ಚಿಕ್ಕಮಗಳೂರು: ಚಿನ್ನದ ವರ್ತಕನ ಪುತ್ರನನ್ನು ಬೆದರಿಸಿ ಪೊಲೀಸರಿಂದಲೇ 5 ಲಕ್ಷ ರೂ ದರೋಡೆ…!
ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ಪೊಲೀಸ್ ಠಾಣಾಧಿಕಾರಿ ಸೇರಿ ನಾಲ್ವರು ಪೊಲೀಸರು ಚಿನ್ನದ ವರ್ತಕನ ಪುತ್ರನನ್ನು ಬೆದರಿಸಿ 5 ಲಕ್ಷ ರೂ. ದರೋಡೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು: ರಕ್ಷಣೆ ಮಾಡಬೇಕಾದ ಆರಕ್ಷಕನೇ ಭಕ್ಷಕನಾಗಿದ್ದಾನೆ. ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ಪೊಲೀಸ್ ಠಾಣಾಧಿಕಾರಿ ಸೇರಿ ನಾಲ್ವರು ಪೊಲೀಸರು ಚಿನ್ನದ ವರ್ತಕನ ಪುತ್ರನನ್ನು ಬೆದರಿಸಿ 5 ಲಕ್ಷ ರೂ. ದರೋಡೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಬೇಲಿನೆ ಎದ್ದು ಹೊಲ ಮೇದಂತಾಗಿದೆ. ದಾವಣಗೆರೆ ಮೂಲದ ಚಿನ್ನದ ವರ್ತಕ ಭಗವಾನ್ ಪುತ್ರ ರೋಹಿತ್ ಚಿಕ್ಕಮಗಳೂರಿನಲ್ಲಿ ಚಿನ್ನದ ವ್ಯಾಪಾರ ಮಾಡುತ್ತಿದ್ದಾರೆ.
ಮೇನಲ್ಲಿ ಭಗವಾನ್ ಪುತ್ರ ರೋಹಿತ್ 2 ಕೆ.ಜಿ. ಚಿನ್ನವನ್ನ ಬೇಲೂರಿನ ವರ್ತಕರಿಗೆ ನೀಡಲು ಹೋಗುವಾಗ ಪೊಲೀಸರು ರೋಹಿತ್ಗೆ 10 ಲಕ್ಷ ರೂ ನೀಡುವಂತೆ ಒತ್ತಾಯಿಸಿದ್ದಾರೆ. ಆಗ ಭಗವಾನ್ ಕಾನೂನುಬದ್ಧ ದಾಖಲೆಗಳನ್ನು ನೀಡಿದರೂ ಪೊಲೀಸರು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ರೋಹಿತ್ ಅಂತಿಮವಾಗಿ 5 ಲಕ್ಷ ನೀಡಿದ್ದಾರೆ.
ಬಳಿಕ ವರ್ತಕ ಭಗವಾನ್ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ವರ್ತಕ ಭಗವಾನ್ ದೂರಿನನ್ವಯ ಎಫ್.ಐ.ಆರ್ ದಾಖಲಾಗಿದೆ. ಠಾಣಾಧಿಕಾರಿ ಲಿಂಗರಾಜು, ಸಿಬ್ಬಂದಿಗಳಾದ ಧನಪಾಲ್, ಓಂಕಾರ ಮೂರ್ತಿ, ಶರತ್ ರಾಜ್ ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.
ಚೈನಾ ಡಿವೈಸ್ ಮಾರಾಟ ಮಾಡುತ್ತಿದ್ದ ಖದೀಮರ ಬಂಧನ
ಬೆಂಗಳೂರು: ಚೈನಾ ಡಿವೈಸ್ ಮಾರಾಟ ಮಾಡುತ್ತಿದ್ದ ಖದೀಮರನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ಮಹೇಶ್, ಮೇಘನಾಥ್ ಬಂಧಿತ ಆರೋಪಿಗಳು. ಆರೋಪಿಗಳು ಅಂದರ್ ಬಾಹರ್ ಜೂಜೂಟದಲ್ಲಿ ಕಣ್ಣಿಗೆ ಲೆನ್ಸ್ ಹಾಕಿ ಎದುರು ಆಟಗಾರನ ಕಾರ್ಡ್ ಸ್ಕ್ಯಾನ್ ಮಾಡುತ್ತಿದ್ದರು. ಇದರಿಂದ ಎದುರು ಆಟಗಾರ ಯಾವ ಕಾರ್ಡ್ ಫ್ಲೇ ಮಾಡುತ್ತಾನೋ ಅನ್ನೋದನ್ನು ತಿಳಿದುಕೊಳ್ಳಲು ಕಳ್ಳಾಟವಾಡುತ್ತಿದ್ದರು. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:52 pm, Sun, 20 November 22