ಕಾಡಿನಲ್ಲಿ ಮರಗಳ ಮೇಲೆ ಮಲಗಿ ಚಳ್ಳೆಹಣ್ಣು ತಿನ್ನಿಸ್ತಿದ್ದ ರೌಡಿಗೆ ಚಿಕ್ಕಮಗಳೂರು ಪೊಲೀಸರು ಶೂಟ್ ಮಾಡಿದರು, ಆದರೀಗ ಅವನನ್ನು ಕಾಯುವ ಫಜೀತಿಗೆ ಸಿಕ್ಕಿಕೊಂಡಿದ್ದಾರೆ!

| Updated By: ಸಾಧು ಶ್ರೀನಾಥ್​

Updated on: Nov 18, 2023 | 10:38 AM

ಪುರಾತನ ಪಾತಕಿ ಪೊಲೀಸರ ಕೈಗೆ ಸಿಕ್ಕಾಗ ತಪ್ಪಿಸಿಕೊಳ್ಳಲು ಅವರ ಮೆಲೆ ಲಾಂಗ್ ಬೀಸಿದ. ಆತ್ಮರಕ್ಷಣೆಗಾಗಿ ಪೊಲೀಸರು ಅವನ ಮೆಲೆ ಫೈರಿಂಗ್ ಮಾಡಿದ್ರು. ಆದರೆ, ಕಾಫಿನಾಡ ಖಾಕಿಗಳಿಗೆ ಫೈರಿಂಗ್ ಮಾಡಿದ ತಪ್ಪಿಗೆ ಈಗ ಅವರೇ ಅವನ ದೆಖರೇಖಿ ಮಾಡಬೇಕಾದ ಜರೂರತ್ತು ಎದುರಾಗಿದೆ. ಹೇಳಿಕೇಳಿ ಆತ ಪೊಲೀಸ್​​ ಕಸ್ಟಡಿಯಲ್ಲಿದ್ದಾನೆ. ಪೋಷಕರು ಇದ್ದರೂ ಕೂಡ ಅವನ ಕಡೆಗೆ ತಿರುಗಿನೋಡುತ್ತಿಲ್ಲ.

ಕಾಡಿನಲ್ಲಿ ಮರಗಳ ಮೇಲೆ ಮಲಗಿ ಚಳ್ಳೆಹಣ್ಣು ತಿನ್ನಿಸ್ತಿದ್ದ ರೌಡಿಗೆ ಚಿಕ್ಕಮಗಳೂರು ಪೊಲೀಸರು ಶೂಟ್ ಮಾಡಿದರು, ಆದರೀಗ ಅವನನ್ನು ಕಾಯುವ ಫಜೀತಿಗೆ ಸಿಕ್ಕಿಕೊಂಡಿದ್ದಾರೆ!
ರೌಡಿಗೆ ಶೂಟ್ ಮಾಡಿದ ‘ತಪ್ಪಿಗೆ‘ ಅವನನ್ನು ಕಾಯುವ ಫಜೀತಿ ಒದಗಿದೆ ಪೊಲೀಸರಿಗೆ
Follow us on

ಆತ ಕಾಫಿನಾಡಿನ ಖಾಕಿಗಳಿಗೆ ಬೇಕಾಗಿದ್ದ ಮೋಸ್ಟ್ ವಾಟೆಂಡ್ ಕ್ರಿಮಿನಲ್ ( rowdy sheeter). 2012ರಿಂದ ಕಾಡಲ್ಲೇ ಮರಗಳ ಮೇಲೆ ಮಲಗಿಕೊಂಡು ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿಕೊಂಡು ಓಡಾಡ್ತಿದ್ದ. 4 ಹಾಫ್ ಮರ್ಡರ್, 3 ಹಲ್ಲೆ ಪ್ರಕರಣ ಸೇರಿದಂತೆ ಪೊಲೀಸರ ಮೇಲೆ ಹಲ್ಲೆ ಮಾಡಿದ್ದ. ಆತನ ಮೇಲೆ ಒಟ್ಟು 9 ಕೇಸ್‍ಗಳಿದ್ದವು. ಖಚಿತ ಮಾಹಿತಿ ಮೇರೆಗೆ ಅರೆಸ್ಟ್ ಮಾಡಲು ಹೋದಾಗ ಮತ್ತೆ ಖಾಕಿ ಮೇಲೆ ಲಾಂಗ್ ಬೀಸಿದ್ದ. ಆತ್ಮರಕ್ಷಣೆಗಾಗಿ ಫೈರ್ (shooting) ಮಾಡಿದ್ದ ಪೊಲೀಸರಿಗೆ (Chikkamagaluru police) ಈಗ ಅಯ್ಯೋ… ಯಾಕಾದ್ರು ಶೂಟ್ ಮಾಡುದ್ವೋ ಅಂತಿದ್ದಾರೆ… ಕಾರಣ ಏನ್ ಗೊತ್ತಾ…. ಈ ಸ್ಟೋರಿ ನೋಡಿ

ಫೈರಿಂಗ್ ಮಾಡಿದ ತಪ್ಪಿಗೆ ಹೇಗೆ ಹೆತ್ತವರು, ಕಟ್ಕೊಂಡ್ ಹೆಂಡ್ತಿ ತರ ಪೊಲೀಸರೇ ಆಸ್ಪತ್ರೆಯಲ್ಲಿ ಆರೋಪಿಗೆ ಆರೈಕೆ ಮಾಡ್ತಿದ್ದಾರೆ ನೋಡಿ. ಇನ್ನು ಈತನ ಹೆಸ್ರು ಪೂರ್ಣೇಶ್. ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಸಮೀಪದ ಮಾಗಲು ಗ್ರಾಮದವನು. ಈತ ಒಂದು ರೀತಿ ಖಾಂಡ್ಯದ ರೌಡಿ. ಈತನ ಮೇಲೆ 4 ಹಾಫ್ ಮರ್ಡರ್, 3 ಅಸಾಲ್ಟ್, ಪೊಲೀಸ್ ಮೇಲೆ ಅಟ್ಯಾಕ್ ಸೇರಿದಂತೆ 9 ಕೇಸ್‍ಗಳಿದ್ವು. 307 ಕೇಸಲ್ಲಿ ವಾರಂಟ್ ಕೂಡ ಇಶ್ಯು ಆಗಿತ್ತು.

ಆದ್ರೆ, 2012 ರಿಂದ ಕಾಡಲ್ಲಿ ಕಾಡಿನ ಮರಗಳ ಮೇಲೆ ಮಲಗಿ ಪೊಲೀಸರ ಕೈಗೆ ಸಿಗದೆ ಆಟ ಆಡಿಸ್ತಿದ್ದ. ಲಾಸ್ಟ್ ವೀಕ್ ಮನೆಯಲ್ಲಿರೋ ಖಚಿತ ಮಾಹಿತಿ ಮೇರೆಗೆ ಬಂಧಿಸಲು ಹೋದಾಗ ಪೊಲೀಸರ ಮೇಲೆ ಲಾಂಗ್ ಬೀಸಿದ ಅಂತ ಕಾಲಿನ ಮಂಡಿಗೆ ಫೈರಿಂಗ್ ಮಾಡಿದ್ದರು. ಆದ್ರೆ, ಫೈರಿಂಗ್ ಆದ ಮೇಲೆ ಆತನನ್ನ ನೋಡಿಕೊಳ್ಳಲು ಅವರ ಮನೆಯವರು ಯಾರೂ ಬಾರದ ಕಾರಣ ಓರ್ವ ಇನ್ಸ್‍ಪೆಕ್ಟರ್, ಓರ್ವ ಪಿ.ಎಸ್.ಐ. ಹಾಗೂ ನಾಲ್ವರು ಪೇದೆಗಳೇ ಆತನ ಯೋಗಕ್ಷೇಮ ನೋಡಿಕೊಳ್ಳುವಂತಾಗಿದೆ! ವಾರದಿಂದ ಆಸ್ಪತ್ರೆಯಲ್ಲಿರೋ ಪೊಲೀಸರಿಗೆ ಎಂಟತ್ತು ವರ್ಷಗಳಿಂದ ಸಿಕ್ಕಿರಲಿಲ್ಲ. ಸಿಕ್ಕಿಲ್ಲ ಅಂತ ರಿಪೋರ್ಟ್ ಹಾಕಿದ್ರೆ ಆಗೋದು. ಶೂಟ್ ಮಾಡಿ ಈಗ ನಾವೇ ನೋಡಿಕೊಳ್ಳೊ ಸ್ಥಿತಿ ಬಂದಿದೆ ಅನ್ನಿಸಿರೋದಂತು ಸುಳ್ಳಲ್ಲ.

ಇದನ್ನೂ ಓದಿ: ದರ್ಗಾ ನವೀಕರಣಕ್ಕೆ ಮುಂದಾದ ಮುಸ್ಲಿಮರು, ಚಿಕ್ಕಮಗಳೂರು ನಗರದ ಕೋಟೆ ದರ್ಗಾದ ಬಳಿ ಬಿಗುವಿನ ವಾತಾವಣ

ಊರಿಗೆ ಬೇಡವಾಗಿ, ಪೊಲೀಸರಿಗೆ ಬೇಕಾಗಿದ್ದ ಆತ ಮನೆಯವರಿಗೂ ಬೇಡವಾಗಿದ್ದ. ಫೈರಿಂಗ್ ಆಗಿದೆ ಅಂತ ಗೊತ್ತಾದ ಮೇಲೂ ಪೋಷಕರು, ಸಂಬಂಧಿಕರು, ಹೆಂಡ್ತಿ-ಮಕ್ಕಳು ಯಾರೂ ಬಂದಿಲ್ಲ. ಶೂಟ್ ಮಾಡಿ ಆಸ್ಪತ್ರೆಗೆ ಸೇರಿಸಿದ್ದ ಪೊಲೀಸರಿಗೆ ವೈದ್ಯರು ವೆಸಲ್ ಕಟ್ ಆಗಿದೆ ಅಂತ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ರೆಫರ್ ಮಾಡಿದ್ದರು. ಮನೆಯವರಿಗೆ ವಿಷಯ ತಿಳಿದರೂ ಯಾರೂ ಬಾರದ ಕಾರಣ ಸಿಪಿಐ, ಪಿಎಸ್‍ಐ ಹಾಗೂ ನಾಲ್ವರು ಪೇದೆಗಳೇ ಆಂಬುಲೆನ್ಸ್‍ನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ರು.

ಆತನನ್ನ ಬೆಂಗಳೂರಿನ ಆಸ್ಪತ್ರೆಗೇ ಕರೆದೊಯ್ದಿದದ್ದರೂ ಪೋಷಕರಾಗಲಿ, ಸಂಬಂಧಿಕರು ಹೆಂಡ್ತಿ-ಮಕ್ಕಳು ಕೂಡ ಯಾರೂ ಬಂದಿಲ್ಲ. ಆರೋಪಿ ಪೂರ್ಣೇಶ ತನ್ನ ಹೆಂಡ್ತಿಗೂ ಹೊಡೆದುಬಡಿದು ತವರಿಗೆ ಕಳಿಸಿದ್ದನಂತೆ. ಹಾಗಾಗಿ, ಓರ್ವ ಮಗನಿದ್ದರೂ ಆಕೆ ಕೂಡ ಗಂಡನನ್ನ ನೋಡೋದಕ್ಕೆ ಬಂದಿಲ್ಲ. ಇದೀಗ, ವಾರದಿಂದ ನೋಡಿಕೊಂಡ ಪೊಲೀಸರೇ ಆಪರೇಷನ್ ಮಾಡಿಸಿ, ಪೋಷಕರ ಸ್ಥಾನದಲ್ಲಿ ನಿಂತು ಆರೈಕೆ ಮಾಡುತ್ತಿದ್ದಾರೆ. ಸಿಪಿಐ, ಪಿಎಸ್‍ಐ, ಪೇದೆಗಳು ಇಂದಿಗೂ ಆತನ ಆರೈಕೆಯಲ್ಲಿದ್ದಾರೆ.

ಎಂಟು-ಹತ್ತು ವರ್ಷಗಳಿಂದ ಹುಡುಕ್ತಿದ್ದ ಆರೋಪಿ ಪೊಲೀಸರ ಕೈಗೆ ಸಿಕ್ಕಾಗ ತಪ್ಪಿಸಿಕೊಳ್ಳಲು ಪೊಲೀಸರ ಮೇಲೆ ಮತ್ತೆ ಲಾಂಗ್ ಬೀಸಿದ ಅಂತ ಆತ್ಮರಕ್ಷಣೆಗಾಗಿ ಫೈರಿಂಗ್ ಮಾಡಿದ್ರು. ಆದರೆ, ಕಾಫಿನಾಡ ಖಾಕಿಗಳಿಗೆ ಫೈರಿಂಗ್ ಮಾಡಿದ ತಪ್ಪಿಗೆ ಈಗ ನಾವೇ ನೋಡ್ಕೊಬೇಕು ಅನ್ನಿಸಿದೆ. ಆದ್ರೆ, ಅನಿವಾರ್ಯ, ಆತ ಪೊಲೀಸ್​​ ಕಸ್ಟಡಿಯಲ್ಲಿ ಇರೋ ಆರೋಪಿ. ಪೋಷಕರು ಇದ್ರು ಕೂಡ ಅವನನ್ನು ಕಾಯುವ ಅನಿವಾರ್ಯತೆ. ಕಾಯುವುದರ ಜೊತೆಗೆ ಆರೈಕೆ ಮಾಡೋ ಸ್ಥಿತಿಯೂ ಬಂದೊದಗಿದೆ ಚಿಕ್ಕಮಗಳೂರು ಪೊಲೀಸರಿಗೆ!

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:19 am, Sat, 18 November 23