ರಾಮಮಂದಿರದ ತಳಪಾಯದಿಂದ ಹಿಡಿದ ರಾಮ ಮೂರ್ತಿ ವರೆಗೂ ಕನ್ನಡಿಗರದ್ದೇ ಕೆಲಸ

ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಕರ್ನಾಟಕಕ್ಕೂ ಮತ್ತು ಅಯೋಧ್ಯೆ ರಾಮಮಂದಿರಕ್ಕೂ ಸಾಕಷ್ಟು ನಂಟಿದೆ. ಅಯೋಧ್ಯ ನಿರ್ಮಾಣ ಕಾರ್ಯದಲ್ಲಿ ಕನ್ನಡಿಗರ ಕೆಲಸ ಶ್ಲಾಘನೀಯ. ರಾಮಮಂದಿರ ತಾಳಪಯ ಬಹಳ ಮುಖ್ಯವಾಗಿರುತ್ತೆ. ಈ ತಳಪಯದಲ್ಲಿ ಕೆಲಸ ಮಾಡಿದ್ದು ನಮ್ಮ ಕನ್ನಡಿಗರು.

Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Jan 21, 2024 | 12:50 PM

ಬೆಂಗಳೂರು, ಜನವರಿ 21: ಅಯೋಧ್ಯೆ (Ayodhya) ಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಕರ್ನಾಟಕಕ್ಕೂ ಮತ್ತು ಅಯೋಧ್ಯೆ ರಾಮಮಂದಿರಕ್ಕೂ ಸಾಕಷ್ಟು ನಂಟಿದೆ. ಇದಕ್ಕೆ ಸಾಕ್ಷ್ಯವೆಂಬಂತೆ ರಾಜ್ಯದಲ್ಲಿ ಸಾಕಷ್ಟು ಕುರುಹುಗಳು ಪತ್ತೆ ಆಗಿವೆ. ಅಷ್ಟೇ ಅಲ್ಲದೆ ಅಯೋಧ್ಯ ನಿರ್ಮಾಣ ಕಾರ್ಯದಲ್ಲಿ ಕನ್ನಡಿಗರ ಕೆಲಸ ಶ್ಲಾಘನೀಯ. ರಾಮಮಂದಿರ ತಾಳಾಪಯ ಬಹಳ ಮುಖ್ಯವಾಗಿರುತ್ತೆ. ಈ ತಳಪಾಯದಲ್ಲಿ ಕೆಲಸ ಮಾಡಿದ್ದು ನಮ್ಮ ಕನ್ನಡಿಗರು. ಮುನಿರಾಜ್ ಮತ್ತು ಧನರಾಜ್ ರಾಮಮಂದಿರ ತಳಪಾಯಕ್ಕಾಗಿ ಕೆಲಸ ಮಾಡಿದವರು.

ಭೂಕಂಪ ಬಂದರೂ ಏನು ಆಗಬಾರದು: ಮುನಿರಾಜ್

ಈ ಕುರಿತಾಗಿ ಮಾತನಾಡಿರುವ ಮುನಿರಾಜ್​, ರಾಮಮಂದಿರಕ್ಕಾಗಿ ಸುಮಾರು 40 ಅಡಿ ತಳಪಾಯದಲ್ಲಿ ಮರಳು ಮತ್ತು ಸಿಮೆಂಟ್ ಹಾಕಿದ್ದೇವೆ. ಸಾದಹಳ್ಳಿಯ ಕಲ್ಲುಗಳನ್ನ ತಳಪಾಯದಲ್ಲಿ ಹಾಕಿದ್ದೇವೆ. ಭೂಕಂಪ ಬಂದರೂ ಏನು ಆಗಬಾರದು ಎಂದು ತಳಪಾಯ ಭದ್ರಪಡಿಸಿದ್ದೇವೆ. ಸಾವಿರು ವರ್ಷವಾದರೂ ರಾಮಮಂದಿರ ಏನು ಆಗುವುದಿಲ್ಲ. ಅತ್ಯಾದ್ಯುನಿಕ ತಂತ್ರಜ್ಞಾನ ಬಳಸಿ ನಾವು ಅಡಿಪಾಯ ಹಾಕಿದ್ದೇವೆ ಎಂದು ಹೇಳಿದ್ದಾರೆ.

ಕರ್ನಾಟಕದ ಪುಣ್ಯ ನಾವು ಇದರಲ್ಲಿ ಭಾಗಿಯಾಗಿದ್ದೇವೆ: ಧನರಾಜ್

ರಾಮಮಂದಿರ ಕಟ್ಟಿರುವ ಬಗ್ಗೆ ಧನರಾಜ್ ಪ್ರತಿಕ್ರಿಯಿಸಿದ್ದು, ಭೂಕಂಪ ಮತ್ತು ಪ್ರವಾಹ ಬಂದರೆ ರಾಮಮಂದಿರಕ್ಕೆ ಏನು ಆಗುವುದಿಲ್ಲ. ರಾಮ ಮಂದಿರ ನಿರ್ಮಾಣಕ್ಕೆ ಅತ್ಯಾಧ್ಯುನಿಕ ತಂತ್ರಜ್ಞಾನ ಮೂಲಕ ಕಲ್ಲು ಅಳವಡಿಕೆ ಮಾಡಲಾಗಿದೆ. ಎಲ್ಲಾ ಕಲ್ಲುಗಳನ್ನ ಟೆಸ್ಟ್‌ ಮಾಡಿಯೇ ಹಾಕಿದ್ದೇವೆ. ತಳಪಾಯದಲ್ಲಿ ನಾವು ಮರಳು ಮತ್ತು ಸಿಮೆಂಟ್‌ ಮಾತ್ರ ಬಳಸಿದ್ದೇವೆ. ಕಲ್ಲುಗಿಂತ ಗಟ್ಟಿಯಾಗಿ ನಾವು ಸಿಮೆಂಟ್ ಮತ್ತು ಮರಳು ಮಿಶ್ರಣ ಮಾಡಿದ್ದೇವೆ. ಕರ್ನಾಟಕದ ಪುಣ್ಯ ನಾವು ಇದರಲ್ಲಿ ಭಾಗಿಯಾಗಿದ್ದೇವೆ ಎಂದಿದ್ದಾರೆ.

ಅಯೋಧ್ಯೆ ರಾಮಮಂದಿರ ನಿರ್ಮಾಣ ಕೆಲಸದಲ್ಲಿ ಕೋಲಾರದ ಯುವಕ

ಅಯೋಧ್ಯೆ ರಾಮಮಂದಿರ ನಿರ್ಮಾಣ ಕೆಲಸದಲ್ಲಿ ಕೋಲಾರದ ಯುವಕ ಕೂಡ ಕೆಲಸ ಮಾಡಿದ್ದಾರೆ. ರಾಮ ಮಂದಿರದ ಎಲೆಕ್ಟ್ರಿಕ್ ಸೂಪರ್ವೈಸರ್ ಆಗಿ ಯುವಕ ಪ್ರವೀಣ್ ಕುಮಾರ್​ ಕೆಲಸ ಮಾಡುತ್ತಿದ್ದಾರೆ. ಪ್ರವಿಣ್ ಕುಮಾರ್, ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಬನಹಳ್ಳಿ ನಿವಾಸಿ. ಕಳೆದ ಎರಡು ತಿಂಗಳಿಂದ ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮೈಸೂರು: ಶ್ರೀರಾಮನ ಲಕ್ಷ ದೀಪೋತ್ಸವಕ್ಕೆ ಅನುಮತಿ ರದ್ದು, 111 ಅಡಿ ಉದ್ದದ ಅಗರಬತ್ತಿ ಉರಿಯಲು 2 ತಾಸು ಅನುಮತಿ

ಪ್ರವೀಣ್ ಕುಮಾರ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕಂಪನಿಗೆ ರಾಮಂದಿರದ ಎಲೆಕ್ಟ್ರಿಕ್ ಕೆಲಸದ‌ ಗುತ್ತಿಗೆ ಸಿಕ್ಕ ಹಿನ್ನೆಲೆ, ರಾಮಮಂದಿರ ನಿರ್ಮಾಣದ ಕೆಲಸಕ್ಕೆ ತರಳಿದ್ದಾರೆ.

ದೇಶದ ಹೆಮ್ಮೆಯ ಪ್ರತೀಕವಾಗಿರುವ ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಸೇವೆ ಸಲ್ಲಿಸುತ್ತಿರುವುದಕ್ಕೆ ಜಿಲ್ಲೆಯ ಮಟ್ಟಿಗೆ ಹೆಮ್ಮೆಯ ವಿಷಯವೆಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.