ಕುಗ್ರಾಮದಲ್ಲಿ ಹುಟ್ಟಿ, ಅಂಧತ್ವವನ್ನ ಮೀರಿ ದೇಶಕ್ಕೆ ಎರಡು ಚಿನ್ನದ ಪದಕ ಗೆದ್ದು ತಂದ ಸಾಧಕಿಯನ್ನು ಕಡೆಗಣಿಸಿದ ಸರ್ಕಾರ
ಆಕೆ ಭಾರತದ ಪಾಲಿಗೆ ಚಿನ್ನದ ಹುಡುಗಿ, ಎರಡು ಬಾರಿ ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಗೆದ್ದು ತಂದ ಕಾಫಿನಾಡಿನ ಅಂಧ ಓಟಗಾರ್ತಿ, ಚೀನಾದಲ್ಲಿ ನಡೆದ ಪ್ಯಾರಾ ಒಲಿಂಪಿಕ್ ನಲ್ಲಿ ಚಿನ್ನ ಗೆದ್ದವರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ಹೆಮ್ಮೆ ಪಟ್ರು. ಆದರೆ ರಾಜ್ಯ ಸರ್ಕಾರ, ಕ್ರೀಡಾ ಇಲಾಖೆಯಿಂದ ಕನಿಷ್ಠ ಗುರುತಿಸುವ ಇವರ ಸಾಧನೆಗೆ ಪ್ರೋತ್ಸಾಹಿಸಿ ಗೌರವಿಸುವ ಕೆಲಸವು ನಡೆದಿಲ್ಲ. ಇದರಿಂದ ನೊಂದ ಮಲೆನಾಡಿಗರು ನಮ್ಮ ಸಿಎಂ ,ಕ್ರೀಡಾ ಸಚಿವರು ಎಲ್ಲಿದ್ದಾರೆ ಅವರಿಗೆ ಚಿನ್ನ ಗೆದ್ದ ಅಥ್ಲೆಟಿಕ್ಸ್ ಕಾಣಿಸುತ್ತಿಲ್ವಾ ಎಂದು ಆಕ್ರೋಶಗೊಂಡಿದ್ದಾರೆ.
ಚಿಕ್ಕಮಗಳೂರು, ನ.27: ಚೀನಾದಲ್ಲಿ ನಡೆದ ಪ್ಯಾರಾ ಏಷಿಯಾ ಒಲಂಪಿಕ್‍ನಲ್ಲಿ ಚಿನ್ನದ ಪದಕ ಗೆದ್ದು (Gold Medal) ಗೆಲುವಿನ ನಾಗಾಲೋಟದಲ್ಲಿರೋ ಕಾಫಿನಾಡ ಅಂಧ ಅಥ್ಲಿಟ್ ರಕ್ಷಿತಾ ರಾಜು ಅವರು ಅಪರೂಪದ ಸಾಧನೆ ಮಾಡಿ ದೇಶಕ್ಕೆ ಹೆಮ್ಮೆಯಾಗಿದ್ದಾರೆ. ಇವರ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ರಾಜ್ಯ ಸರ್ಕಾರ, ಕ್ರೀಡಾ ಇಲಾಖೆ ಪ್ರೋತ್ಸಾಹಿಸಿ ಗೌರವಿಸುವ ಕೆಲಸವನ್ನು ಮಾಡಿಲ್ಲ. ಇದು ಜನರ ಆಕ್ರೋಶ್ಕಕೆ ಕಾರಣವಾಗಿದೆ.
ರಕ್ಷಿತಾ ಮೂಲತಃ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಾಡಂಚಿನ ಕುಗ್ರಾಮ ಗುಡ್ನಳ್ಳಿಯವರು. ಚಿಕ್ಕಂದಿನಲ್ಲೇ ಹೆತ್ತವರನ್ನ ಕಳೆದುಕೊಂಡಿದ್ದ ರಕ್ಷಿತರಾಜು ಮಾತು ಬಾರದ, ಕಿವಿಯೂ ಕೇಳಿಸದ ಅಜ್ಜಿ ಜೊತೆ ಬೆಳೆದು ಚಿಕ್ಕಮಗಳೂರಿನ ಅಂಧ ಮಕ್ಕಳ ಶಾಲೆಯಲ್ಲಿ ಓದಿ ಕ್ರೀಡಾಸಕ್ತಿ ಬೆಳೆಸಿಕೊಂಡು ಇಂದು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪುಟವಾಗಿದ್ದಾರೆ. ಕಳೆದ ತಿಂಗಳು ಚೀನಾದ ಹಾಗೌಂಜ್‍ನಲ್ಲಿ ನಡೆದ ಪ್ಯಾರಾ ಎಷಿಯಾ ಒಲಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದು ಬೀಗಿದ್ದಾರೆ. ಚೀನಾದಿಂದ ಬಂದ ಬಳಿಕ ಕೇಂದ್ರ ಸರ್ಕಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪ್ರಧಾನಿ ಮೋದಿಗೆ ಟಿಟ್ಟರ್ ಗಿಫ್ಟ್ ನೀಡಿದ್ದಾರೆ. ಇದು ಭಾರತದಲ್ಲೇ ಸಿಗುವುದಿಲ್ಲ. ಚೀನಾದಿಂದ ತಂದಿದ್ದು. 2018-23ರಲ್ಲಿ ಎರಡು ಚಿನ್ನ ಗೆದ್ದ ಟಿಟ್ಟರ್‍ನ ಪ್ರಧಾನಿಗೆ ಗಿಫ್ಟ್ ನೀಡಿದ್ದಾರೆ.
ಪ್ರಧಾನಿ ಮೋದಿ ಕೂಡ ಆಕೆಯ ಉಡುಗೊರೆಗೆ ಸಂತಸಪಟ್ಟು, ಪ್ಯಾರಾ ಒಲಂಪಿಕ್ಸ್ನಲ್ಲೂ ಚಿನ್ನ ಗೆಲ್ಲುವಂತೆ ಹಾರೈಸಿದ್ದಾರೆ. ಪ್ರಧಾನಿ ಮೋದಿ ಅವರಿಂದ ಸಿಕ್ಕ ಬೆಂಬಲ ಒಂದು ಕಡೆಯಾದ್ರೆ ನಮ್ಮ ಸರ್ಕಾರ ಕನಿಷ್ಠ ಚಿನ್ನ ಗೆದ್ದು ದೇಶಕ್ಕೆ ಕೀರ್ತಿ ತಂದ ರಕ್ಷಿತಾ ರಾಜು ಅವರನ್ನ ಸೌಜನ್ಯಕ್ಕೂ ಮಾತನಾಡಿಸಿಲ್ಲ ಪಕ್ಕದ ರಾಜ್ಯದಲ್ಲಿ ಅಲ್ಲಿನ ಕ್ರೀಡಾಪಟುಗಳಿಗೆ ಸಿಗುವ ಪ್ರೋತ್ಸಾಹ ಗೌರವವನ್ನು ನೀಡಿಲ್ಲ ರಕ್ಷಿತಾ ರಾಜು ಸಾಧನೆಯ ಬಗ್ಗೆ ಪ್ರಧಾನಿ ಮೋದಿ, ಅಮಿತ್ ಶಾ ಟ್ವಿಟ್ ಮಾಡಿ ಗುರುತಿಸಿದ್ರು. ಆದರೆ ನಮ್ಮ ರಾಜ್ಯದಲ್ಲಿ ಇಂತಹ ಕ್ರೀಡಾ ಸಾಧಕರಿಗೆ ಯಾಕೆ ಗುರುತಿಸುತ್ತಿಲ್ಲ ಎಂದು ಮಲೆನಾಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಇದೇ ಮೊದಲ ಬಾರಿಗೆ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಹುಣ್ಣಿಮೆ ಪೂಜೆ
ಟಿಟ್ಟರ್ ಅಂದ್ರೆ ಅಂಧ ಓಟಗಾರರ ಜೊತೆ ಓಡುವ ಹಾಗೂ ಓಟಗಾರರಿಗೆ ಸಹಾಯ ಮಾಡುವ ಸಾಧನ. ಅದು ಹೀಗೆ ಇರಬೇಕೆಂದು ನಿಯಮವಿದೆ. ಅದನ್ನ ಅಂತರಾಷ್ಟ್ರೀಯ ಪ್ಯಾರಾ ಒಲಂಪಿಕ್ ಸಮಿತಿ ಸರ್ಟಿಫೈ ಮಾಡಿದೆ. ಅಂಧರ ಜೊತೆ ಓಡುವವರು ತಮ್ಮ ಕೈಗೆ ಹಾಕಿಕೊಂಡು ಅವರು ಓಡುವಂತೆಯೇ ಇವರು ಓಡಬೇಕು. ಅವರನ್ನ ಮುಟ್ಟುವಂತಿಲ್ಲ. ಎಳೆದುಕೊಂಡು ಓಡುವಂತಿಲ್ಲ. ಅಂಧರಿಗಿಂತ ಇವರೇ ಮೊದಲು ಓಡುವಂತಿಲ್ಲ. ಹೀಗೆ ಹತ್ತಾರು ಕಾನೂನುಗಳ ಮಧ್ಯೆ ಅಂಧ ಓಟಗಾರರು ಹಾಗೂ ಜೊತೆ ಓಟಗಾರರ ಮಧ್ಯೆ ಸಮಯೋಚಿತವಾಗಿ ಓಡಲು ಈ ಟಿಟ್ಟರ್ ಸಹಾಯ ಮಾಡುತ್ತೆ. ಅಂತಹಾ ಟಿಟ್ಟರ್‍ನ ರಕ್ಷಿತಾ ಮೋದಿಗೆ ಉಡುಗೊರೆ ನೀಡಿದ್ದಾರೆ.
ಕುಗ್ರಾಮದಲ್ಲಿ ಹುಟ್ಟಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರೋ ರಕ್ಷಿತಾ ಮನೆಗೆ ಹೋಗೋದಕ್ಕೆ ದಾರಿ ಇಲ್ಲ. ಕಾಫಿತೋಟದ ಕಾಲು ದಾರಿಯಲ್ಲಿ ಅವರ ಮನೆಗೆ ಹೋಗಬೇಕು. ಅವರ ಮನೆಗೆ ಹೋಗೋದಕ್ಕೆ ದಾರಿಯೂ ಇಲ್ಲ. ಚಿನ್ನ ಗೆದ್ದು ಊರಿಗೆ ಬಂದ ರಕ್ಷಿತಾ ಮನೆಗೆ ತೆರಳಲು ಕಾಫಿ ತೋಟದ ಕಾಲು ದಾರಿಯಲ್ಲಿ ಪಟ್ಟ ಕಷ್ಟ ನಮ್ಮ ಸರ್ಕಾರ ಜಿಲ್ಲಾಡಳಿತಕ್ಕೆ ನಾಚಿಕೆ ತರಿಸುವಂತಿದ್ದು. ಸರ್ಕಾರ ಕೂಡಲೇ ಇತ್ತ ಗಮನಕ ಹರಿಸಿ ರಕ್ಷಿತಾ ಮನೆಗೆ ಹೋಗಲು ದಾರಿ, ಕುಸಿಯುವ ಸ್ಥಿತಿಯಲ್ಲಿರುವ ಮನೆ ಮಾಡಿಸಿಕೊಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಇದು ನಮ್ಮ ಸರ್ಕಾರಕ್ಕೆ ಕಷ್ಟವಾದ್ರೆ ಕನಿಷ್ಠ ಗೌರವಿಸಿ ಪ್ರೋತ್ಸಾಹಿಸುವ ಕೆಲಸ ಮಾಡಿ ಅಂತ ಜನರು ರಾಜ್ಯ ಸರ್ಕಾರಕ್ಕೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.
ಒಟ್ಟಾರೆ, ಕುಗ್ರಾಮದಲ್ಲಿ ಹುಟ್ಟಿ ಮಾತು ಬಾರದ ಅಜ್ಜಿ ಜೊತೆ ಬೆಳೆದು ಅಂಧ ಮಕ್ಕಳ ಶಾಲೆಯಲ್ಲಿ ಓದಿ ಕ್ರೀಡಾಸಕ್ತಿ ಬೆಳೆಸಿಕೊಂಡು ಮತ್ತೊಬ್ಬರ ಸಹಾಯದಿಂದ ಓಡಿ ದೇಶಕ್ಕೆ ಕೀರ್ತಿ ತಂದ ಈ ಯುವತಿಗೆ ಸರ್ಕಾರ ಸೂಕ್ತ ಬಹುಮಾನ ನೀಡಬೇಕೆಂದು ಸ್ಥಳೀಯರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಜೊತೆಗೆ, ಮನೆಗೆ ಹೋಗೋದಕ್ಕೆ ದಾರಿ ಇಲ್ಲ ಅಂತ ರಕ್ಷಿತಾ ಊರಿಗೆ ಬರೋದು ಕೂಡ ಕಡಿಮೆ. ಹಾಗಾಗಿ, ಸರ್ಕಾರ ಆಕೆ ಮನೆಗೆ ಹೋಗೋದಕ್ಕೆ ಕೂಡಲೇ ದಾರಿ ಮನೆ ನಿರ್ಮಿಸಿಕೊಡಬೇಕು. ಇಂತಹ ಹೆಮ್ಮೆಯ ಅಥ್ಲೆಟಿಕ್ಗಳನ್ನ ಗುರುತಿಸಿ ಬೆಳೆಸುವ ಕೆಲಸವನ್ನ ಮಾಡ್ಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಆದರೆ, ಸರ್ಕಾರ ಏನ್ ಮಾಡುತ್ತೋ ಕಾದುನೋಡ್ಬೇಕು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ