AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಮಗಳೂರಿನಲ್ಲಿ ‘ಕೈ’ ನಾಯಕ ಅಕ್ಮಲ್ ಮನೆ ಮೇಲೆ ಐಟಿ ದಾಳಿ, ಕಾರ್ಯಕರ್ತರಿಂದ ಪ್ರತಿಭಟನೆ

ಕಾಂಗ್ರೆಸ್ ನಾಯಕರ ಮೇಲಿನ ತನಿಖಾ ಸಂಸ್ಥೆಗಳ ದಾಳಿ ಮುಂದುವರಿದಿದ್ದು, ಇಂದು ಚಿಕ್ಕಮಗಳೂರಿನಲ್ಲಿ ಕೆಪಿಸಿಸಿ ಕಿಸಾನ್ ಸೆಲ್ ಸಂಚಾಲಕ ಅಕ್ಮಲ್ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಆಕ್ರೋಶಗೊಂಡಿರುವ ಕಾಂಗ್ರೆಸ್, ನಾವೇ ಯಾಕೆ ಟಾರ್ಗೆಟ್? ಎಂದು ಪ್ರಶ್ನಿಸುತ್ತಿದೆ.

ಚಿಕ್ಕಮಗಳೂರಿನಲ್ಲಿ ‘ಕೈ’ ನಾಯಕ ಅಕ್ಮಲ್ ಮನೆ ಮೇಲೆ ಐಟಿ ದಾಳಿ, ಕಾರ್ಯಕರ್ತರಿಂದ ಪ್ರತಿಭಟನೆ
ಕೆಪಿಸಿಸಿ ಕಿಸಾನ್ ಸೆಲ್ ರಾಜ್ಯ ಸಂಚಾಲಕ ಸಿ.ಎನ್.ಅಕ್ಮಲ್ ನಿವಾಸದ ಮೇಲೆ ಐಟಿ ದಾಳಿ
TV9 Web
| Updated By: Rakesh Nayak Manchi|

Updated on:Jan 16, 2023 | 6:43 PM

Share

ಚಿಕ್ಕಮಗಳೂರು: ಕೆಪಿಸಿಸಿ ಕಿಸಾನ್ ಸೆಲ್ ರಾಜ್ಯ ಸಂಚಾಲಕ ಸಿ.ಎನ್.ಅಕ್ಮಲ್ (C.N.Akmal) ನಿವಾಸದ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು ಪರಿಶೀಲನೆಯನ್ನು (IT Raid) ಮುಂದುವಿಸಿದ್ದು, ಕಾರ್ಯಕರ್ತರ ಪ್ರತಿಭಟನೆ ಕೂಡ ಮುಂದುವರಿಸಿದೆ. ಅಕ್ಮಲ್ ನಿವಾಸ, ಸಂಸ್ಥೆಗಳಲ್ಲಿ ಐಟಿ ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದು, ಇದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಚಿಕ್ಕಮಗಳೂರು ನಗರದ ಷರಿಫ್ ಗಲ್ಲಿಯ ರಸ್ತೆಯಲ್ಲಿ ಇರುವ ಅಕ್ಮಲ್ ಮನೆ ಮುಂದೆ ಪ್ರತಿಭಟನೆ (Congress protest) ನಡೆಸಿ ಸರ್ಕಾರ ಹಾಗೂ ಐಟಿ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನೊಂದೆಡೆ, ತಮ್ಮ ಪಕ್ಷದ ನಾಯಕರ ನಿವಾಸಗಳ ಮೇಲಿನ ಅಧಿಕಾರಿಗಳ ದಾಳಿಯನ್ನು ಕಾಂಗ್ರೆಸ್ ಖಂಡಿಸಿದೆ.

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಕೆಪಿಸಿಸಿ ಕಿಸಾನ್ ಸೆಲ್ ರಾಜ್ಯ ಸಂಚಾಲಕ ಅಕ್ಮಲ್, ಟಿಕೆಟ್​ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ನಡುವೆಯೇ ಅಕ್ಮಲ್​ಗೆ ಐಟಿ ಶಾಕ್ ನೀಡಿದೆ. ಮುಂಜಾನೆ 8ಕ್ಕೂ ಹೆಚ್ಚು ಅಧಿಕಾರಿಗಳು ಏಕಕಾಲದಲ್ಲಿ ಅಕ್ಮಲ್ ನಿವಾಸ, ಕಚೇರಿ, ಕಾಫಿ ಕ್ಯೂರಿಂಗ್, ಸೋದರನ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಮೂರು ಕಾಫಿ ಕ್ಯೂರಿಂಗ್ ಮತ್ತು ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುತ್ತಿದ್ದ ಅಕ್ಮಲ್, ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೈ ತಪ್ಪಿದರೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (KRPP) ದಿಂದ ಕಣಕ್ಕಿಳಿಯುವ ಪ್ಲಾನ್ ಮಾಡಿದ್ದಾರೆ. ಈ ಬಗ್ಗೆ ಜನಾರ್ದನ ರೆಡ್ಡಿ ಜೊತೆ ಅಕ್ಮಲ್ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ: ತೀರ್ಥಹಳ್ಳಿ ಕಾಂಗ್ರೆಸ್ ಕಚೇರಿ ಮೇಲೆ ಇಡಿ ದಾಳಿ; ನನಗೂ ಕಟ್ಟಡದ ಮಾಲೀಕರಿಗೂ ಯಾವುದೇ ಸಂಬಂಧವಿಲ್ಲ ಎಂದ ಕಿಮ್ಮನೆ ರತ್ನಾಕರ್​

ಎರಡು ತಿಂಗಳ ಅವಧಿಯಲ್ಲಿ ಇಬ್ಬರು ಕಾಂಗ್ರೆಸ್ ನಾಯಕರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಲಾಗಿದ್ದು, ಇದು ಕಾಂಗ್ರೆಸ್ ಪಕ್ಷವನ್ನು ಕೆರಳಿಸಿದೆ. ಬಿಜೆಪಿ ನಾಯಕರ ಮನೆ ಮೇಲೆ ಯಾವುದೇ ದಾಳಿಗಳು ನಡೆಯುವುದಿಲ್ಲ. ಆದರೆ ಕಾಂಗ್ರೆಸ್ ನಾಯಕರ ನಿವಾಸ, ಕಚೇರಿಗಳ ಮೇಲೆ ಮಾತ್ರ ದಾಳಿ ನಡೆಸಲಾಗುತ್ತಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ನಾಯಕರ ಮಾನಸಿನ ಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನ ಬಿಜೆಪಿ ಮಾಡುತ್ತಿದೆ. ಅಧಿಕಾರಿಗಳು ಬಿಜೆಪಿ ಅಣತಿಯಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:43 pm, Mon, 16 January 23