
ಚಿಕ್ಕಮಗಳೂರು, (ಅಕ್ಟೋಬರ್ 21): ಮೈಸೂರು ಮಹರಾಜರ ಕಾಲದಿಂದಲೂ ಭಾರಿ ಮಹತ್ವ ಪಡೆದಿರುವ ಬೀರೂರು ಮೈಲಾರ ಲಿಂಗೇಶ್ವರದ ಈ ವರ್ಷದ ಕಾರ್ಣಿಕ ನುಡಿ ಹೊರಬಿದ್ದಿದೆ. ಪ್ರತಿ ವರ್ಷದಂತೆ ಈ ವರ್ಷವೂ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪಟ್ಟಣದ ಮೈಲಾರ ಲಿಂಗೇಶ್ವರ ಕಾರ್ಣಿಕವನ್ನ ಇಂದು ಸೂರ್ಯೋದಯಕ್ಕೂ ಮುನ್ನವೇ ಗೊರವಯ್ಯ ದಶರಥ ಪೂಜಾರಿ ನುಡಿದಿದ್ದಾರೆ. ಇಟ್ಟ ರಾಮರ ಬಾಣ ಹುಸಿಯಿಲ್ಲ, ಸೃಷ್ಟಿಗೆ ನಾಡು ಸಿರಿಯಾಯಿತು. ಮದಗಜಗಳು ಕಾದಾಡಿದರು.ಕತ್ತಲೆಯ ದೀಪಕ್ಕೆ ಬೆಳಕಾಯಿತು. ಸರ್ವರೂ ಎಚ್ಚರದಿಂದಿರಬೇಕು ಪರಾಕ್ ಎಂದು ಕಾರ್ಣಿಕ ನುಡಿಯಾಗಿದ್ದು, ಇದರೊಂದಿಗೆ ಎರಡು ಸಂತಸದ ನುಡಿಗಾಳಾದ್ರೆ ಒಂದು ಎಚ್ಚರಿಕೆ ಸಂದೇಶ ನೀಡಿದೆ.
ಇನ್ನೂ ಬೀರೂರು ಮೈಲಾರ ಲಿಂಗೇಶ್ವರ ಕಾರ್ಣಿಕ ನುಡಿಗಳ ಬಗ್ಗೆ ಬೇರೆ ಬೇರೆ ರೀತಿಯಾಗಿ ವಿಶ್ಲೇಷಣೆ ಮಾಡಲಾಗುತ್ತಿದೆ. ಈಗಾಗಲೆ ಮಲೆನಾಡು ಬಯಲುಸೀಮೆಗಳಲ್ಲಿ ಮಳೆಯಿಲ್ಲದೆ ಜನರು ಅತಂಕದಲ್ಲಿಯೇ ಇದ್ದಾರೆ. ಕತ್ತಲಯ ಬೆಳಕಿಗೆ ಬೆಳಕಾಯಿತು ಅನ್ನೋ ನುಡಿ ಮುತ್ತುಗಳಿಂದ ಸಂಕಷ್ಟದಿಂದ ಪಾರಾಗುತ್ತೇವೆ ಆಶಾಭಾವನೆಯೂ ಮೂಡಿದೆ. ಕೃಷಿಯೂ ಇಲ್ಲ ಬರಡು ಭೂಮಿಯಾಗುತ್ತಿರೋ ಭೂಮಿಯಲ್ಲಿ ಮತ್ತೆ ಮಳೆಯಾಗಿ ಚಿಗುರುಡೋದು ಜನರೆಲ್ಲರೂ ಸಿರಿವಂತಾರಾಗುತ್ತಾರಾ ಎಂಬ ಚರ್ಚೆಗಳು ನಡೆದಿವೆ.

ಮದಗಜಗಳ ಕಾಳಗದ ಕಾರ್ಣಿಕದ ಎಚ್ಚರಿಕೆಯ ನುಡಿ ದೇಶದಲ್ಲಿ ರಾಜಕೀಯದಲ್ಲಿ ಕಾದಾಟವೋ ವಿಶ್ವದ ಬಲಿಷ್ಟ ರಾಷ್ಟ್ರ ಗಳ ಕಾದಾಟವೋ ಅನ್ನೋ ಗೊಂದಲದ ಉತ್ತರಗಳು ಜನರ ಮನಸ್ಸಲ್ಲಿದೆ. ವಿಶ್ವದ ಪ್ರಬಲ ದೇಶಗಳ ನಡುವೆ ಯುದ್ಧದ ಕಾರ್ಮೋಡ ಕವಿದಿರುವ ಸಮಯದಲ್ಲಿ ವಿಶ್ವ ವಿಖ್ಯಾತ ಬೀರೂರು ಮೈಲಾರ ಲಿಂಗೇಶ್ವರ ಕಾರ್ಣಿಕ ಭಕ್ತರನ್ನ ಬಿಚ್ಚಿ ಬೀಳುವಂತೆ ಮಾಡಿದೆ.
Published On - 7:33 pm, Wed, 21 October 26