ಹುಲಿ ಚರ್ಮದ ಮೇಲೆ ಕುಳಿತ ಬಾಬಾ ಬುಡನ್ ದರ್ಗಾದ ಶಾಖಾದ್ರಿಗೆ ಅರಣ್ಯ ಇಲಾಖೆ ನೋಟಿಸ್, ಕ್ರಮಕ್ಕೆ ಹಿಂದೂ ಸಂಘಟನೆ ಒತ್ತಾಯ
ಶಾಖಾದ್ರಿಗಳ ಆಡಳಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಹುಲಿ ಚರ್ಮವನ್ನ ಅಕ್ರಮವಾಗಿ ಮನೆಯಲ್ಲಿ ಸಂಗ್ರಹಿಸಿರುವ ಆರೋಪ ಕೇಳಿ ಬಂದಿದ್ದು, ಚಿಕ್ಕಮಗಳೂರು ಅರಣ್ಯ ಇಲಾಖೆಯ RFO ಮೋಹನ್ ನೇತೃತ್ವದ ತಂಡ ಶಾಖಾದ್ರಿ ಅವರ ಚಿಕ್ಕಮಗಳೂರು ನಗರದ ಎಂ.ಜಿ ರಸ್ತೆಯ ಬಳಿ ಇರುವ ನಿವಾಸದ ಮೇಲೆ ದಾಳಿ ನಡೆಸಿದೆ.
ಚಿಕ್ಕಮಗಳೂರು, ಅಕ್ಟೋಬರ್ 27: ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದ ಶಾಖಾದ್ರಿ ( Dattatreya Baba Budan Dargah chief ) ಹಜರತ್ ಸೈಯದ್ ಗೌತ್ ಮೊಹಿದ್ದೀನ್ ವಿರುದ್ಧ ಅಕ್ರಮವಾಗಿ ಹುಲಿ ಚರ್ಮವನ್ನ (Tiger skin) ಮನೆಯಲ್ಲಿ ಇಟ್ಟುಕೊಂಡಿರುವ ಗಂಭೀರ ಆರೋಪ ಕೇಳಿ ಬಂದಿದೆ . ಹಿಂದೂ ಸಂಘಟನೆಯ ಕಾರ್ಯಕರ್ತರು ಶಾಖಾದ್ರಿ ವಿರುದ್ಧ ಗಂಭೀರ ಆರೋಪ ಮಾಡಿದ್ದು. ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿದ್ದ ಹುಲಿ ,ಚಿರತೆ ಚರ್ಮ ಏನಾಯ್ತು ಎಂದು ಪ್ರಶ್ನೆ ಮಾಡಿದ್ದು.ಚಿಕ್ಕಮಗಳೂರು ಅರಣ್ಯ ಇಲಾಖೆಗೆ (Chikkamagaluru Forest department) ಶಾಖಾದ್ರಿ ವಿರುದ್ಧ ದೂರು ನೀಡಿದ್ದಾರೆ.
ಶಾಖಾದ್ರಿಗಳ ಆಡಳಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಹುಲಿ ಚರ್ಮವನ್ನ ಅಕ್ರಮವಾಗಿ ಮನೆಯಲ್ಲಿ ಸಂಗ್ರಹಿಸಿರುವ ಆರೋಪ ಕೇಳಿ ಬಂದಿದ್ದು. ಚಿಕ್ಕಮಗಳೂರು ಅರಣ್ಯ ಇಲಾಖೆಯ RFO ಮೋಹನ್ ನೇತೃತ್ವದ ತಂಡ ಶಾಖಾದ್ರಿ ಅವರ ಚಿಕ್ಕಮಗಳೂರು ನಗರದ ಎಂ.ಜಿ ರಸ್ತೆಯ ಬಳಿ ಇರುವ ನಿವಾಸದ ಮೇಲೆ ದಾಳಿ ನಡೆಸಿದ್ದು. ಶಾಖಾದ್ರಿ ಮನೆಗೆ ಬೀಗ ಹಾಕಿಕೊಂಡು ರಾಯಚೂರಿನ ಕಾರ್ಯಕ್ರಮಕ್ಕೆ ತೆರಳಿದ್ದು ಶಾಖಾದ್ರಿಯವರ ಅಣ್ಣನ ಮಗನಿಗೆ ನೋಟಿಸ್ ನೀಡಿದೆ. ಇಂದು ಸಂಜೆ ಒಳಗೆ ಚಿಕ್ಕಮಗಳೂರಿನ ನಿವಾಸಕ್ಕೆ ಹಾಜರಾಗಲು ನೋಟಿಸ್ ನಲ್ಲಿ ತಿಳಿಸಲಾಗಿದೆ.
ಪುರಾತನ ಕಾಲದಿಂದಲೂ ಹುಲಿ ಚರ್ಮದ ಮೇಲೆ ಕುಳಿತು ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾತ ದರ್ಗಾದ ಶಾಖಾದ್ರಿ ಆಡಳಿತ ನಡೆಸಿಕೊಂಡು ಬಂದಿದ್ರು. ವಿವಾದ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಶಾಖಾದ್ರಿ ಆಡಳಿತದ ವಿರುದ್ಧ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತವಾದ ಬೆನ್ನಲ್ಲೇ ಶಾಖಾದ್ರಿ ಆಡಳಿತ ಮುಂದುವರೆಸಲು ಅನುಮತಿ ನೀಡುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲು ಹತ್ತಿದ್ರು. ಹಿಂದಿನ ಬಿಜೆಪಿ ಸರ್ಕಾರ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾಕ್ಕೆ ದತ್ತಪೀಠಕ್ಕೆ ವ್ಯವಸ್ಥಾಪನಾ ಮಂಡಳಿ ರಚನೆ ಮಾಡಿತ್ತು.
ಸುಮಾರು ೨೦೦ ವರ್ಷಗಳಿಂದ ಇನಾಂ ದತ್ತಾತ್ರೇಯ ಬಾಬಾ ಬಾಡನ್ ಸ್ವಾಮಿ ದರ್ಗಾದ ಶಾಖಾದ್ರಿಯವರು ಹುಲಿ ಮತ್ತು ಚಿರತೆ ಚರ್ಮದ ಮೇಲೆ ಆಡಳಿತ ನಡೆಸಿಕೊಂಡು ಬಂದಿದ್ರು. ಆದ್ರೆ ಸಾಧ್ಯ ಹುಲಿ ಚಿರತೆ ಚರ್ಮ ಏನಾಯ್ತು ಅದಕ್ಕೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಲಾಗಿತ್ತಾ ಎಂಬ ಪ್ರಶ್ನೆ ಎದ್ದಿದ್ದು ಶಾಖಾದ್ರಿ ಮನೆಯಲ್ಲಿ ಹುಲಿ ಚಿರತೆ ಚರ್ಮ ಪತ್ತೆಯಾದ್ರೆ ಶಾಖಾದ್ರಿ ಗೌಸ್ ಮೊಹಿದ್ದೀನ್ಗೆ ಸಂಕಷ್ಟ ಎದುರಾಗಲಿದೆ.
ಇದನ್ನೂ ಓದಿ: ಹುಲಿ ಉಗುರು: ದರ್ಶನ್ ವಿರುದ್ಧ ದೂರು ನೀಡಿದವರಿಗೆ ಅಭಿಮಾನಿಗಳಿಂದ ಕೊಲೆ ಬೆದರಿಕೆ
ಚಿಕ್ಕಮಗಳೂರಿನ ಎಂ.ಜಿ ರಸ್ತೆ ಬಳಿ ಇರುವ ನಿವಾಸದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನ ನಿಯೋಜನೆ ಮಾಡಿದ್ದು ಸಂಜೆ ಒಳಗೆ ಮನೆಯ ಬೀಗ ತೆರದು ತನಿಖೆಗೆ ಸಹಕಾರ ನಿಡದೆ ಇದ್ರೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಶಾಖಾದ್ರಿ ಕುಟುಂಬದವರ ಸಮ್ಮುಖದಲ್ಲಿ ಮನೆಯ ಬೀಗವನ್ನ ತೆರೆದು ತನಿಖೆ ನಡೆಸಲು ಸಿದ್ದತೆ ನಡೆಸಿದ್ದು. ಮನೆ ಪರಿಶೀಲನೆಗೆ ಸರ್ಚ್ ವಾರೆಂಟನ್ನು ಪಡೆದುಕೊಂಡಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ