AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು: ಶ್ರೀರಾಮನ ಲಕ್ಷ ದೀಪೋತ್ಸವಕ್ಕೆ ಅನುಮತಿ ರದ್ದು, 111 ಅಡಿ ಉದ್ದದ ಅಗರಬತ್ತಿ ಉರಿಯಲು 2 ತಾಸು ಅನುಮತಿ

ಮೈಸೂರಿನಲ್ಲಿ ರಾಮ ರಾಜಕಾರಣ ಸಮರ ತಾರಕಕ್ಕೇರಿದ್ದು, 24 ದಿನ ಉರಿಯುವ ಅಗರಬತ್ತಿಗೆ ಮೈಸೂರು ಪೊಲೀಸರು 2 ತಾಸು ಮಾತ್ರ ಅನುಮತಿ ಕೊಟ್ಟಿದ್ದಾರೆ. ಆ ಮೂಲಕ ಸಿಎಂ ಸಿದ್ದರಾಮಯ್ಯ ತವರಲ್ಲಿ ಶ್ರೀರಾಮನ ಸಂಭ್ರಮಾಚರಣೆಗೆ ಹೆಜ್ಜೆ ಹೆಜ್ಜೆಗೂ ಅಡ್ಡಿ ಉಂಟಾಗುತ್ತಿದೆ ಎನ್ನಲಾಗುತ್ತಿದೆ. ಆಯೋಜಕರು 24 ದಿನ ಇಡಲು ಅನುಮತಿ ಕೇಳಿದ್ದರು. ಆದರೆ, ಪೊಲೀಸರು ಈ ಅಗರಬತ್ತಿ ಇಡಲು ಕೇವಲ 2 ತಾಸು ಅವಕಾಶ ನೀಡಿದ್ದಾರೆ.

ಮೈಸೂರು: ಶ್ರೀರಾಮನ ಲಕ್ಷ ದೀಪೋತ್ಸವಕ್ಕೆ ಅನುಮತಿ ರದ್ದು, 111 ಅಡಿ ಉದ್ದದ ಅಗರಬತ್ತಿ ಉರಿಯಲು 2 ತಾಸು ಅನುಮತಿ
111 ಅಡಿ ಉದ್ದದ ಅಗರಬತ್ತಿ
ರಾಮ್​, ಮೈಸೂರು
| Updated By: ಗಂಗಾಧರ​ ಬ. ಸಾಬೋಜಿ|

Updated on: Jan 21, 2024 | 11:49 AM

Share

ಮೈಸೂರು, ಜನವರಿ 21: ಜಿಲ್ಲೆಯಲ್ಲಿ ರಾಮ ರಾಜಕಾರಣ ಸಮರ ತಾರಕಕ್ಕೇರಿದ್ದು, 24 ದಿನ ಉರಿಯುವ ಅಗರಬತ್ತಿಗೆ ಮೈಸೂರು ಪೊಲೀಸರು 2 ತಾಸು ಮಾತ್ರ ಅನುಮತಿ ಕೊಟ್ಟಿದ್ದಾರೆ. ಆ ಮೂಲಕ ಸಿಎಂ ಸಿದ್ದರಾಮಯ್ಯ (Siddaramaiah) ತವರಲ್ಲಿ ಶ್ರೀರಾಮನ ಸಂಭ್ರಮಾಚರಣೆಗೆ ಹೆಜ್ಜೆ ಹೆಜ್ಜೆಗೂ ಅಡ್ಡಿ ಉಂಟಾಗುತ್ತಿದೆ ಎನ್ನಲಾಗುತ್ತಿದೆ. ರಂಗರಾವ್ ಅಂಡ ಸನ್ಸ್‌ನಿಂದ ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂದೆ ‘ಪರಂಪರಾ’ ಹೆಸರಿನಲ್ಲಿ 111 ಅಡಿ ಉದ್ದದ ಅಗರಬತ್ತಿ ಹಚ್ಚಲು ಸಿದ್ಧತೆ ಮಾಡಲಾಗಿದೆ. ಈ 111 ಅಡಿ ಉದ್ದದ ಅಗರ್ ಬತ್ತಿ 24 ದಿನ ಉರಿಯುತ್ತದೆ. ಹೀಗಾಗಿ ಆಯೋಜಕರು 24 ದಿನ ಇಡಲು ಅನುಮತಿ ಕೇಳಿದ್ದರು. ಆದರೆ, ಪೊಲೀಸರು ಈ ಅಗರಬತ್ತಿ ಇಡಲು ಕೇವಲ 2 ತಾಸು ಅವಕಾಶ ನೀಡಿದ್ದಾರೆ. ಎರಡು ತಾಸಿನ ಒಳಗೆ ಅಗರಬತ್ತಿಯನ್ನು ಅಲ್ಲಿಂದ ತೆಗೆಯಲು ಸೂಚಿಸಿದ್ದಾರೆ.

ಇದ್ದಿಲು, ಜಿಗಟು ಬಿದಿರು, ಶ್ರೀಗಂಧದ ಪುಡಿ, ಜೇನು ತುಪ್ಪ, ಸಾಂಬ್ರಣಿ, ಬಿಳಿ ಸಾಸಿವೆ, ಬೆಲ್ಲ ಸೇರಿದಂತೆ ಹಲವು ಪದಾರ್ಥ ಬಳಕೆ ಮಾಡಲಾಗಿದೆ. ಬ್ರಹ್ಮ, ವಿಷ್ಣು, ಮಹೇಶ್ವರ ಹೆಸರಿನಲ್ಲಿ 18 ನುರಿತ ಕುಶಲಕರ್ಮಿಗಳಿಂದ 23 ದಿನ ಕೆಲಸ ಮಾಡಿ 111 ಅಡಿ ಉದ್ದದ ವಿಶೇಷ ಅಗರಬತ್ತಿ ತಯಾರಿಕೆ ಮಾಡಲಾಗಿದೆ.

ಕೊನೆ ಕ್ಷಣದಲ್ಲಿ ಲಕ್ಷ‌ ದೀಪೋತ್ಸವ ರದ್ದು: ಅನುಮಾನಕ್ಕೆ ಕಾರಣವಾಯ್ತು ಪೊಲೀಸರ ನಡೆ

ಮೈಸೂರು ಅಶೋಕ ರಸ್ತೆಯಲ್ಲಿ ನಡೆಯಬೇಕಿದ್ದ ಲಕ್ಷ‌ ದೀಪೋತ್ಸವಕ್ಕೆ ನೀಡಿದ್ದ ಅನುಮತಿ ಕೊನೆ ಕ್ಷಣದಲ್ಲಿ ರದ್ದು ಮಾಡಲಾಗಿದೆ. ಜ 22 ರಂದು ಲಕ್ಷ ದೀಪೋತ್ಸವಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಆದರೆ ಅನುಮತಿ ರದ್ದುಪಡಿಸಿದ ಪೊಲೀಸ್ ಹಿಂಬರಹ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ರಾಮಮಂದಿರ ಉದ್ಘಾಟನೆ, ಆ ದಿನ ನೆತ್ತರು ಹರಿಯುವುದು ಗ್ಯಾರಂಟಿ ಎಂದ ಅನ್ಯಕೋಮಿನ ವ್ಯಕ್ತಿ

ಹೀಗಾಗಿ ಪೊಲೀಸರ ಅನುಮತಿ‌ ನಿರಾಕರಣೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಪೊಲೀಸರಿಂದ ಅನುಮತಿ ಸಹಾ ಪಡೆಯಲಾಗಿತ್ತು. ಇದೀಗ ಹೆಚ್ಚು ವಾಹನ ಸಂಚಾರ ಜನ ಸಂದಣಿ ಕಾರಣ ನೀಡಿ ಅನುಮತಿ ರದ್ದು ಮಾಡಲಾಗಿದೆ.

ರಾಮನ ಫೋಟೋಗೆ ಹೆಚ್ಚಾದ ಬೇಡಿಕೆ: ಫೋಟೋ ಖರೀದಿಗೆ ಮುಂದಾದ ಜನರು

ಹುಬ್ಬಳ್ಳಿ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಿನ್ನಲೆ ರಾಮನ ಫೋಟೋಗೆ ಬೇಡಿಕೆ ಹೆಚ್ಚಾಗಿದೆ. ಫೋಟೋ ಮಾರಾಟ ಮಳಿಗೆಗಳಲ್ಲಿ ರಾಮನ ಫೋಟೋಗೆ ಭಾರಿ ಡಿಮ್ಯಾಂಡ್ ಬಂದಿದೆ.​ ಹುಬ್ಬಳ್ಳಿಯ ಪಾನ ಬಜಾರ್ ಬಳಿ ಇರುವ ಫೋಟೋ ಅಂಗಡಿ ಮುಂದೆ ಜನ ಸೇರಿದ್ದಾರೆ. ರಾಮನ ಪೂಜೆ ಮಾಡಲು ಫೋಟೋ ಖರೀದಿಗೆ ಜನ ಬರುತ್ತಿದ್ದಾರೆ. ಕೆಲ ಅಂಗಡಿಗಳಲ್ಲಿ ಫೋಟೋಗಳೇ ಸಿಗುತ್ತಿಲ್ಲ.

ಕಳೆದ ನಾಲ್ಕೈದು ದಿನಗಳಲ್ಲಿ 300ಕ್ಕೂ ಹೆಚ್ಚು ಫೋಟೋ ಮಾರಾಟ ಮಾಡಿದ್ದೇವೆ ಎಂದು ಮಾಲೀಕ ಹೇಳಿದ್ದಾರೆ. ಫೋಟೋಗಳ ಖರೀದಿ ಮಾಡಲು ಅಂಗಡಿ ಮುಂದೆ ಜನ ಜಮಾಯಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ