗಿರುವಷ್ಟು ಅಸ್ತಿತ್ವ, ಜನರ ಒಡನಾಟ ತನಗೆ ಇಲ್ಲವೆಂದು ಹೇಗೆ ಕರುಬುತ್ತಿದ್ದನೆಂದು, ನನ್ನನ್ನು ಹೊರಗೆ ಹೋಗದಂತೆ ತಡೆಯುತ್ತಿದ್ದನು ಎಂದು.’

ನನಗೆ ಯೂನಿವರ್ಸಿಟಿ ಹಾಸ್ಟೆಲ್ ಕೂಡ ದೊರಕಿತು. ನನ್ನ ನೆಚ್ಚಿನ ನಾಯಕ ನಟ ಪುನೀತ್ ರಾಜ್​ಕುಮಾರ್ ತಮ್ಮ ಚಿತ್ರದ ಶೂಟಿಂಗ್​ಗಾಗಿ ಯೂನಿವರ್ಸಿಟಿಗೆ ಬಂದಿದ್ದರು, ಅವರ ಕೈಕುಲುಕುವ ಸೌಭಾಗ್ಯ ಕೂಡ ನನಗೆ ದೊರಕಿತ್ತು. ಅವರ ಅಂಗರಕ್ಷಕರು ಫೋಟೋ ತೆಗೆಯ ಕೊಡಲಿಲ್ಲ ಏಕೆಂದರೆ ವಿದ್ಯಾರ್ಥಿಗಳ ದಂಡೇ ಸುತ್ತುವರಿದಿತ್ತು ಅವರ ಸುತ್ತ. ಅದೆಷ್ಟು ನನಗೆ ಆತ್ಮವಿಶ್ವಾಸವೆಂದರೆ… ಸರಿಬಿಡಿ ಈಗ ಇಲ್ಲದಿದ್ದರೆ ಇನ್ನೊಮ್ಮೆ ತೆಗೆದುಕೊಳ್ಳುತ್ತೇನೆ ಎಟ್ಲೀಸ್ಟ್ ಕೈಕುಲುಕಲು ಸಾಧ್ಯವಾಯಿತಲ್ಲ ಎಂದುಕೊಳ್ಳುತ್ತ ಹಾಸ್ಟೆಲಿನತ್ತ ನಡೆದಿದ್ದೆ. ಆದರೆ ಯಾರಿಗೆ ಗೊತ್ತು? ಇಷ್ಟು ಬೇಗ ಹೊರಟುಬಿಡುತ್ತಾರೆ ಎಂದು.

ನಾನೇನು ಅಷ್ಟು ಸುಂದರಿಯಲ್ಲ ಎಂದು ನಾನು ಎಣಿಸಿದ್ದೆ ಡಿಗ್ರಿಯಲ್ಲಿ, ಏಕೆಂದರೆ ‘ಫಾರ್ ಫ್ರಮ್ ದಿ ಮ್ಯಾಡಿಂಗ್ ಕ್ರೌಡ್’ ಕಾದಂಬರಿಯಲ್ಲಿ ಬರುವ ಟ್ರಾಯ್ ಫ್ರಾನ್ಸಿಸ್ ನಂಥ ಹುಡುಗನಿಂದಾಗಿ. ಆದರೆ ಯೂನಿವರ್ಸಿಟಿಗೆ ಹೋದಾಗ ನಾನೇ ಸುಂದರಿಯಾಗಿದ್ದೆ ಎಂದು ತಿಳಿಯಿತು. ಅದು ಹೇಗೆ ನನಗೆ ತಿಳಿಯಿತೆಂದರೆ, ಗ್ರೂಪಿನಲ್ಲಿ ನಂಬರ್ ತೆಗೆದುಕೊಂಡು ಮೆಸೇಜು ಮಾಡುವ ಹುಡುಗರು, ಕಾಲ್ ಮಾಡುವ ಹುಡುಗರು ಕಾರಿಡಾರಿನಲ್ಲಿ ಹೊರಟಾಗ ಹಾಡು ಹೇಳುವ ಹುಡುಗರು ಸಿಕ್ಕಾಪಟ್ಟೆ ಕಾಡಿಸುವ ಹುಡುಗರು, ಆದರೆ ಯಾರನ್ನೂ ನಾನು ತಿರುಗಿಯೂ ನೋಡಲಿಲ್ಲ. ನನಗೆ ಅವರ ವರಸೆ ಅವರ ಸ್ವಭಾವ ಸ್ವಲ್ಪ ಕೂಡ ಇಷ್ಟವಾಗಲಿಲ್ಲ. ಅದು ಅವರನ್ನು ಇನ್ನಷ್ಟು ರೊಚ್ಚಿಗೆಬ್ಬಿಸಿತು. ಆದರೆ ನಾನು ಯಾರನ್ನೂ ನೋಡಲೇ ಇಲ್ಲವೆಂದಲ್ಲ. ನಾನು ಅಲ್ಲಿ ನೋಡಿದ್ದು ಒಬ್ಬರನ್ನು ಮಾತ್ರ. ಬಿಡಿ ಮತ್ತೆ ಯಾಕೆ ಕೆಟ್ಟ ನೆನಪು?

ಪಿಜಿ ಓದಲು ಬಂದಾಗ ಮತ್ತೊಬ್ಬ ನನ್ನ ಮನಸ್ಸನ್ನಾವರಿಸಿಕೊಂಡ. ಹೌದು ಆತ ಪ್ರತಿಭಾವಂತ ವಿದ್ಯಾರ್ಥಿಯಂತೆ ಕಾಣಿಸುತ್ತಿದ್ದ. ಮೂರು ವರ್ಷ ಪಾಠ ಮಾಡಿ ಬಂದ ಚಿಕ್ಕ ಪ್ರೊಫೆಸರ್ ಕೂಡ. ಆತ ಅಲ್ಲಿ ಪಿಎಚ್. ಡಿ ಮಾಡುತ್ತಿದ್ದ. ಮೊದಲು ಅವನೇ ನನ್ನನ್ನು ಮಾತನಾಡಿಸಿದ್ದು. ಅಂದು ಬೆಳಗ್ಗೆ ಕ್ಲಾಸಿನಲ್ಲಿ ನಾನು ನನ್ನ ಮೂವರು ಗೆಳತಿಯರೊಂದಿಗೆ ಇದ್ದೆ. ಬಂದವನು ಹಸನ್ಮುಖದಿಂದ ನನಗೆ ಹಾಯ್ ಎಂದ. ಅಷ್ಟೆ, ಆತನನ್ನು ಯಾರೋ ಕರೆದುಕೊಂಡು ಹೋದರು. ಅವರು ಅವನಿಗೆ, ‘ಅಯ್ಯೋ ಸರ್, ಇವಳೆ? ಇವಳು ನೋಡಲು ಅತಿಲೋಕ ಸುಂದರಿಯಂತೆ ಇದ್ದಾಳೆ. ಎಲ್ಲರನ್ನು ಬರೀ ನೋಟದಲ್ಲೇ ಮರುಳು ಮಾಡುತ್ತಾಳೆ. ಇವಳೂರಿನ ಹುಡುಗ ನನ್ನ ಫ್ರೆಂಡ್. ಅವನನ್ನು ತಳ್ಳಿ ಇಲ್ಲಿ ಬಂದಿದ್ದಾಳೆ. ರ್ಯಾಂಕ್​ ಕೂಡ ಬಂದಿದ್ದಾಳೆ ಅಂತ ಸೊಕ್ಕು ಬೇರೆ ಅವಳಿಗೆ’ ಎಂದು ಮಾತನಾಡಿಕೊಳ್ಳುತ್ತ ಹೋಗುವುದು ನನಗೆ ಕೇಳಿಸಿತು. ಆ ಪಿಎಚ್​.ಡಿ ಮೇಧಾವಿ ಮುಸಲ್ಮಾನ . ಆದರೆ ನನಗೆಂದೂ ಆತ ಮುಸಲ್ಮಾನ ಹಿಂದೂ ಎಂಬ ಭಾವ ಹುಟ್ಟಲೇ ಇಲ್ಲ. ಆತನಂತಾಗಬೇಕು ಆತನಂತೆ ನೆಟ್, ಕೆ.ಸೆಟ್ ಗಳನ್ನು ಕ್ಲಿಯರ್ ಮಾಡಬೇಕು. ಆತನಂತೆ ಪಿಎಚ್​.ಡಿ ಮಾಡಬೇಕು. ಆತನಷ್ಟು ಪ್ರತಿಭಾವಂತೆಯಾಗಬೇಕು, ಆತನಂತೆಯೇ ಪ್ರೊಫೆಸರ್ ಆಗಬೇಕು ಎಂಬ ಕನಸುಗಳನ್ನು ಬಿಟ್ಟು ನನಗೆ ಏನೂ ಕಾಣಿಸುತ್ತಿರಲಿಲ್ಲ.

ಇದನ್ನೂ ಓದಿ : ಅಮಾರೈಟ್ : ‘ಎಲ್ಲವನ್ನೂ ನಿನ್ನಲ್ಲೇ ಗಿರವಿ ಇಟ್ಟಿರುವಾಗ ಏನನ್ನ ಮಾರಿಕೊಂಡರೆ ಈ ‘ಪುರುಸೊತ್ತುʼ ಖರೀದಿಸಬಹುದು’

ಆತನನ್ನು ನನ್ನ ಹೃದಯದಲ್ಲಿ ಆರಾಧ್ಯ ಮೂರ್ತಿಯಂತೆ ಚಿತ್ರಿಸಿಕೊಳ್ಳುವ ಅವಶ್ಯಕತೆ ನನಗೆ ತುಂಬಾ ಇತ್ತು. ಏಕೆಂದರೆ ಆತನನ್ನು ನಾನು ಹೃದಯದಲ್ಲಿ ಇರಿಸಿಕೊಳ್ಳದಿದ್ದರೆ, ಸಲೀಸಾಗಿ ಕ್ಲಾಸಿನಲ್ಲಿರುವ ಯಾವುದಾದರೊಬ್ಬ ಪುಂಡನಿಗೆ ಮನಸ್ಸು ಕೊಡುವ ಸಾಧ್ಯತೆ ನನಗರಿವಿಲ್ಲದೆ ನಡೆದುಬಿಟ್ಟರೆ! ವಯಸ್ಸೆನ್ನುವುದು ಕೆಲವೊಮ್ಮೆ ನಮ್ಮ ಮನಸ್ಸಿಗಿಂತ ಹೆಚ್ಚು ವೇಗದಲ್ಲಿ ಓಡುತ್ತಿರುತ್ತದೆ. ಆಗ ಹೀಗೆ ಬುದ್ಧಿವಂತಿಕೆಯಿಂದ ಚೆಂದದ ಉಪಾಯವನ್ನು ನಾವೇ ಕಂಡುಕೊಳ್ಳಬೇಕು. ದಿನವೂ ಕಾರಿಡಾರಿನಲ್ಲಿ ನೋಡುತ್ತಿದ್ದೆ ಆತನನ್ನು. ಏಕೆಂದರೆ ದುಬಾರಿ ವಾಚನ್ನು ದುಬಾರಿ ಶೂಗಳನ್ನು ಬಳಸುತ್ತೇನೆ ನೋಡು ಎಂದು ತೋರಿಸಿಕೊಳ್ಳುವ ಹಾಗೂ ಟ್ರಾಯ್ ಫ್ರಾನ್ಸಿಸ್​ನಂತೆ ನನ್ನ ಬಗೆಗೆ ನನಗೆ ಜಿಗುಪ್ಸೆ ಹುಟ್ಟುವಂತೆ ಮಾಡುತ್ತಿದ್ದ ಆ ಹುಡುಗನಿಗೂ, ಸದಾ ಗಂಭೀರ ಮತ್ತು ಪ್ರಸನ್ನವದನನಾಗಿರುವ ಈ ಮೇಧಾವಿಗೂ ಎಷ್ಟು ಅಂತರವಿದೆ ಎಂದು ಸೋಜಿಗವಾಗುತ್ತಿತ್ತು.

ಕೆಲವೊಮ್ಮೆ ಸಂತೋಷದಿಂದ ನನಗೇ ತಿಳಿಯದಂತೆ ಭಾವಸಮಾಧಿಗೆ ಜಾರಿ ಕಣ್ಣೀರಿಳಿಯುತ್ತಿತ್ತು. ಯಾರನ್ನೂ ನೋಡದ ನಾನು ಆತನನ್ನು ಮಾತ್ರ ನೋಡುತ್ತೇನೆ ಎಂದು ಗೆಳತಿಗೆ ಮಾತ್ರ ತಿಳಿದಿತ್ತು. ಆದರೆ ಆತ ನನ್ನನ್ನು ನೋಡಿದವನೇ ತಲೆ ತಲೆತಗ್ಗಿಸುತ್ತಿದ್ದ. ಹೇಗಾದರೂ ಮಾಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ. ಆದರೆ ಆತನಿಗೆ ಯಾರು ಹೇಳಬೇಕು ನಾನೇಕೆ ನನ್ನ ಮೊದಲ ಪ್ರೀತಿಯನ್ನು ಕೊಂದೆನೆಂದು! ಹೇಳುವವರಾರು?

(ಮುಂದುವರಿಕೆ ಅರುಂಧತಿ ಬರೆದಾಗ)

ಈ ಅಂಕಣದ ಎಲ್ಲಾ ಭಾಗಗಳನ್ನೂ ಇಲ್ಲಿ ಓದಿ : https://tv9kannada.com/tag/aagaaga-arundhathi

Published On - 12:11 pm, Thu, 5 May 22

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ