KFD: ಮಲೆನಾಡಲ್ಲಿ ವರ್ಷದ ಮೊದಲ ಮಂಗನ ಕಾಯಿಲೆ ಪತ್ತೆ
ಬಾಳೆಹೊನ್ನೂರು ಮೂಲದ ವ್ಯಕ್ತಿ ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆ ಆರೋಗ್ಯ ಇಲಾಖೆ ಟಿಸ್ಟ್ಗೆ ಕಳುಹಿಸಿತ್ತು. ವರದಿ ಬಂದಿದ್ದು ಈ ವರ್ಷದ ಮೊದಲ ಕೆಎಫ್‌ಡಿ ಪ್ರಕರಣ ಪತ್ತೆಯಾಗಿದೆ.
ಚಿಕ್ಕಮಗಳೂರು: ಮಲೆನಾಡಲ್ಲಿ ಈ ವರ್ಷದ ಮೊದಲ ಮಂಗನ ಕಾಯಿಲೆ(ಕೆಎಫ್‌ಡಿ) ಪತ್ತೆಯಾಗಿದೆ. ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಕೊಪ್ಪ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದ ಬಾಳೆಹೊನ್ನೂರು ಮೂಲದ ವ್ಯಕ್ತಿಯಲ್ಲಿ ಮಂಗನ ಕಾಯಿಲೆ ಪತ್ತೆಯಾಗಿದೆ.
ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆ ಆರೋಗ್ಯ ಇಲಾಖೆ ಟಿಸ್ಟ್ಗೆ ಕಳುಹಿಸಿತ್ತು. ವರದಿ ಬಂದಿದ್ದು ಈ ವರ್ಷದ ಮೊದಲ ಕೆಎಫ್‌ಡಿ ಪ್ರಕರಣ ಪತ್ತೆಯಾಗಿದೆ. ಮಲೆನಾಡಿನಲ್ಲಿ ಮತ್ತೆ ಮಂಗನಕಾಯಿಲೆ ಭೀತಿ ಎದುರಾಗಿದೆ. ಸದ್ಯ ಚಿಕ್ಕಮಗಳೂರು ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಹೈಅಲರ್ಟ್ ಕೈಗೊಂಡಿದ್ದು ಪತ್ತೆಯಾದ ವ್ಯಕ್ತಿ ಇದ್ದ ಸ್ಥಳ ಹಾಗೂ ಸುತ್ತಮುತ್ತ ಪ್ರತಿ ವ್ಯಕ್ತಿಗಳ ಮೇಲೆ ನಿಗಾ ಇಡಲಾಗಿದೆ.
ಇದನ್ನೂ ಓದಿ: ಮಂಗನ ಕಾಯಿಲೆ ಉಪಟಳ ಹೆಚ್ಚಳವಾಯ್ತು, ಶಿವಮೊಗ್ಗ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ಬಲಿ
ಕ್ಯಾಸನೂರು ಅಡವಿ ರೋಗ, ಅಥವಾ ಫಾರೆಸ್ಟ್ ಡಿಸೀಸ್ (ಕೆಎಫ್‌ಡಿ) ಎನ್ನುವ ಮಂಗನ ಕಾಯಿಲೆ ನಮ್ಮ ಮಲೆನಾಡು ಶಿವಮೊಗ್ಗದ ಕ್ಯಾಸನೂರು ಅರಣ್ಯ ಪ್ರದೇಶದಲ್ಲಿ 1957ರಲ್ಲಿ ಮೊದಲ ಬಾರಿಗೆ ಪತ್ತೆಯಾಗಿತ್ತು. ಸಾಮಾನ್ಯವಾಗಿ ಮಲೆನಾಡಿನ ಅರಣ್ಯಪ್ರದೇಶಗಳಲ್ಲಿ ಇದು ಪ್ರತೀ ವರ್ಷವೂ ಕಾಡುವ ಕಾಯಿಲೆಯಾಗಿದೆ. Flaviviridae ಎಂಬ ಕುಟುಂಬಕ್ಕೆ ಸೇರಿದ ವೈರಸ್ ಈ ಕಾಯಿಲೆಗೆ ಕಾರಣವಾಗಿದೆ. ಕೋತಿಯಲ್ಲಿ ಮೊದಲು ಈ ವೈರಸ್ ಪತ್ತೆಯಾದ್ದರಿಂದ ಇದನ್ನು ಮಂಗನ ಕಾಯಿಲೆ ಎಂದೇ ಗುರುತಿಸಲಾಗಿದೆ.
ಮಂಗನ ಕಾಯಿಲೆ ಹೇಗೆ ಹರಡುತ್ತದೆ?
ಹೇನು, ಚಿಗಟ, ತಿಗಣೆ, ಸೊಳ್ಳೆ ಇತ್ಯಾದಿ ರಕ್ತ ಹೀರುವ ಕೀಟಗಳಿಂದ ಈ ರೋಗ ಹರಡುತ್ತದೆ ಎನ್ನಲಾಗಿದೆ. ಅರಣ್ಯ ಪ್ರದೇಶಗಳಲ್ಲಿ ಕೋತಿ, ಹೆಗ್ಗಣ ಇತ್ಯಾದಿ ಪ್ರಾಣಿಗಳಿಗೆ ವೈರಸ್ ಸೋಂಕು ತಗುಲಿದರೆ, ಹೇನು, ಚಿಗಟ ಇತ್ಯಾದಿ ಮೂಲಕ ಅದು ಬೇರೆ ಬೇರೆ ಪ್ರಾಣಿಗಳಿಗೆ ಸುಲಭವಾಗಿ ಹರಡುವ ಸಾಧ್ಯತೆ ಇರುತ್ತದೆ. ಕೆಂಪು ಚಿಗಟ ಎಂಬ ಕೀಟ ಕೆಎಫ್‌ಎ ಅನ್ನು ಬಹಳ ವೇಗವಾಗಿ ಹರಡುತ್ತದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:03 pm, Tue, 24 January 23