ಚಿಕ್ಕಮಗಳೂರು: ವೈದ್ಯರ ಎಡವಟ್ಟು: ಅನಸ್ತೇಷಿಯಾದಿಂದ ಮಹಿಳೆ ಬದುಕೇ ನಾಶ, ಗಂಡನೇ ಆಸರೆ

ಹೆರಿಗೆ ವೇಳೆ ವೈದ್ಯರು ಕೊಟ್ಟ ಅನಸ್ತೇಷಿಯಾ ಮಹಿಳೆಯ ಬದುಕನ್ನೇ ತಿಂದಿದೆ. ಆಕೆಗೆ ಗಂಡನೇ ಆಕೆ ಬೆನ್ನುಲುಬು. ಲೀವಿಂಗ್ ಟುಗೆದರ್ ಅಂತ ನಗರಗಳಲ್ಲಿ ಸಂಬಂಧಕ್ಕೆ ಬೆಲೆ ಇಲ್ಲದಂತೆ ಶೋಕಿಯಾಗಿ ಬದುಕೋರು ನೋಡಲೇಬೇಕಾದ ಸ್ಟೋರಿ ಇದು. ಕಾಫಿನಾಡು ಚಿಕ್ಕಮಗಳೂರಿನ ಈ ನೋವಿನ ಕಥೆಯಿಂದ ಸರ್ಕಾರ-ಯುವಜನತೆ ಬುದ್ಧಿ ಕಲಿಯಬೇಕಿದೆ. ಏನಿದು ಅಂತೀರಾ? ಇಲ್ಲಿದೆ. 

ಚಿಕ್ಕಮಗಳೂರು: ವೈದ್ಯರ ಎಡವಟ್ಟು: ಅನಸ್ತೇಷಿಯಾದಿಂದ ಮಹಿಳೆ ಬದುಕೇ ನಾಶ, ಗಂಡನೇ ಆಸರೆ
ಸಂಕಷ್ಟದಲ್ಲಿ ಕಳಸ ತಾಲೂಕಿನ ಕುಟುಂಬ
Edited By:

Updated on: Dec 28, 2023 | 5:57 PM

ಚಿಕ್ಕಮಗಳೂರು, ಡಿ.28: ಜಿಲ್ಲೆಯ ಕಳಸ(Kalasa) ತಾಲೂಕಿನ ಕಲ್ಕೋಡು ಗ್ರಾಮದ ಶಂಕರ್‌ ಹಾಗೂ ಸೌಮ್ಯ ದಂಪತಿಯ ಬದುಕು ಆಧುನಿಕತೆಗೆ ಮಾದರಿಯಾಗಿದೆ. ಹೆರಿಗೆ ವೇಳೆ ವೈದ್ಯರು ಕೊಟ್ಟ ಅನಸ್ತೇಷಿಯಾ ಮಹಿಳೆಯ ಬದುಕನ್ನೇ ತಿಂದಿದೆ. ಆಕೆಗೆ ಗಂಡನೇ  ಬೆನ್ನುಲುಬು. ಲೀವಿಂಗ್ ಟುಗೆದರ್ ಎಂದು ನಗರಗಳಲ್ಲಿ ಸಂಬಂಧಕ್ಕೆ ಬೆಲೆ ಇಲ್ಲದಂತೆ ಶೋಕಿಯಾಗಿ ಬದುಕುವವರು ಇವರನ್ನು ನೋಡಿ ಕಲಿಯಬೇಕು. 24 ವರ್ಷದ ಹಿಂದೆ ಹೆರಿಗೆ ವೇಳೆ ವೈದ್ಯರು ಕೊಟ್ಟ ಅನಸ್ತೇಶಿಯಾ ಈಕೆ ಬದುಕನ್ನೇ ತಿಂದಿದೆ.

ಕಳೆದ ಮೂರೂವರೆ ವರ್ಷಗಳಿಂದ ಸೊಂಟದಿಂದ ಕೆಳಗೆ ಸ್ವಾಧೀನ ಕಳೆದುಕೊಂಡು ಹಾಸಿಗೆ ಹಿಡಿದಿದ್ದರು. ಈಗ ಧರ್ಮಸ್ಥಳ ಸಂಘದಿಂದ ಕೊಟ್ಟ ವೀಲ್ ಚೇರ್ ಸೇರಿದ್ದಾಳೆ. ಆಸ್ಪತ್ರೆಗೆ ಹೋಗಬೇಕಂದರೆ 8 ಕಿ.ಮೀ. ಹೋಗಬೇಕು. ರಸ್ತೆ ಕೂಡ ಇಲ್ಲ. ಅಟೋ ಬಾಡಿಗೆ 700 ರೂ. ನಿತ್ಯ ಗಂಡ ದುಡಿಯೋದೆ 500 ರೂಪಾಯಿ, ಹೀಗಿರುವಾಗ 700 ರೂ ಎಲ್ಲಿ ತರುವುದು. ಗಂಡ ದುಡೀಬೇಕು ಇಡೀ ಕುಟುಂಬವನ್ನು ನೋಡಿಕೊಳ್ಳಬೇಕು. ಗಂಡ ಕೂಲಿಗೆ ಹೋಗುವ ಮುನ್ನ ಬೆಳಗ್ಗೆ ಬೇಗ ಎದ್ದು ಅಡುಗೆ ಮಾಡಿ, ಹೆಂಡ್ತಿಗೆ ತಿನ್ನಿಸಿ. ಬಳಿಕ ಶಂಕರ್‌, ಹೊತ್ತುಕೊಂಡೇ ಹೋಗಿ ಆಕೆಯ ನಿತ್ಯ ಕರ್ಮಗಳನ್ನ ಮುಗಿಸಿ ಕೆಲಸಕ್ಕೆ ಹೋಗುತ್ತಾರೆ.

ಇದನ್ನೂ ಓದಿ:Success Story: 21ನೇ ವಯಸ್ಸಿನಲ್ಲಿ ಭಾರತದ ಅತ್ಯಂತ ಕಿರಿಯ IPS ಅಧಿಕಾರಿಗಳಲ್ಲಿ ಒಬ್ಬರಾದ ಆದರ್ಶ್ ಕಾಂತ್ ಶುಕ್ಲಾ!

ಈ ಆದರ್ಶ ಪತಿಯ ಈ ಜೀವನಕ್ಕೆ 4 ವರ್ಷದ ಇತಿಹಾಸ

ಇನ್ನು ಈ ಕುಟುಂಬಕ್ಕೆ ಇರುವುದಕ್ಕೆ ಸೂರಿಲ್ಲ. ನಾಲ್ಕು ಕಂಬದ ಸುತ್ತ ಟಾರ್ಪಲ್, ಸೀರೆ-ಪಂಚೆಯಲ್ಲಿ ಗೋಡೆ ಕಟ್ಟಿಕೊಂಡಿದ್ದಾರೆ. ಗಾಳಿ ಜೋರಾಗಿ ಬಂದ್ರೆ ಎಲ್ಲಾ ಹಾರಿ ಹೋಗಿರುತ್ತೆ. ಮನೆಯೇ ಇಲ್ಲ. ಕರೆಂಟ್ ಇನ್ನೆಲ್ಲಿ. ಮಳೆಗಾಲದಲ್ಲಿ ಈ ಭಾಗದಲ್ಲಿ ಯತೇಚ್ಛವಾಗಿ ಮಳೆ ಬರುತ್ತೆ. ಆಗ ಇವರ ಬದುಕು ದೇವರಿಗೇ ಪ್ರೀತಿ. ಈ ಮಧ್ಯೆ ಇವರಿಗೆ ರೇಷನ್ ಕಾರ್ಡ್​ ಕೂಡ ಇಲ್ಲ. ಸರ್ಕಾರದ ರೇಷನ್ ಇವ್ರಿಗೆ ಮರಿಚಿಕೆಯೇ ಸರಿ. ಸರ್ಕಾರದಿಂದಲೂ ಇವರಿಗೆ ಯಾವುದೇ ಸೌಲಭ್ಯವಿಲ್ಲ. ನಾಲ್ಕು ವರ್ಷದಿಂದ ಹಾಸಿಗೆ ಹಿಡಿದಿದ್ದ ಸೌಮ್ಯಳ ಸ್ಥಿತಿ ನೋಡಲಾಗದೆ ಧರ್ಮಸ್ಥಳ ವಿಪತ್ತು ಘಟಕದವರು ಹಣ ಹಾಕಿ ವೀಲ್ ಚೇರ್ ಕೊಡಿಸಿದ್ದಾರೆ. ಅದರಲ್ಲಿ ಮನೆ ಅಕ್ಕ-ಪಕ್ಕ ಓಡಾಡ್ತಿದ್ದಾರೆ. ಕೂಲಿ ಮಾಡಿಕೊಂಡು ಜೀವನ ಮಾಡುವುದು ಇವರಿಗೆ ಕಷ್ಟವಾಗಿದೆ.

ಸರ್ಕಾರದ ಮೊರೆ

ಇವರಿಗೆ ಈಗ ಆಸ್ಪತ್ರೆಗೂ ಹೋಗಲಾಗುತ್ತಿಲ್ಲ. ಮನೆ, ಕರೆಂಟ್, ರೇಷನ್ ಕಾರ್ಡ್, ಆಧಾರ್ ಕಾರ್ಡ್ ಯಾವುದು ಇಲ್ಲ. ಸರ್ಕಾರ ಹಾಗೂ ಅಧಿಕಾರಿಗಳು ನಮಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿ ನಮಗೂ ಸೌಲಭ್ಯ ನೀಡಬೇಕೆಂದು ಬೇಡಿಕೊಂಡಿದ್ದಾರೆ. ಒಟ್ಟಾರೆ, ಲಿವಿಂಗ್ ಟುಗೆದರ್ ಹೆಸರಲ್ಲಿ ಬೇಕಾದವರ ಜೊತೆ ಬೇಕಾದಷ್ಟು ದಿನವಿದ್ದು ಬಿಟ್ಟೋಗೋ ಆಧುನಿಕತೆಯ ಜೀವನದಲ್ಲಿ 4 ವರ್ಷದಿಂದ ಹೆಂಡತಿ ಸೇವೆ ಮಾಡುತ್ತಿರುವ ಗಂಡನ ಕಥೆ ಸಮಾಜಕ್ಕೆ ಮಾದರಿ. ಕೂಡಲೇ ನಿರ್ಗತಿಕರ ರೀತಿ ಏನೂ ಇಲ್ಲದಂತೆ ಬದುಕುತ್ತಿರುವ ಈ ಕಡು ಬಡತನದ ಕುಟುಂಬಕ್ಕೆ ಸರ್ಕಾರವೂ ಬೆನ್ನುಲುಭಾಗಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ