ಚಿಕ್ಕಮಗಳೂರು: ಸಿಸಿ ಟಿವಿ ನಿಷ್ಕ್ರಿಯಗೊಳಿಸಿ ATM ನಲ್ಲಿದ್ದ 14 ಲಕ್ಷ ಹಣ ಲೂಟಿ ಮಾಡಿದ ಖದೀಮರು

| Updated By: ಆಯೇಷಾ ಬಾನು

Updated on: Aug 16, 2023 | 1:49 PM

ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ನಲ್ಲಿ ಇರುವ ATM ನಲ್ಲಿದ್ದ 14 ಲಕ್ಷ ಹಣ ಲೂಟಿ ಮಾಡಿ ಪರಾರಿಯಾಗಿದ್ದಾರೆ. ಇನ್ನು ಈ ಖದೀಮರು ಸಿಸಿ ಟಿವಿ ನಿಷ್ಕ್ರಿಯಗೊಳಿಸಿದ್ದಾರೆ. ಸದ್ಯ ಸ್ಥಳಕ್ಕೆ ಪೊಲೀಸರು ಆಗಮಿಸಿ ಕೆನರಾ ಬ್ಯಾಂಕ್ ಅಧಿಕಾರಿಗಳ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

ಚಿಕ್ಕಮಗಳೂರು: ಸಿಸಿ ಟಿವಿ ನಿಷ್ಕ್ರಿಯಗೊಳಿಸಿ ATM ನಲ್ಲಿದ್ದ 14 ಲಕ್ಷ ಹಣ ಲೂಟಿ ಮಾಡಿದ ಖದೀಮರು
ATM ಲೂಟಿ
Follow us on

ಚಿಕ್ಕಮಗಳೂರು, ಆ.16: ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಟಿಎಂ ಲೂಟಿ ಮಾಡಲಾಗಿದೆ. ರಾತ್ರೋರಾತ್ರಿ ಕೆನರಾ ಬ್ಯಾಂಕ್ ATMಗೆ ನುಗ್ಗಿದ ಖದೀಮರು ತಮ್ಮ ಕೈಚಳಕ ತೋರಿಸಿದ್ದಾರೆ. ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ನಲ್ಲಿ ಇರುವ ATM ನಲ್ಲಿದ್ದ 14 ಲಕ್ಷ ಹಣ ಲೂಟಿ ಮಾಡಿ ಪರಾರಿಯಾಗಿದ್ದಾರೆ. ಇನ್ನು ಈ ಖದೀಮರು ಸಿಸಿ ಟಿವಿ ನಿಷ್ಕ್ರಿಯಗೊಳಿಸಿದ್ದಾರೆ. ಸದ್ಯ ಸ್ಥಳಕ್ಕೆ ಪೊಲೀಸರು ಆಗಮಿಸಿ ಕೆನರಾ ಬ್ಯಾಂಕ್ ಅಧಿಕಾರಿಗಳ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

ದೇವಸ್ಥಾನದ ಬೀಗ ಮುರಿದು ಕಳ್ಳತನ

ಮಂಡ್ಯದ ಗಾಂಧಿನಗರದಲ್ಲಿರುವ ಕಾಳಮ್ಮ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ತಡರಾತ್ರಿ ದೇವಸ್ಥಾನದ ಬೀಗ ಮುರಿದು ಒಳ ನುಗ್ಗಿ ಕಳ್ಳರು ಹುಂಡಿ ದೋಚಿದ್ದಾರೆ. ಹುಂಡಿಯಲ್ಲಿದ್ದ ಸುಮಾರು 1.50 ಲಕ್ಷ ರೂ ಹಣ ದೋಚಿ ಹುಂಡಿ ಎಸೆದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮಂಡ್ಯ: ಅನುಮಾನ ಎನ್ನುವ ಭೂತಕ್ಕೆ ಹೆಂಡ್ತಿಯನ್ನು ಕೊಂದ ಪತಿ, ಮಗನೊಂದಿಗೆ ಎಸ್ಕೇಪ್

ಕೆಂಪೇಗೌಡ ಏರ್​ಪೋರ್ಟ್​​ನಲ್ಲಿ 30 ಚಿನ್ನದ ಬಿಸ್ಕೆಟ್​ಗಳು ಜಪ್ತಿ

ಬೆಂಗಳೂರು ಕೆಂಪೇಗೌಡ ಏರ್​ಪೋರ್ಟ್​​ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಕೋಲ್ಕತ್ತಾದಿಂದ ಅಕ್ರಮವಾಗಿ ಚಿನ್ನದ ಬಿಸ್ಕೆಟ್ ಸಾಗಿಸುತ್ತಿದ್ದ ವ್ಯಕ್ತಿಯಿಂದ 36 ಲಕ್ಷ ಮೌಲ್ಯದ 600 ಗ್ರಾಂ ತೂಕದ 30 ಚಿನ್ನದ ಬಿಸ್ಕೆಟ್ ಜಪ್ತಿ ಮಾಡಿದ್ದಾರೆ. ಕೋಲ್ಕತ್ತಾದಿಂದ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್​ಪೋರ್ಟ್​ ಬಂದಿಳಿದಿದ್ದ ಪ್ರಯಾಣಿಕನ ಮೇಲೆ ಅನುಮಾನಗೊಂಡು ತಪಾಸಣೆ ನಡೆಸಿದಾಗ ಚಿನ್ನ ಪತ್ತೆಯಾಗಿದೆ. ಚಿನ್ನದ ಬಿಸ್ಕೆಟ್ ಸಮೇತ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ