ಮಸೀದಿ ಎದುರು ಕೇಸರಿ ಬಾವುಟ! ಶಾರದಾಂಬೆ ನೆಲೆವೀಡು ಶೃಂಗೇರಿಯಲ್ಲಿ ಮುಂದುವರಿದ ಬಾವುಟಗಳ ಆವುಟ

ಶೃಂಗೇರಿ ಪಟ್ಟಣದ ವೆಲ್ಕಂ ಸರ್ಕಲ್​ನಲ್ಲಿ ಈ ಹಿಂದೆ ಕಾಂಗ್ರೆಸ್ ಬಾವುಟ ಹಾಕಲಾಗಿತ್ತು, ಆಗ ಯಾರೂ ಪ್ರಶ್ನೆ ಮಾಡಲಿಲ್ಲ. ಆದ್ರೆ ಕೇಸರಿ ಬಾವುಟ ಹಾಕೋಕೂ ಯಾಕೆ ವಿರೋಧ ಮಾಡ್ತೀರಾ..? ಕಾಂಗ್ರೆಸ್ ಬಾವುಟಕ್ಕೆ ಇಲ್ಲದ ವಿರೋಧ ಕೇಸರಿ ಬಾವುಟದ ಮೇಲೆ ಯಾಕೆ? - ಶ್ರೀರಾಮಸೇನೆ ಮುಖಂಡ ಅರ್ಜುನ್

ಮಸೀದಿ ಎದುರು ಕೇಸರಿ ಬಾವುಟ! ಶಾರದಾಂಬೆ ನೆಲೆವೀಡು ಶೃಂಗೇರಿಯಲ್ಲಿ ಮುಂದುವರಿದ ಬಾವುಟಗಳ ಆವುಟ
ಮಸೀದಿ ಎದುರು ಕೇಸರಿ ಬಾವುಟ! ಶಾರದಾಂಬೆ ನೆಲೆವೀಡು ಶೃಂಗೇರಿಯಲ್ಲಿ ಮುಂದುವರಿದ ಬಾವುಟಗಳ ಆವುಟ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Nov 09, 2022 | 6:31 PM

ಅದು ಸಾಕ್ಷಾತ್ ಶಾರದಾಂಬೆ ನೆಲೆಸಿರೋ ನೆಲೆವೀಡು (sringeri). ಆದ್ರೆ ಆಗಾಗ ಅಲ್ಲಿ ಒಂದಲ್ಲೊಂದು ವಿಚಾರಕ್ಕೆ ಆಗಾಗ ಸಂಘರ್ಷಗಳು ನಡೀತಲೇ ಇರುತ್ವೆ.. ನಿನ್ನೆ ಮಂಗಳವಾರ ಕೂಡ ಮಸೀದಿ (mosque) ಮುಂಭಾಗ ಕೇಸರಿ ಬಾವುಟ (saffron flag) ಕಟ್ಟಿದ ವಿಚಾರಕ್ಕೆ ಉಂಟಾದ ಸಣ್ಣ ಜಗಳ ದೊಡ್ಡದಾಗಿ ಸ್ಫೋಟಗೊಂಡಿದೆ. ಎರಡು ಕೋಮುಗಳ ನಡುವೆ ಕಂದಕ ಸೃಷ್ಟಿಯಾದಾಗ ಬೆಂಕಿ ಕಿಡಿಯಂತಿದ್ದ ಸಮಸ್ಯೆ ನೋಡು ನೋಡುತ್ತಲ್ಲೇ ಅಗ್ನಿಯ ಕೆನ್ನಾಲಿಗೆಯಂತೆ ಪ್ರಜ್ವಲಿಸತೊಡಗಿದೆ. ಒಂದು ಕ್ಷಣ ಖಾಕಿ ಪಡೆಯೇ ಶಾಕ್ ಗೆ ಒಳಗಾಯ್ತು. ಅಷ್ಟಕ್ಕೂ ಅಲ್ಲಿ ಆಗಿದ್ದೇನು ಅಂದರೆ.

ಅಲ್ಲಿ ಕಂಡಿದ್ದು… ಮಸೀದಿ ಎದುರುಗಿರುವ ಸರ್ಕಲ್​ನಲ್ಲಿ ಕಟ್ಟಿರುವ ಕೇಸರಿ ಬಾವುಟಗಳು.. ಅದೇ ವಿಚಾರವಾಗಿ ಪೊಲೀಸ್ ಠಾಣೆ ಒಳಗೆ ಮಾತಿನ ಚಕಮಕಿ.. ಸುಮ್ಮನಿದ್ದ ನನಗೆ ಬಂದು ಹಲ್ಲೆ ಮಾಡಿದ್ರು ಅಂತೀರೋ ಪಟ್ಟಣ ಪಂಚಾಯ್ತಿ ಸದಸ್ಯ. ಇದು ನಮ್ ಏರಿಯಾ, ಯಾಕ್ ಬಾವುಟ ಕಟ್ತೀರಾ ಅಂದ್ರು..? ಎಂದು ಪ್ರಶ್ನೆ ಮಾಡ್ದೆ ಅಂತಿರೋ ಶ್ರೀರಾಮ ಸೇನೆ ಮುಖಂಡ. ಈ ದೃಶ್ಯ ಕಂಡುಬಂದಿದ್ದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ.

ಹೌದು, ಕಳೆದ ಮೂರು ದಿನಗಳ ಹಿಂದೆ ಶ್ರೀರಾಮಸೇನೆ, ದತ್ತಮಾಲಾ ಅಭಿಯಾನದಲ್ಲಿ ಪಾಲ್ಗೊಂಡಿದೆ. ಕಾರ್ಯಕರ್ತರು ಮಾಲೆ ಧರಿಸಿ ನವೆಂಬರ್ 13ರಂದು ದತ್ತಾತ್ರೇಯನ ಪಾದಪೂಜೆಗೆ ಅಣಿಯಾಗಿದ್ದಾರೆ. ಈ ಮಧ್ಯೆ ಅಲ್ಲಲ್ಲಿ ಕೇಸರಿ ಬಾವುಟಗಳು, ಬಂಟಿಗ್ಸ್​ಗಳು ರಾರಾಜಿಸುತ್ತಿವೆ. ಹಾಗೆಯೇ ಶೃಂಗೇರಿ ಪಟ್ಟಣದ ವೆಲ್ಕಂ ಸರ್ಕಲ್​ನಲ್ಲಿ ಕೂಡ ಕೇಸರಿ ಬಾವುಟಗಳನ್ನ ಶ್ರೀರಾಮಸೇನೆ ಕಾರ್ಯಕರ್ತರು ಹಾಕಿದ್ರು.

ಆದ್ರೆ ಅಲ್ಲೇ ಮುಂಭಾಗದಲ್ಲಿ ಮಸೀದಿ ಇರೋದ್ರಿಂದ ಬಾವುಟಗಳನ್ನ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಈ ವಿಚಾರ ಪಟ್ಟಣ ಪಂಚಾಯ್ತಿ ಸದಸ್ಯ ರಫೀಕ್ ಹಾಗೂ ಶ್ರೀರಾಮಸೇನೆ ಮುಖಂಡ ಅರ್ಜುನ್ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದ್ದು, ಅರ್ಜುನ್ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿ ರಫೀಕ್ ಶೃಂಗೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ..

ಇದನ್ನೂ ಓದಿ: Tv9 Exclusive: ಹಿಂದೂ ಪದಕ್ಕೆ ಹೀನಾರ್ಥವಿದೆ ಎಂದ ಸತೀಶ್ ಜಾರಕಿಹೊಳಿ ಹೇಳಿಕೆ ಭಾರತದ ಪರಂಪರೆಗೆ ಮಾಡಿದ ಅವಮಾನ; ಜಿ.ಬಿ.ಹರೀಶ್, ಶೆಲ್ವಪಿಳ್ಳೆ ಅಯ್ಯಂಗಾರ್

ಆದ್ರೆ ಹಲ್ಲೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅರ್ಜುನ್, ನಾನು ರಫೀಕ್ ಮೇಲೆ ಯಾವುದೇ ಹಲ್ಲೆ ಮಾಡಿಲ್ಲ. ಇದೇ ಸರ್ಕಲ್​ನಲ್ಲಿ ಈ ಹಿಂದೆ ಕಾಂಗ್ರೆಸ್ ಬಾವುಟ ಹಾಕಲಾಗಿತ್ತು, ಆಗ ಯಾರೂ ಪ್ರಶ್ನೆ ಮಾಡಲಿಲ್ಲ. ಆದ್ರೆ ಕೇಸರಿ ಬಾವುಟ ಹಾಕೋಕೂ ಯಾಕೆ ವಿರೋಧ ಮಾಡ್ತೀರಾ..? ನಾವು ಹಾಕಿರೋದು ಸರ್ಕಲ್​ನಲ್ಲಿ, ಕಾಂಗ್ರೆಸ್ ಬಾವುಟಕ್ಕೆ ಇಲ್ಲದ ವಿರೋಧ ಕೇಸರಿ ಬಾವುಟದ ಮೇಲೆ ಯಾಕೆ? ಅಲ್ಲದೇ ನಮ್ಮ ಏರಿಯಾದಲ್ಲಿ ಕೇಸರಿ ಬಾವುಟ ಕಟ್ಟುವ ಹಾಗಿಲ್ಲ ಎಂದರು… ಹಾಗಾಗೀ ಪ್ರಶ್ನೆ ಮಾಡ್ದೆ ಅಷ್ಟೇ, ನಾನು ಹಲ್ಲೆ ಮಾಡಿಲ್ಲ. ನಾನು ಗುಂಪು ಕಟ್ಟಿಕೊಂಡು ಹೋಗಿರಲಿಲ್ಲ. ಅವರು ಆರೇಳು ಜನರಿದ್ರು, ನಾನು ಹೋಗಿದ್ದು ಒಬ್ಬನೇ.. ಹೇಗೆ ಹಲ್ಲೆ ಮಾಡಲಿ ಅಂತಾ ಪ್ರಶ್ನೆ ಮಾಡಿದ್ದಾರೆ.

ಸದ್ಯ ಎರಡೂ ಕಡೆಯವರು ಒಬ್ಬರ ಮೇಲೆ ಮತ್ತೊಬ್ಬರು ಶೃಂಗೇರಿ ಠಾಣೆಯಲ್ಲಿ ಹಲ್ಲೆ ಮಾಡಿರೋದಾಗಿ ದೂರು ದಾಖಲಿಸಿದ್ದಾರೆ. ಎರಡು ವರ್ಷದ ಹಿಂದೆ ಶಂಕರಚಾರ್ಯರ ಪುತ್ಧಳಿ ಮೇಲೆ ಅನಾಮಿಕನೊಬ್ಬ ಹಸಿರು ಬಾವುಟ ಹಾಕಿದ್ದಕ್ಕೆ ದೊಡ್ಡ ಸಂಘರ್ಷವೇ ಏರ್ಪಟ್ಟಿತ್ತು. ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಪರಸ್ಪರ ಕೆಸರೆರಾಚಿಕೊಂಡಿದ್ರು. ಇದೀಗ ಮಸೀದಿ ಮುಂಭಾಗ ಕಟ್ಟಿದ ಕೇಸರಿ ಬಾವುಟ ಮತ್ತೆ ಎರಡು ಕೋಮುಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿದ್ದು, ಸದ್ಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. (ವರದಿ: ಪ್ರಶಾಂತ್, ಟಿವಿ 9, ಚಿಕ್ಕಮಗಳೂರು)

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ