Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಡ್ಯ: ಅನುಮಾನ ಎನ್ನುವ ಭೂತಕ್ಕೆ ಹೆಂಡ್ತಿಯನ್ನು ಕೊಂದ ಪತಿ, ಮಗನೊಂದಿಗೆ ಎಸ್ಕೇಪ್

ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದ ಟಿಬಿ ಬಡಾವಣೆಯಲ್ಲಿ ಪತಿಯೇ ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿ, ಬಳಿಕ ಮಗುವನ್ನು ಕರೆದುಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ. ಮಧುಶ್ರಿ (25) ಕೊಲೆಯಾಗಿರುವ ಮಹಿಳೆ.

ಮಂಡ್ಯ: ಅನುಮಾನ ಎನ್ನುವ ಭೂತಕ್ಕೆ ಹೆಂಡ್ತಿಯನ್ನು ಕೊಂದ ಪತಿ, ಮಗನೊಂದಿಗೆ ಎಸ್ಕೇಪ್
ಆರೋಪಿ ಪತಿ, ಮೃತ ಪತ್ನಿ
Follow us
ಪ್ರಶಾಂತ್​ ಬಿ.
| Updated By: ಕಿರಣ್ ಹನುಮಂತ್​ ಮಾದಾರ್

Updated on:Aug 16, 2023 | 12:45 PM

ಮಂಡ್ಯ, ಆ.16: ಪತಿಯೇ ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿದ ಘಟನೆ ಮಂಡ್ಯ(Mandya) ಜಿಲ್ಲೆಯ ನಾಗಮಂಗಲ ಪಟ್ಟಣದ ಟಿಬಿ ಬಡಾವಣೆಯಲ್ಲಿ ನಡೆದಿದೆ. ಮಧುಶ್ರಿ (25) ಕೊಲೆಯಾಗಿರುವ ಮಹಿಳೆ. ಕಳೆದ ಒಂದುವರೆ ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದ ಮಧುಶ್ರೀ ಕುಟುಂಬ. ಮಂಡ್ಯ ತಾಲೂಕಿನ ಕರಡಹಳ್ಳಿ ಗ್ರಾಮದ ಮಂಜುನಾಥ್ ಜೊತೆ ಕಳೆದ ನಾಲ್ಕೈದು ವರ್ಷಗಳ ಹಿಂದೆ ವಿವಾಹವಾಗಿದ್ದರು. ಇವರಿಗೆ 4 ವರ್ಷದ ಗಂಡು ಮಗುವಿದ್ದು, ಮಂಜುನಾಥ್ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸುಖವಾಗಿದ್ದ ಸಂಸಾರದಲ್ಲಿ ಅನುಮಾನ ಎಂಬ ಭೂತಕ್ಕೆ ಸುಂದರ ಕುಟುಂಬ ನುಚ್ಚು ನೂರಾಗಿದೆ.

ಪತಿ ಪತ್ನಿ ನಡುವೆ ಜಗಳ

ಇನ್ನು ನಿನ್ನೆ(ಆ.15) ಮಧ್ಯಾಹ್ನ ಮಂಜುನಾಥ್ ಬೆಂಗಳೂರಿನಿಂದ ಬಂದಿದ್ದ. ಈ ವೇಳೆ ಮಂಜುನಾಥ್​ ಹಾಗೂ ಮಧುಶ್ರೀ ನಡುವೆ ಜಗಳ ಶುರುವಾಗಿದೆ. ಬಳಿಕ ಪತ್ನಿಯ ಶೀಲ ಶಂಕಿಸಿ ಮಧುಶ್ರೀಯನ್ನು ಕೊಲೆ ಮಾಡಿ, ಮಗ ಮನ್ವಿತ್ ಕರೆದುಕೊಂಡು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಇಂದು(ಆ.16) ಬೆಳಿಗ್ಗೆ ಮಧು ಎಂಬಾತ ಮನೆ ಬಳಿ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ನಾಗಮಂಗಲ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅನುಮಾನಕ್ಕೆ ಒಂದು ಜೀವ ಬಲಿಯಾಗಿದೆ.

ಇದನ್ನೂ ಓದಿ:ಖುಷ್​​ ಖುಷಿಯಾಗಿದ್ದ ನವದಂಪತಿ ಬೆಳ್ಳಂಬೆಳಗ್ಗೆ ಜೋಡಿಯಾಗಿಯೇ ಶವವಾದರು: ನವದಂಪತಿಯದ್ದು ಕೊಲೆಯೋ, ಆತ್ಮಹತ್ಯೆಯೋ?

ಶೌಚಾಲಯದ ಪೈಪ್ ಒಡೆದಿದ್ದಕ್ಕೆ ಅಧಿಕಾರಿಗಳ ನಡುವೆ ಕಿತ್ತಾಟ

ಚಿಕ್ಕಮಗಳೂರು: ಅರಣ್ಯ ವಸತಿ ಗೃಹದ ಶೌಚಾಲಯದಲ್ಲಿ ಪೈಪ್ ಹೊಡೆದು ಹೋಗಿದ್ದಕ್ಕೆ ಕುಡಿದ ಮತ್ತಿನಲ್ಲಿ ಕರ್ತವ್ಯ ಮರೆತ ಅಧಿಕಾರಿಗಳಿಂದ ಪರಸ್ಪರ ನಿಂದನೆ ಆಡಿಯೋ ವೈರಲ್ ಆಗಿದೆ. ಹೌದು, ಮೂಡಿಗೆರೆ ತಾಲೂಕಿನ ವಲಯ ಅರಣ್ಯಾಧಿಕಾರಿ, ಉಪವಲಯ ಅರಣ್ಯಾಧಿಕಾರಿ ಮಧ್ಯೆ ಅವಾಚ್ಯ ಶಬ್ದಗಳಿಂದ ಪರಸ್ಪರ ಬೈದಾಡಿಕೊಂಡಿದ್ದಾರೆ. ಅರಣ್ಯ ಅಧಿಕಾರಿಗಳ ಕಿತ್ತಾಟದ ಫೋನ್ ಸಂಭಾಷಣೆ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು, ಇಬ್ಬರು ಮೂಡಿಗೆರೆ ಅರಣ್ಯ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಣ್ಣ ವಿಚಾರ ವೀಕೋಪಕ್ಕೆ ತಿರುಗಿ ಬೈದಾಡಿಕೊಂಡಿರೋ ಅಧಿಕಾರಿಗಳು

ಸಣ್ಣ ವಿಚಾರ ವೀಕೋಪಕ್ಕೆ ತಿರುಗಿ, ವಲಯ ಅರಣ್ಯಾಧಿಕಾರಿ ಮೋಹನ್ ಹಾಗೂ ಉಪ ವಲಯ ಅರಣ್ಯಾಧಿಕಾರಿ ನವೀನ್ ಚಿಕ್ಕಮಕ್ಕಳಂತೆ ಬೈದಾಡಿಕೊಂಡಿದ್ದಾರೆ. ಕುಡಿದು ಮಾತಾಡಬೇಡ ಎಂದ ನವೀನ್​ಗೆ ಮೋಹನ್ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಇದೀಗ ಇಬ್ಬರು ಅಧಿಕಾರಿಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸ್ಥಳೀಯರು ಆಕ್ರೋಶಗೊಂಡಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:44 pm, Wed, 16 August 23