ಚಿಕ್ಕಮಗಳೂರು: ಪ್ರೇಮ ವೈಫಲ್ಯಕ್ಕೆ ಮನನೊಂದು ಅಪ್ರಾಪ್ತೆ ಆತ್ಮಹತ್ಯೆ ಪ್ರಕರಣ; ಹಿಂದೂ ಮುಖಂಡ ನಿತೇಶ್ ಬಂಧನ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 17, 2023 | 5:11 PM

ಹಿಂದೂಪರ ಸಂಘಟನೆ ಮುಖಂಡ ಆರೋಪಿ ನಿತೇಶ್ ಹಾಗೂ ಆತನ ಪ್ರೇಯಸಿ ಇಬ್ಬರ ನಡುವೆ ಜಗಳವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನ ಇದೀಗ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಮಗಳೂರು: ಪ್ರೇಮ ವೈಫಲ್ಯಕ್ಕೆ ಮನನೊಂದು ಅಪ್ರಾಪ್ತೆ ಆತ್ಮಹತ್ಯೆ ಪ್ರಕರಣ; ಹಿಂದೂ ಮುಖಂಡ ನಿತೇಶ್ ಬಂಧನ
ಆರೋಪಿ ನಿತೇಶ್
Follow us on

ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲೂಕಿನ ಹಿಂದೂಪರ ಸಂಘಟನೆ ಮುಖಂಡ ಆರೋಪಿ ನಿತೇಶ್​ ಹಾಗೂ ಆತನ ಪ್ರೇಯಸಿ ಇಬ್ಬರು ಪ್ರೀತಿಸುತ್ತಿದ್ದು, ಇಬ್ಬರ ನಡುವೆ ಜಗಳವಾಗಿ ಮನನೊಂದು ಅಪ್ರಾಪ್ತ ಯುವತಿ ಜನವರಿ 15 ರಂದು ಆತ್ಮಹತ್ಯೆಗೆ ಶರಣಾಗಿದ್ದಳು. ನಂತರ ನಾಲ್ಕು ದಿನಗಳ ಬಳಿಕ ಚಿಕಿತ್ಸೆ ಫಲಿಸದೆ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಈ ಕುರಿತು ಯುವತಿ ಬರೆದಿಟ್ಟಿದ್ದ ಡೆತ್​ ನೋಟ್ ಆಧಾರದ ಮೇಲೆ ಆರೋಪಿ ವಿರುದ್ದ ಪೋಕ್ಸೊ ಕೇಸ್ ದಾಖಲಿಸಿ ಇದೀಗ ಆರೋಪಿಯನ್ನ ಬಂಧಿಸಿದ್ದಾರೆ.

ಯುವತಿ ಸಾಯುವ ಮುನ್ನ ಆಸ್ಪತ್ರೆ ಬೆಡ್ ಮೇಲೆ ಸಾವಿನ ಬಗ್ಗೆ ಡೆತ್ ನೋಟ್ ಬರೆದು ನಿತೇಶ್ ಬಗ್ಗೆ ಆರೋಪಿಸಿದ್ದಳು. ಈ ಕುರಿತು ಪ್ರಕರಣ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದ ಆರೋಪಿ ನಿತೇಶ್ ಇದೀಗ ಚಿಕ್ಕಮಗಳೂರು ನಗರದ ಬಸ್ ನಿಲ್ದಾಣದಲ್ಲಿ ಕುದುರೆಮುಖ ಪೊಲೀಸರ ಕೈಗೆ ಸಿಕ್ಕಿದ್ದಾನೆ.

ಇಂಡಿ: ತಡೆಗೋಡೆಗೆ ಬೈಕ್​ ಡಿಕ್ಕಿ ಇಬ್ಬರು ದುರ್ಮರಣ

ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ತಡವಲಗಾ ಗ್ರಾಮದ ಬಳಿ ಬೈಕ್ ಒಂದು ಸವಾರನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ತಡೆಗೋಡೆಗೆ ಡಿಕ್ಕಿಯಾಗಿ ಪ್ರಭು ಖ್ವಾಯಗೋಳ(34), ರಾಮಗೊಂಡ(24) ಎಂಬ ಯುವಕರು ಮೃತ ಪಟ್ಟಿದ್ದಾರೆ. ಇನ್ನು ಅಪಘಾತಕ್ಕೆ ಬೈಕ್ ಸವಾರನ ಅತೀ ವೇಗವೆ ಕಾರಣ ಎಂದು ಪೊಲೀಸರ ಶಂಕೆ ವ್ಯಕ್ತಪಡಿಸಿದ್ದು ಹೊರ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ:ದೇವನಹಳ್ಳಿ: ಆತ್ಮಹತ್ಯೆಗೆ ಯತ್ನಿಸುವಾಗ ಪಂಚೆ ಹರಿದು ಮರದ ಮೇಲಿಂದ ಬಿದ್ದು ಯುವಕ ಸಾವು

ದ್ವಿಚಕ್ರ ವಾಹನಕ್ಕೆ ಟಾಟಾ ಸುಮೊ ಡಿಕ್ಕಿ ಹಿನ್ನೆಲೆ; ಸುಮೊ ಚಾಲಕನನ್ನು ಎಳೆದೊಯ್ದ ದ್ವಿಚಕ್ರ ವಾಹನ ಸವಾರ

ಬೆಂಗಳೂರು: ದ್ವಿಚಕ್ರ ವಾಹನಕ್ಕೆ ಟಾಟಾ ಸುಮೊ ಡಿಕ್ಕಿಯಾಗಿದ್ದು, ಬೈಕ್​ ಹಿಂದೆ ಜೋತುಬಿದ್ದಿದ್ದ ಸುಮೊ ಚಾಲಕನನ್ನು
ಬೈಕ್​ ಸವಾರ ಸುಮಾರು ಒಂದೂವರೆ ಕಿಲೋಮೀಟರ್ ಎಳೆದೊಯ್ದಿದ್ದಾನೆ. ದ್ವಿಚಕ್ರ ವಾಹನ ಸುಜುಕಿ ಌಕ್ಸಿಸ್​ ಕಂಪನಿಯದ್ದಾಗಿದ್ದು ಕೆಎ 05, ಕೆಯು 0833 ಸಂಖ್ಯೆಯ ಯಾಸೀನ್​ ಮುಸಲೋಟಿಯಾ ಹೆಸರಲ್ಲಿ ದ್ವಿಚಕ್ರ ವಾಹನ ನೋಂದಣಿಯಾಗಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 5:10 pm, Tue, 17 January 23