ಚಿಕ್ಕಮಗಳೂರು ಮುಳ್ಳಯ್ಯನಗಿರಿಯಲ್ಲಿ ಕಂಟ್ರೋಲ್ ಟೂರಿಸಂ, ಗಿರಿಗೆ ಬರಲು ಬುಕ್ ಮಾಡಿಕೊಂಡು ಬನ್ನಿ
ಕಾಫಿನಾಡು ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಯಲ್ಲಿ ಪ್ರವಾಸಿಗರ ವಾಹನ ದಟ್ಟಣೆ ಹೆಚ್ಚುತ್ತಿದೆ. ಹೀಗಾಗಿ, ಜಿಲ್ಲಾಡಳಿತ ಆ ನಿಸರ್ಗ ಮಾತೆಯ ತವರನ್ನು ಉಳಿಸಲು ಕಂಟ್ರೋಲ್ ಟೂರಿಸಂಗೆ ಮುಂದಾಗುತ್ತಿದೆ. ಹಾಗಾದರೆ, ಲಿಮಿಟೆಡ್ ಟೂರಿಸ್ಟಾ, ಟೂರಿಸ್ಟ್ ವೆಹಿಕಲ್ ಬ್ಯಾನಾ? ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಚಿಕ್ಕಮಗಳೂರು, ಜೂನ್ 26: ಮುಳ್ಳಯ್ಯನಗಿರಿ (Mullayangiri) ರಾಜ್ಯದ ಅತ್ಯಂತ ಎತ್ತರ ಶಿಖರ. ಎತ್ತ ನೋಡಿದರೂ ಮುಗಿಲೆತ್ತರದ ಬೆಟ್ಟಗುಡ್ಡಗಳು. ಇತ್ತೀಚಿನ ವರ್ಷಗಳಲ್ಲಿ ಪ್ರವಾಸಿಗರು, ವಾಹನಗಳಿಂದ ಮುಳ್ಳಯ್ಯನಗಿರಿ ಸೊರಗುತ್ತಿರುವುದೆ. ವೀಕ್ಎಂಡ್ನಲ್ಲಿ ಸಾವಿರಾರು ಜನರು ಇಲ್ಲಿಗೆ ಆಗಮಿಸುತ್ತಾರೆ. ಹೀಗೆ ಬರುವ ಪ್ರವಾಸಿಗರು ಸ್ವಂತ ವಾಹನದಲ್ಲಿ ಪ್ಲಾಸ್ಟಿಕ್, ಮದ್ಯವನ್ನು ತರುತ್ತಾರೆ. ಇದರಿಂದ ಮುಳ್ಳಯ್ಯಗಿರಿ ಮಲೀನವಾಗುತ್ತಿದೆ ಇದನ್ನು ತಡೆಗಟ್ಟಲು ಜಿಲ್ಲಾಡಳಿತ ಕಂಟ್ರೋಲ್ ಟೂರಿಸಂ (Control Tourism) ತೆರೆಯಲು ಮುಂದಾಗಿದೆ.
ಸರ್ಕಾರ ಮುಳ್ಳಯ್ಯನಗಿರಿಗೆ ಆನ್‍ಲೈನ್ ಪೋರ್ಟಲ್ ತೆರೆಯಲಿದ್ದು, ನಿತ್ಯ ಇಂತಿಷ್ಟೆ ಪ್ರವಾಸಿಗರು ಭೇಟಿ ನೀಡಬೇಕೆಂದು ನಿಯಮ ಜಾರಿಗೆ ತರಲಿದೆ. ಬುಕ್ಕಿಂಗ್ ಅನ್ನು ಕ್ಯೂಆರ್ ಕೋಡ್ ಅಥವಾ ವೆಬ್ ಪೋರ್ಟಲ್ಗೆ ಭೇಟಿ ನೀಡಿ ಬುಕ್ಕಿಂಗ್ ಮಾಡುವ ಅವಕಾಶವಿದೆ. ಅದು ಕಡಿಮೆ ಜನರಿಗೆ ಮಾತ್ರ ಅವಕಾಶವಿದೆ.
ಇದನ್ನೂ ಓದಿ: ಪಶ್ಚಿಮ ಘಟ್ಟ ವ್ಯಾಪ್ತಿಯ ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ
ಜಿಲ್ಲಾಡಳಿತ ಮುಳ್ಳಯ್ಯನಗಿರಿ ಉಳಿವಿಗೆ ಈ ಮಹತ್ವದ ಹೆಜ್ಜೆ ಇಟ್ಟಿದೆ. ಗಿರಿ ಭಾಗಕ್ಕೆ ಕಂಟ್ರೋಲ್ ಟೂರಿಸಂ ಮಾಡದಿದ್ದರೆ ಮುಂದೊಂದು ದಿನ ಗಿರಿಗೆ ಅನಾಹುತ ಕಟ್ಟಿಟ್ಟ ಬುತ್ತಿ. ಈಗಾಗಲೇ ಭಾರಿ ವಾಹನಗಳಿಗೆ ನಿಷೇಧಿಸಲಾಗಿದೆ. ಆದರೆ, ಇದೀಗ ಪ್ರವಾಸಿಗರ ಸಣ್ಣ ಸಣ್ಣ ವಾಹನಗಳಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಹೀಗಾಗಿ, ಮುಳ್ಳಯ್ಯನಗಿರಿಯ ಪಶ್ಚಿಮ ಘಟ್ಟಗಳ ಸಾಲನ್ನು ಉಳಿಸುವುದು ಅನಿವಾರ್ಯವಾಗಿದೆ. ಮುಂಜಾನೆ ಸಮಯದಲ್ಲಿ ಇಂತಿಷ್ಟು, ಮಧ್ಯಾಹ್ನದ ನಂತರ ಇಂತಿಷ್ಟು ವಾಹನಗಳಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ.
ಒಟ್ಟಾರೆ, ಜಿಲ್ಲಾಡಳಿತ ಕಂಟ್ರೋಲ್ ಟೂರಿಸಂ ತೆರೆಯಲು ಚಿಂತಿಸಿರುವುದನ್ನು ಸ್ಥಳೀಯರು ಮತ್ತು ಪರಿಸರವಾದಿಗಳು ಸ್ವಾಗತಿಸಿದ್ದಾರೆ. ಈ ಹಿಂದೆ ಕೂಡ ಇದೇ ಯೋಜನೆ ರೂಪಿಸಲಾಗಿತ್ತು. ಆದರೆ, ಕಂಪ್ಲೀಟ್ ಟೂರಿಸ್ಟ್ ವೆಹಿಕಲ್ ಬ್ಯಾನ್ ಮಾಡುವ ಆ ಯೋಜನೆಯೂ ಅರ್ಧಕ್ಕೆ ಮೊಟಕುಗೊಂಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ