ಚಿಕ್ಕಮಗಳೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ(HD Deve Gowda) ಶೃಂಗೇರಿಗೆ ಭೇಟಿ ನೀಡಿದ್ದು ಶಾರದಾಂಬೆಯ ದರ್ಶನ ಮಾಡಲಿದ್ದಾರೆ. ಹೆಚ್.ಡಿ. ದೇವೇಗೌಡ ಹಾಗೂ ಅವರ ಪತ್ನಿ ಚೆನ್ನಮ್ಮ ಹೆಲಿಕ್ಯಾಪ್ಟರ್ ಮೂಲಕ ಶೃಂಗೇರಿಗೆ(Sringeri) ಆಗಮಿಸಿದ್ದಾರೆ. ಪುತ್ರ ರೇವಣ್ಣ, ಪುತ್ರಿ ಅನುಸೂಯ ಕೂಡ ಇವರಿಗೆ ಸಾಥ್ ನೀಡಿದ್ದಾರೆ. ಸದ್ಯ ಮೂರು ವರ್ಷದ ನಂತರ ಶೃಂಗೇರಿಗೆ ಆಗಮಿಸಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ರಷ್ಯಾ ಮತ್ತು ಉಕ್ರೇನ್(Russia And Ukraine War) ನಡುವಿನ ಯುದ್ಧದ ಬಗ್ಗೆ ಮಾತನಾಡಿದ್ದಾರೆ.
ವಿಶ್ವದ ಹಲವು ದೇಶಗಳು ಯುದ್ಧ ಬೇಡ ಎನ್ನುತ್ತಿವೆ. ಆದರೆ ರಷ್ಯಾ ಮಾತ್ರ ಯುದ್ಧ ನಿಲ್ಲಿಸಲ್ಲ ಎನ್ನುತ್ತಿದೆ. ಪುಟಿನ್, ಮೋದಿ ಮಧ್ಯೆ ಉತ್ತಮ ಬಾಂಧವ್ಯ ಇದೆ. ಯುದ್ಧ ಶಮನಕ್ಕೆ ಪ್ರಧಾನಿ ಮೋದಿ ಪ್ರಯತ್ನಿಸುತ್ತಿದ್ದಾರೆ ಎಂದು ಶೃಂಗೇರಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ರು. ಗುರುಗಳ ದರ್ಶನ ಪಡೆದು, ಶಾರದಾಂಬೆಗೆ ನಮಸ್ಕರಿಸುತ್ತೇನೆ. ಈಶ್ವರ ದೇವಾಲಯಕ್ಕೆ ಪೂಜೆ ಸಲ್ಲಿಸಿ ನಾಳೆ ವಾಪಸ್ ಹೋಗುತ್ತೇನೆ. ಪ್ರತಿದಿನ ಪಕ್ಷ ಸಂಘಟನೆ ಕೆಲಸ ಮಾಡುತ್ತಿದ್ದೇನೆ, ಶಾರದಾಂಬೆ ದರ್ಶನ ಮಾಡಲು ಬಂದಿದ್ದೇನೆ. ಸಡನ್ನಾಗಿ 4 ದಿನದ ಹಿಂದೆ ಯುದ್ಧ ಮಾಡೋದಾಗಿ ರಷ್ಯಾದ ಅಧ್ಯಕ್ಷರು ಹೇಳಿದ್ರು. ಆಗಲೇ ಉಕ್ರೇನ್ ಮೇಲೆ ಯುದ್ಧ ಶುರುಮಾಡಿದ್ದಾರೆ. ಪ್ರಪಂಚದ ಅನೇಕ ರಾಷ್ಟ್ರಗಳು ಯುದ್ಧ ಬೇಡವೆಂದು ಹೇಳುತ್ತಿದೆ. ಆದರೆ ರಷ್ಯಾ ಮಾತ್ರ ನಾನು ನಿಲ್ಲಿಸುವುದಿಲ್ಲ ಅಂತ ಹೇಳುತ್ತಿದೆ. ಯುದ್ಧ ಶಮನ ವಾಗಬೇಕೆಂದು ನಮ್ಮ ಪ್ರಧಾನ ಮಂತ್ರಿಗಳು ಪ್ರಯತ್ನ ಮಾಡುತ್ತಿದ್ದಾರೆ. ರಷ್ಯಾದ ಪುಟಿನ್-ಮೋದಿಯವರು ಉತ್ತಮ ಬಾಂಧವ್ಯ ಹೊಂದಿದ್ದಾರೆ ಎಂದು ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಮಾಜಿ ಪ್ರಧಾನಿ ಪ್ರತಿಕ್ರಿಯೆ ನೀಡಿದ್ದಾರೆ.
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಇಂದು ನಾಳೆ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿ ವಾಪಾಸ್ ಆಗಲಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಕೊವಿಡ್‌ನಿಂದಾಗಿ ಹೆತ್ತವರು, ಪೋಷಕರನ್ನು ಕಳೆದುಕೊಂಡಿದ್ದು 19 ಲಕ್ಷ ಮಕ್ಕಳು