AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಮಗಳೂರು: ಚುನಾವಣಾ ಹೊತ್ತಲ್ಲೇ ಹಿಂದೂ ಕಾರ್ಯಕರ್ತ ಗಡಿಪಾರು; ಜಿಲ್ಲಾಧಿಕಾರಿ ಆದೇಶ

ಲೋಕಸಭಾ ಚುನಾವಣೆ ಹಿನ್ನಲೆ ಯಾವುದೇ ಅಶಾಂತಿ ಉಂಟಾಗದಂತೆ ಕೆಲವರನ್ನು ಆಯಾ ಜಿಲ್ಲೆಗಳಿಂದ ಗಡಿಪಾರು ಮಾಡಲಾಗುತ್ತಿದೆ. ಅದರಂತೆ ಬಜಗರಂಗದಳದ‌ ಮಾಜಿ‌ ಜಿಲ್ಲಾ ಸಂಚಾಲಕ ತುಡುಕೂರು ಮಂಜು ಎಂಬುವವರನ್ನು ಗಡಿಪಾರು ಮಾಡಿ ಚಿಕ್ಕಮಗಳೂರು (Chikkamagaluru) ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶಿಸಿದ್ದಾರೆ.

ಚಿಕ್ಕಮಗಳೂರು: ಚುನಾವಣಾ ಹೊತ್ತಲ್ಲೇ ಹಿಂದೂ ಕಾರ್ಯಕರ್ತ ಗಡಿಪಾರು; ಜಿಲ್ಲಾಧಿಕಾರಿ ಆದೇಶ
ಜರಂಗದಳ ಮಾಜಿ‌ ಜಿಲ್ಲಾ ಸಂಚಾಲಕ ಚಿಕ್ಕಮಗಳೂರು ಜಿಲ್ಲೆಯಿಂದ ಗಡಿಪಾರು
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Edited By: |

Updated on:Apr 24, 2024 | 6:47 PM

Share

ಚಿಕ್ಕಮಗಳೂರು, ಏ.24: ಚುನಾವಣಾ ಹೊತ್ತಿನಲ್ಲಿ ಹಿಂದೂ ಕಾರ್ಯಕರ್ತ, ಬಜಗರಂಗದಳದ‌ ಮಾಜಿ‌ ಜಿಲ್ಲಾ ಸಂಚಾಲಕ ತುಡುಕೂರು ಮಂಜು ಎಂಬುವವರನ್ನು ಗಡಿಪಾರು ಮಾಡಿ ಚಿಕ್ಕಮಗಳೂರು(Chikkamagaluru) ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶಿಸಿದ್ದಾರೆ. ಚುನಾವಣೆಗೆ ಇನ್ನೂ ಒಂದು ದಿನ ಬಾಕಿ ಇರುವಂತೆ ಜಿಲ್ಲೆಯಲ್ಲಿ ಅಶಾಂತಿ ವಾತಾವರಣ ಸೃಷ್ಟಿಸುವ ಹಿನ್ನೆಲೆಯಲ್ಲಿ 17 ಕಾರಣಗಳನ್ನು ನೀಡಿ ಚಾಮರಾಜನಗರ ಜಿಲ್ಲೆಗೆ ಜಿಲ್ಲಾಡಳಿತ ಗಡಿಪಾರು ಮಾಡಿದೆ.

ಎರಡು ತಿಂಗಳ ಕಾಲ ಜಿಲ್ಲೆಯಿಂದ ಗಡಿಪಾರು ಮಾಡಿದ ಜಿಲ್ಲಾಡಳಿತ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದ ಮಂಜು, ಬಿಜೆಪಿ ಪಕ್ಷದೊಂದಿಗೆ ಸೇರಿಕೊಂಡು ಅಶಾಂತಿ ವಾತಾವರಣ ಸೃಷ್ಟಿಸಿ, ಮತದಾರರಿಗೆ ಹಣದ ಆಮಿಷ ಒಡ್ಡಿ, ಸ್ವತಂತ್ರವಾಗಿ ಮತದಾನ ಮಾಡಲು ಅಡ್ಡಿ ಉಂಟು ಮಾಡುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತ ಎರಡು ತಿಂಗಳ ಕಾಲ ಅಂದರೆ ಜೂನ್ 10 ರವರೆಗೂ ಚಿಕ್ಕಮಗಳೂರು ಜಿಲ್ಲೆಯಿಂದ ಗಡಿಪಾರು ಮಾಡಿದೆ.

ಇದನ್ನೂ ಓದಿ:ಲೋಕಸಭಾ ಚುನಾವಣೆ: ಚಿತ್ರದುರ್ಗ ಜಿಲ್ಲೆಯಿಂದ ಮೂವರನ್ನು ಗಡಿಪಾರು ಮಾಡಿದ ಉಪವಿಭಾಗಾಧಿಕಾರಿ

ನಟೋರಿಯಸ್​ ಕುಣಿಗಲ್ ಗಿರಿ ಗಡಿಪಾರು

ಇದೇ ಏಪ್ರಿಲ್​ 26 ರಂದು ತುಮಕೂರು ಜಿಲ್ಲೆಯಿಂದ ಕುಖ್ಯಾತ ರೌಡಿ ಕುಣಿಗಲ್‌ ಗಿರಿಯನ್ನು ಗಡಿಪಾರು ಮಾಡಿ ಆದೇಶಿಸಲಾಗಿತ್ತು. ಕಾನೂನು ಸುವ್ಯವಸ್ಥೆ ಹದಗೆಡದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದ್ದು, ಜಿಲ್ಲೆಯ 825 ರೌಡಿ ಶೀಟರ್​ಗಳಲ್ಲಿ 31 ಕುಖ್ಯಾತ ರೌಡಿಗಳನ್ನ‌ ಮಾತ್ರ ಜಿಲ್ಲೆಯಿಂದ ಗಡಿಪಾರು ಮಾಡಲಾಗಿತ್ತು. ಇನ್ನು ಇತ್ತೀಚೆಗಷ್ಟೆ ಕುಣಿಗಲ್ ತಾಲ್ಲೂಕಿನ ಮೋದೂರು ಗ್ರಾಮದ ನಟೋರಿಯಸ್​ ಕುಣಿಗಲ್ ಗಿರಿ ಜೈಲಿನಿಂದ ಬಿಡುಗಡೆಯಾಗಿದ್ದ. ಗಡಿಪಾರು ಮಾಡುವ ಮೂಲಕ ಇದೀಗ ಶಾಂತಿಯುತ ಚುನಾವಣೆ ನಡೆಸಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದು ತುಮಕೂರು ಎಸ್ಪಿ ಅಶೋಕ್ ಕೆವಿ ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 6:30 pm, Wed, 24 April 24