ದತ್ತಪೀಠದಲ್ಲಿ ರಾಮ ತಾರಕ ಹೋಮಕ್ಕೆ ಜಿಲ್ಲಾಡಳಿತ ನಿರ್ಬಂಧ: ಡಿಸಿ ಕಚೇರಿ ಎದುರು ಹಿಂದೂ ಕಾರ್ಯಕರ್ತರ ಪ್ರತಿಭಟನೆ

ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಹಿಂದೂ ಕಾರ್ಯಕರ್ತರು ವಿವಾದಿತ ಶ್ರೀಗುರುದತ್ತಾತ್ರೇಯ ಬಾಬಾಬುಡನ್​ಸ್ವಾಮಿ ದರ್ಗಾ ಇನಾಂ ದತ್ತಪೀಠದಲ್ಲಿ ರಾಮ ತಾರಕ ಹೋಮ ಮಾಡಲು ಮುಂದಾಗಿದರು. ಆದರೆ ಚಿಕ್ಕಮಗಳೂರು ಜಿಲ್ಲಾಡಳಿತ ಇದಕ್ಕೆ ನಿರ್ಭಂದಿಸಿ, ಹೋಮ ಮಂಟಪಕ್ಕೆ ಬೀಗ ಹಾಕಿಸಿದೆ.

ದತ್ತಪೀಠದಲ್ಲಿ ರಾಮ ತಾರಕ ಹೋಮಕ್ಕೆ ಜಿಲ್ಲಾಡಳಿತ ನಿರ್ಬಂಧ: ಡಿಸಿ ಕಚೇರಿ ಎದುರು ಹಿಂದೂ ಕಾರ್ಯಕರ್ತರ ಪ್ರತಿಭಟನೆ
ಹಿಂದೂ ಕಾರ್ಯಕರ್ತರ ಪ್ರತಿಭಟನೆ
Edited By:

Updated on: Jan 22, 2024 | 12:18 PM

ಚಿಕ್ಕಮಗಳೂರು, ಜನವರಿ 22: ಅಯೋಧ್ಯೆ ರಾಮ ಮಂದಿರದಲ್ಲಿ (Ayodhya Ram Mandir) ರಾಮಲಲ್ಲಾನ (Ramlalla) ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಹಿಂದೂ ಕಾರ್ಯಕರ್ತರು (Hindu Activist) ವಿವಾದಿತ ಶ್ರೀಗುರುದತ್ತಾತ್ರೇಯ ಬಾಬಾಬುಡನ್​ಸ್ವಾಮಿ ದರ್ಗಾ ಇನಾಂ ದತ್ತಪೀಠದಲ್ಲಿ ರಾಮ ತಾರಕ ಹೋಮ ಮಾಡಲು ಮುಂದಾಗಿದರು. ಆದರೆ ಚಿಕ್ಕಮಗಳೂರು ಜಿಲ್ಲಾಡಳಿತ ಇದಕ್ಕೆ ನಿರ್ಬಂಧಿಸಿ, ಹೋಮ ಮಂಟಪಕ್ಕೆ ಬೀಗ ಹಾಕಿಸಿದೆ. ಅಲ್ಲದೇ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದಾರೆ.

ದತ್ತಪೀಠದಲ್ಲಿ ರಾಮ ತಾರಕ ಹೋಮಕ್ಕೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ಹಿಂದೂ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಶ್ರೀರಾಮನ ಭಾವಚಿತ್ರವಿಟ್ಟು ರಾಮ ನಾಮ ಜಪ ಮಾಡಿದರು. ಇದೀಗ ಹಿಂದೂ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ಹೋಮ ಕುಂಡ ತಂದಿದ್ದಾರೆ. ಕಚೇರಿ ಬಾಗಿಲಿನಲ್ಲಿ ಹೋಮ ಮಾಡಲು ಮುಂದಾದರು.

ಇದನ್ನೂ ಓದಿ: ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಐತಿಹಾಸಿಕ ಕ್ಷಣ ಎಂದು ಅಯೋಧ್ಯೆಯಲ್ಲಿ ಹೇಳಿದ ಪಂಚಮಸಾಲಿ ಪೀಠದ ವಚನಾನಂದ ಶ್ರೀ

ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಎಸ್ಪಿ ವಿಕ್ರಂ ಪ್ರತಿಭಟನಾನಿರತರ ಮನವೋಲಿಸಲು ಯತ್ನಿಸಿದರು. ಈ ವೇಳೆ ಹಿಂದೂ ಕಾರ್ಯಕರ್ತರು ಹೋಮ ಮಂಟಪ ವಿವಾದದ ವ್ಯಾಪ್ತಿಯಲ್ಲಿ ಬರಲ್ಲ ಹೀಗಾಗಿ ಹೋಮ ಮಾಡಲು ಅನುಮತಿ ನೀಡಿ ಎಂದು ಪಟ್ಟು ಹಿಡಿದರು. ಆಗ ಜಿಲ್ಲಾಧಿಕಾರಿ ಮೀನಾ ನಾಗರಾಜ್ “ಸರ್ಕಾರದ ಅನುಮತಿ ಕೇಳುತ್ತೇನೆ” ಎಂದರು.

ಹೀಗೆ ಕೆಲ ಹೊತ್ತು ಪೊಲೀಸರು ಮತ್ತು ಹಿಂದೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಪೊಲೀಸರು ಹೋಮ ಮಾಡದಂತೆ ಹೋಮ ಕುಂಡವವನ್ನು ವಶಕ್ಕೆ ಪಡೆದರು. ಆಗ ಹಿಂದೂ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಕರ್ಪೂರ ಹಚ್ಚಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ