ಕೆರೆಯೊಳಗೆ ಸಿಕ್ತು ಅಪರೂಪದ ಸೀತಾರಾಮರ ವಿಗ್ರಹ: ರಾಮನ ಎಡತೊಡೆ ಮೇಲೆ ಕುಳಿತ‌ ಸೀತಾ ಮಾತೆ

ಇಡೀ ದೇಶದಲ್ಲೇ ಎಲ್ಲೂ ಕಾಣಸಿಗದ ರಾಮನ ಎಡತೊಡೆಯ ಮೇಲೆ‌ ಸೀತಾ ಮಾತೆ ಕುಳಿತಿರುವ ವಿಶೇಷ ಪುರಾತನ ಕಾಲದ ಪಟ್ಟಾಭಿರಾಮನ ವಿಗ್ರಹ ಚಿಕ್ಕಮಗಳೂರು ಜಿಲ್ಲೆಯ ತರೀಕೆರರೆ ಪಟ್ಟಣದ ತುದಿಪೇಟೆಯಲ್ಲಿರುವ ದೇವಾಲಯದಲ್ಲಿದೆ. ಈ ಅಪರೂಪದ ಸೀತಾರಾಮರ ವಿಗ್ರಹ ಸಿಕ್ಕಿದ್ದು ಕೆರೆಯೊಳಗೆ.

ಕೆರೆಯೊಳಗೆ ಸಿಕ್ತು ಅಪರೂಪದ ಸೀತಾರಾಮರ ವಿಗ್ರಹ: ರಾಮನ ಎಡತೊಡೆ ಮೇಲೆ ಕುಳಿತ‌ ಸೀತಾ ಮಾತೆ
ಸೀತಾರಾಮರ ಪುರಾತನ ವಿಗ್ರಹ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Jan 21, 2024 | 2:05 PM

ಚಿಕ್ಕಮಗಳೂರು, ಜನವರಿ 21: ಕರ್ನಾಟಕಕ್ಕೂ ಶ್ರೀರಾಮನಿಗೂ ಅವಿನಾಭಾವ ನಂಟು ಇದು. ರಾಜ್ಯದ ಜಿಲ್ಲೆ ಜಿಲ್ಲೆಯಲ್ಲೂ ರಾಮನ ಹೆಜ್ಜೆ ಗುರುತುಗಳು ಇವೆ. ಇದೀಗ ದೇಶದಲ್ಲೇ ಅಪರೂಪದ ಶ್ರೀರಾಮನ ವಿಗ್ರಹ ಕಾಫಿನಾಡು ಚಿಕ್ಕಮಗಳೂರು (Chikkamagaluru) ಜಿಲ್ಲೆಯಲ್ಲಿದೆ. ರಾಮನ ಎಡತೊಡೆಯ ಮೇಲೆ ಸೀತೆ ಕೂತಿರುವುದರ ಜೊತೆಗೆ ಆಂಜನೇಯ ನಮಸ್ಕರಿಸುತ್ತಿರುವ ಪುರಾತನ ಕಾಲದ ವಿಶೇಷವಾದ ವಿಗ್ರಹ ಇದಾಗಿದ್ದು. ಸಾವಿರಾರು ವರ್ಷಗಳ ಪುರಾತನ ವಿಗ್ರಹಕ್ಕೆ ವಿಶೇಷ ಪೂಜಾ ಕಾರ್ಯ ನಡೆಯುತ್ತಿದೆ.

ಇಡೀ ದೇಶದಲ್ಲೇ ಎಲ್ಲೂ ಕಾಣಸಿಗದ ರಾಮನ ಎಡತೊಡೆಯ ಮೇಲೆ‌ ಸೀತಾ ಮಾತೆ ಕುಳಿತಿರುವ ವಿಶೇಷ ಪುರಾತನ ಕಾಲದ ಪಟ್ಟಾಭಿರಾಮನ ವಿಗ್ರಹ ಜಿಲ್ಲೆಯ ತರೀಕೆರರೆ ಪಟ್ಟಣದ ತುದಿಪೇಟೆಯಲ್ಲಿರುವ ದೇವಾಲಯದಲ್ಲಿದೆ. ಈ ಅಪರೂಪದ ಸೀತಾರಾಮರ ವಿಗ್ರಹ ಸಿಕ್ಕಿದ್ದು ಕೆರೆಯೊಳಗೆ. ಸುಮಾರು 70 ವರ್ಷಗಳ ಹಿಂದೆ ತರೀಕೆರೆ ತಾಲೂಕಿನ ಚಿಕ್ಕಾತೂರು ಮಾರ್ಗದಲ್ಲಿನ ದಳವಾಯಿ ಕೆರೆಯ ಏರಿ ದುರಸ್ಥಿ ಮಾಡಲು ಕೆರೆ ಏರಿ ಅಗೆಯುವಾಗ ಈ ಮೂರ್ತಿ ಸಿಕ್ಕಿದೆ.

ಇದನ್ನೂ ಓದಿ: ರಾಮಮಂದಿರದ ತಳಪಾಯದಿಂದ ಹಿಡಿದ ರಾಮ ಮೂರ್ತಿ ವರೆಗೂ ಕನ್ನಡಿಗರದ್ದೇ ಕೆಲಸ

ಈ ಅಪರೂಪದ ಈ ಪಟ್ಟಾಭಿರಾಮನ ವಿಗ್ರಹ ನಮಗೇ ಬೇಕೆಂದು ಅಂದು ತರೀಕೆರೆ ತಾಲೂಕಿನ ಎರಡು ಗ್ರಾಮಗಳ ಮಧ್ಯೆ ಗಲಾಟೆ-ಮಾತಿನ ಚಕಮಕಿ ಕೂಡ ನಡೆದಿತ್ತು. ಆದರೆ, ಅಂದು ಈ ಪಟ್ಟಾಭಿರಾಮನ ಮೂರ್ತಿಯನ್ನ ಎತ್ತಿನಗಾಡಿಯಲ್ಲಿ ಹೊತ್ತು ತಂದಿದ್ದರು‌. 1962ರ ನವೆಂಬರ್ ತಿಂಗಳಿನಲ್ಲಿ ಸಿಕ್ಕ ಈ ಮೂರ್ತಿಯನ್ನ 1982ರ ಮಾರ್ಚ್‍ನಲ್ಲಿ ಪ್ರತಿಷ್ಠಾಪನೆ ಮಾಡಿದ್ದರು. ಅಂದಿನಿಂದಲೂ ಸೀತೆಯನ್ನ ತನ್ನ ತೊಡೆ ಮೇಲೆ ಕೂರಿಸಿಕೊಂಡಿರುವ ಈ ಪಟ್ಟಾಭಿರಾಮನಿಗೆ ಪೂಜೆ-ಪುನಸ್ಕಾರ-ಕ್ರೈಂಕರ್ಯಗಳು ನಿರಂತರವಾಗಿ ನಡೆದುಕೊಂಡು ಬಂದಿದೆ.

ಇದನ್ನೂ ಓದಿ: ಮೈಸೂರು: ಶ್ರೀರಾಮನ ಲಕ್ಷ ದೀಪೋತ್ಸವಕ್ಕೆ ಅನುಮತಿ ರದ್ದು, 111 ಅಡಿ ಉದ್ದದ ಅಗರಬತ್ತಿ ಉರಿಯಲು 2 ತಾಸು ಅನುಮತಿ

ದಳವಾಯಿ ಕೆರೆ ಅಂಚಿನಲ್ಲಿ ಶತಮಾನಗಳ ಹಿಂದೆ ದೇವಸ್ಥಾನ ಇತ್ತು ಅನ್ನೋದು ಸ್ಥಳಿಯರ ಮಾತಾಗಿದ್ದು, ಇಂದಿಗೂ ಕೆರೆ ಏರಿಯಲ್ಲಿರುವ ದೇವಸ್ಥಾನದ ಕಲ್ಲುಗಳು ಇದಕ್ಕೆ ಸಾಕ್ಷಿಯಾಗಿವೆ. ಆ ಕಲ್ಲುಗಳು ದೇವಸ್ಥಾನದ ಕಲ್ಲುಗಳೇ ಎಂಬುದನ್ನು ಒತ್ತಿ ಒತ್ತಿ ಹೇಳುತ್ತಿವೆ. ಶತಮಾನಗಳ ಹಿಂದೆ ಇದ್ದ ದೇವಸ್ಥಾನ ನಶಿಸಿ ಹೋಗಿದ್ದು ನಾಶವಾದ ದೇವಾಲಯದ ಒಳಗಿದ್ದ ರಾಮನ ವಿಗ್ರಹ ಮಣ್ಣಿನಡಿ ಹಾಗೂ ದೇವಸ್ಥಾನದ ಕಲ್ಲುಗಳ ಅವಶೇಷದೊಂದಿಗೆ ಮುಚ್ಚಿ ಹೋಗಿದ್ದಿರಬಹುದು ಎಂದು ತುದಿಪೇಟೆಯಲ್ಲಿರುವ ಸ್ಥಳೀಯರ ನಂಬಿಕೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?