ದರ್ಗಾ ನವೀಕರಣಕ್ಕೆ ಮುಂದಾದ ಮುಸ್ಲಿಮರು, ಚಿಕ್ಕಮಗಳೂರು ನಗರದ ಕೋಟೆ ದರ್ಗಾದ ಬಳಿ ಬಿಗುವಿನ ವಾತಾವಣ
ಚಿಕ್ಕಮಗಳೂರು ನಗರದ ಕೋಟೆ ಬಡಾವಣೆಯಲ್ಲಿರುವ ದರ್ಗಾದ ಬಳಿ ಅಕ್ಷರಶಃ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ. ಅನುಮತಿ ಇಲ್ಲದೆ ದರ್ಗಾ ನವೀಕರಣಕ್ಕೆ ಮುಂದಾದ ಹಿನ್ನೆಲೆ ಮುಸ್ಲಿಂ ಸಮುದಾಯದ ವಿರುದ್ಧ ಹಿಂದೂಗಳ ಆಕ್ರೋಶ ವ್ಯಕ್ತವಾಗಿದೆ.
ಚಿಕ್ಕಮಗಳೂರು: ನಗರದ ಕೋಟೆ ಬಡಾವಣೆಯಲ್ಲಿರುವ ದರ್ಗಾದ ಬಳಿ ಅಕ್ಷರಶಃ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ. ಅನುಮತಿ ಇಲ್ಲದೆ ದರ್ಗಾ ನವೀಕರಣಕ್ಕೆ ಮುಂದಾದ ಹಿನ್ನೆಲೆ ಮುಸ್ಲಿಂ ಸಮುದಾಯದ ವಿರುದ್ಧ ಹಿಂದೂಗಳ (Hindu Muslim conflict) ಆಕ್ರೋಶ ವ್ಯಕ್ತವಾಗಿದ್ದು, ಎರಡು ಕೋಮಿನ ಜನರು ಸ್ಥಳದಲ್ಲಿ ಜಮಾಯಿಸುತ್ತಿದ್ದಾರೆ. 1998ರಿಂದಲೂ ವಿವಾದದಲ್ಲಿರುವ ದರ್ಗಾದಲ್ಲಿ ಉರುಸ್ ಆಚರಣೆಗೆ ಅಷ್ಟೆ ಅವಕಾಶವಿದೆ. ಬೇರೆ ಯಾವುದೇ ಕಾರ್ಯಕ್ಕೆ ಅವಕಾಶ ಇಲ್ಲ. ಅದಾಗ್ಯೂ, ಮುಸ್ಲಿಂ ಸಮುದಾಯದವರು ಅನುಮತಿ ಇಲ್ಲದೆ ದರ್ಗಾ ಬಳಿ ಶೆಡ್, ಶೌಚಾಲಯ ನಿರ್ಮಾಣ ಮಾಡಿರುವುದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕೋಟೆ ದರ್ಗಾ ಬಳಿ ಹಿಂದೂ ಮುಸ್ಲಿಂ ಸಮುದಾದಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಸ್ಥಳದಲ್ಲಿ ಜಿಲ್ಲಾ ಎಸ್ಪಿ, ಎಎಸ್ಪಿ, ನಗರಸಭೆ ಅಧ್ಯಕ್ಷ, ಸರ್ವೇ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ. ಅಲ್ಲದೆ, ಹೆಚ್ಚಿನ ಭದ್ರತೆಗಾಗಿ ಡಿಎಆರ್ ಪೊಲೀಸ್ ತುಕಡಿಯನ್ನು ನಿಯೋಜಿಸಲಾಗಿದ್ದು, ಸ್ಥಳದಲ್ಲಿ ಜಮಾಯಿಸಿರುವ ಗುಂಪುಗಳನ್ನ ಚದುರಿಸುತ್ತಿರುತ್ತಿದ್ದಾರೆ. ಇದೇ ವೇಳೆ ಸ್ಥಳೀಯರು ಹಾಗೂ ಪೊಲೀಸರ ನಡುವೆ ವಾಗ್ವಾದವೂ ನಡೆಯಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:06 pm, Tue, 28 March 23