ಎನ್.ಆರ್.ಪುರ ಪಟ್ಟಣ ಪಂಚಾಯಿತಿ ಸದಸ್ಯೆ ಆತ್ಮಹತ್ಯೆಗೆ ಯತ್ನ; ತನ್ನ ಸಾವಿಗೆ ಪಕ್ಷದ ಮುಖಂಡರೇ ಕಾರಣವೆಂದು ಸ್ಟೇಟಸ್

ಮಾತುಕತೆಯಂತೆ ಪ್ರಸ್ತುತ ಅಧ್ಯಕ್ಷೆ ಸುರಯ್ಯಾ ಭಾನು ಅಧ್ಯಕ್ಷೆ ಅವಧಿ ಮುಗಿದಿದೆ. ಆದರೆ ಅಧ್ಯಕ್ಷೆ ಸ್ಥಾನ ಬಿಟ್ಟುಕೊಡಲು ಸುರಯ್ಯಾ ಭಾನುಮೀನಾಮೇಷ ಎಣಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಎನ್.ಆರ್.ಪುರ ಪಟ್ಟಣ ಪಂಚಾಯಿತಿ ಸದಸ್ಯೆ ಆತ್ಮಹತ್ಯೆಗೆ ಯತ್ನ; ತನ್ನ ಸಾವಿಗೆ ಪಕ್ಷದ ಮುಖಂಡರೇ ಕಾರಣವೆಂದು ಸ್ಟೇಟಸ್
ಆತ್ಮಹತ್ಯೆಗೆ ಯತ್ನಿಸಿದ ಪಟ್ಟಣ ಪಂಚಾಯತಿ ಸದಸ್ಯೆ

ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ಪಟ್ಟಣ ಪಂಚಾಯತಿ ಸದಸ್ಯೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತನ್ನ ಸಾವಿಗೆ ಪಕ್ಷದ ಮುಖಂಡರೇ ಕಾರಣವೆಂದು ಸ್ಟೇಟಸ್ ಹಾಕಿ ಪಟ್ಟಣ ಪಂಚಾಯತಿ ಸದಸ್ಯೆ ಜುಬೇದಾ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟಿಲ್ಲವೆಂದು ಮನನೊಂದು ಈ ಕೃತ್ಯಕ್ಕೆ ಮಂದಾಗಿದ್ದು, ಕಾಂಗ್ರೆಸ್ ಮುಖಂಡರ ವಿರುದ್ಧ ಜುಬೇದಾ ಆರೋಪ ಮಾಡಿದ್ದಾರೆ. ಸದ್ಯ ಎನ್.ಆರ್ ಪುರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಶಿವಮೊಗ್ಗಕ್ಕೆ ರವಾನೆ ಮಾಡಲಾಗಿದೆ.

ಮಾತುಕತೆಯಂತೆ ಪ್ರಸ್ತುತ ಅಧ್ಯಕ್ಷೆ ಸುರಯ್ಯಾ ಭಾನು ಅಧ್ಯಕ್ಷೆ ಅವಧಿ ಮುಗಿದಿದೆ. ಆದರೆ ಅಧ್ಯಕ್ಷೆ ಸ್ಥಾನ ಬಿಟ್ಟುಕೊಡಲು ಸುರಯ್ಯಾ ಭಾನು ಮೀನಾಮೇಷ ಎಣಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮನನೊಂದು ಸದಸ್ಯೆ ಜುಬೇದಾ 5-6 ಬಗೆಯ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾರೆ.

ಹಳ್ಳದಲ್ಲಿ ಕೊಚ್ಚಿಹೋಗಿರುವ ಗ್ರಾಮ ಪಂಚಾಯತಿ ಸದಸ್ಯನಿಗಾಗಿ ಶೋಧ! ಚಿಕ್ಕಬಳ್ಳಾಪುರ ಜಿಲ್ಲೆಯ ರಾಮಪಟ್ಟಣ-ನವಿಲುಗುರ್ಕಿ ಗ್ರಾಮದ ಬಳಿ ಇರುವ ಯದಾರ್ಲಹಳ್ಳಿ ಸೇತುವೆ ಬಳಿ ಕೊಚ್ಚಿಹೋಗಿದ್ದ ಗ್ರಾಮ ಪಂಚಾಯತಿ ಸದಸ್ಯನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಎನ್ಡಿಆರ್ಎಫ್ ತಂಡ ಕಳಿಸಲು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮನವಿ ಮಾಡಿದೆ. ಗಂಗಾಧರ್ ಎಂಬುವವರು ಹಳ್ಳದ ನೀರಲ್ಲಿ ಬೈಕ್ ಸಮೇತ ಕೊಚ್ಚಿ ಹೋಗಿದ್ದರು. ಸದ್ಯ ಹಳ್ಳದಲ್ಲಿ ಸದಸ್ಯನ ಬೈಕ್ ಪತ್ತೆಯಾಗಿದೆ.

ಇದನ್ನೂ ಓದಿ

ಚಿಕ್ಕಬಳ್ಳಾಪುರದಲ್ಲಿ ವಿಪರೀತ ಮಳೆ: ಹಳ್ಳದಲ್ಲಿ ಬೈಕ್ ಸಮೇತ ಕೊಚ್ಚಿಹೋದ ಗ್ರಾ. ಪಂ. ಸದಸ್ಯ ಇನ್ನೂ ಪತ್ತೆಯಿಲ್ಲ

ಯುದ್ಧಗಳು ತುಂಬಾ ದುಬಾರಿ, ಕೈಗೆಟುಕಲಾಗದವು: ಎನ್ಎಸ್ಎ ಅಜಿತ್ ದೋವಲ್

Published On - 8:24 am, Sat, 13 November 21

Click on your DTH Provider to Add TV9 Kannada