Chikmagaluru News: ಜೀವ ಬೆದರಿಕೆ ಹಾಕಿದ್ದ ನಲಪಾಡ್​ಗೆ ಕಾಂಗ್ರೆಸ್ ಕಾರ್ಯಕರ್ತ ತರಾಟೆ, ಪ್ರತಿಕ್ರಿಯಿಸುವಾಗ ನಲಪಾಡ್ ಎಡವಟ್ಟು

ಮಹಮ್ಮದ್ ನಲಪಾಡ್ ಜೀವ ಬೆದರಿಕೆ, ಧಮ್ಕಿ ಹಾಕಿದ್ದಾರೆ ಎಂದು ಚಿಕ್ಕಮಗಳೂರು ಜಿಲ್ಲಾ ಯೂಥ್ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಲಿಯಾಸ್ ಇಲ್ಲು ಗಂಭೀರ ಆರೋಪ ಮಾಡಿದ್ದಾರೆ.

Chikmagaluru News: ಜೀವ ಬೆದರಿಕೆ ಹಾಕಿದ್ದ ನಲಪಾಡ್​ಗೆ ಕಾಂಗ್ರೆಸ್ ಕಾರ್ಯಕರ್ತ ತರಾಟೆ, ಪ್ರತಿಕ್ರಿಯಿಸುವಾಗ ನಲಪಾಡ್ ಎಡವಟ್ಟು
ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್, ಕಾಂಗ್ರೆಸ್ ಕಾರ್ಯಕರ್ತ ಇಲಿಯಾಸ್
Follow us
TV9 Web
| Updated By: ಆಯೇಷಾ ಬಾನು

Updated on:Jan 23, 2023 | 1:13 PM

ಚಿಕ್ಕಮಗಳೂರು: ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಕಾಂಗ್ರೆಸ್ ಕಾರ್ಯಕರ್ತ ಇಲಿಯಾಸ್​​ಗೆ ಧಮ್ಕಿ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೆ ಧಮ್ಕಿ ಹಾಕಿದ ನಲಪಾಡ್​ಗೆ ಕಾಂಗ್ರೆಸ್ ಕಾರ್ಯಕರ್ತ ಹಿಗ್ಗಾ ಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ ಈ ಸಂಬಂಧ ಮೊಹಮ್ಮದ್ ನಲಪಾಡ್ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇಲಿಯಾಸ್​ ಯಾರು ಎಂಬುದು ನನಗೆ ಗೊತ್ತಿಲ್ಲ. ವೋಟ್​ ಮಾಡಿ ಗೆಲ್ಲಿಸಿದ್ದೇವೆ, ನನ್ನ ಮಾತು ಕೇಳು ಎಂದು ಹೇಳ್ತಾನೆ. ರಾತ್ರಿ ಕುಡಿದು ಇವನು ನನಗೆ ಕರೆ ಮಾಡಿದ್ದಾನೆ. ಕುಡಿದು ಪಕ್ಷ ಸಂಘಟನೆ ಬಗ್ಗೆ ಯಾರಾದ್ರೂ ಮಾತಾಡುತ್ತಾರಾ? ಈತನ ಜೊತೆ ಮಾತನಾಡುವ ಅವಶ್ಯಕತೆ ನನಗೆ ಇಲ್ಲ. ಇಲಿಯಾಸ್​ ಎಂಬಾತ ನಮ್ಮ ಪಕ್ಷದ ಕಾರ್ಯಕರ್ತನೇ ಅಲ್ಲ. ನಮ್ಮ ಹೆಸರು ಹಾಳು ಮಾಡುವುದಕ್ಕೆ ಇಂತಹವರು ಇರುತ್ತಾರೆ. ನಮ್ಮ ಪಕ್ಷದಲ್ಲಿ ಇಲಿಯಾಸ್​ಗೆ ಯಾವುದೇ ಸ್ಥಾನಮಾನ ಇಲ್ಲ ಎಂದು ಟಿವಿ9ಗೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್​ ಹೇಳಿದ್ದಾರೆ.

ಘಟನೆ ಹಿನ್ನೆಲೆ

ಮಹಮ್ಮದ್ ನಲಪಾಡ್ ಜೀವ ಬೆದರಿಕೆ, ಧಮ್ಕಿ ಹಾಕಿದ್ದಾರೆ ಎಂದು ಚಿಕ್ಕಮಗಳೂರು ಜಿಲ್ಲಾ ಯೂಥ್ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಲಿಯಾಸ್ ಇಲ್ಲು ಗಂಭೀರ ಆರೋಪ ಮಾಡಿದ್ದಾರೆ. ಚಿಕ್ಕಮಗಳೂರು ನಗರದ ಪ್ರಜಾಧ್ವನಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಹಮ್ಮದ್ ನಲಪಾಡ್, ರಾತ್ರಿ ಮೂಡಿಗೆರೆಯಲ್ಲಿ ವಾಸ್ತವ್ಯ ಹೂಡಿದ್ದರು. ಈ ಹಿನ್ನೆಲೆ ನಿನ್ನೆ ರಾತ್ರಿ ನಲಪಾಡ್​ಗೆ ಇಲಿಯಾಸ್ ಇಲ್ಲು ಕರೆ ಮಾಡಿ ಪಕ್ಷ ಸಂಘಟನೆ, ರಾಜ್ಯ ಕಮಿಟಿಗೆ ಆಯ್ಕೆ ಬಗ್ಗೆ ಮಾತನಾಡಿದ್ರಂತೆ. ಈ ವೇಳೆ ಮನೆಗೆ ನುಗ್ಗಿ ಥಳಿಸುವುದಾಗಿ ನಲಪಾಡ್ ಧಮ್ಕಿ ಹಾಕಿದ್ರಂತೆ. ಆಗ ಇಲಿಯಾಸ್ ನಲಪಾಡ್​ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ನಲಪಾಡ್ ಮತ್ತು ಇಲಿಯಾಸ್ ನಡುವಿನ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಅವಧಿಯಲ್ಲಿ ನೀರಾವರಿ, ಉನ್ನತ ಶಿಕ್ಷಣ, ಆರೋಗ್ಯ ಇಲಾಖೆಗಳಲ್ಲಿ ಹಗರಣ: ಸಚಿವ ಸುಧಾಕರ್ ಟೀಕೆ

ಈ ಸಂಬಂಧ ಮಾತನಾಡಿದ ಇಲಿಯಾಸ್, ನಾನು ರಾಜ್ಯ ಕಮಿಟಿ ವಿಚಾರವಾಗಿ ಮಾತನಾಡಲು ನಲಪಾಡ್ಗೆ ಕರೆ ಮಾಡಿದ್ದೆ. ಹೇ ನೀನು ಯಾರು? ಪಕ್ಷಕ್ಕೆ ನೀನು ಬೇಡ ಅಂದ್ರು. ಅವಾಶ್ಯ ಶಬ್ದ ಬಳಸಿ ಬೈದು, ಬೆದರಿಕೆ‌ ಹಾಕಿದ್ರು. ಮನೆಗೆ ನುಗ್ಗಿ ಹೊಡಿಸುವುದಾಗಿ ಬೆದರಿಕೆ ಹಾಕಿದ್ರು. ನಾನು ಕಾಂಗ್ರೆಸ್ ಪಕ್ಷಕ್ಕೆ ದುಡಿದಿದ್ದೇನೆ ನಾನ್ಯಾಕೆ ಇವರಿಂದ ಈ ಮಾತನ್ನ ಕೇಳಬೇಕು. ನಾನು ಕಾನೂನು ಹೋರಾಟ ಮಾಡುತ್ತೇನೆ. ನಲಪಾಡ್ ಒಬ್ಬ ರೌಡಿ ಹಾಗೆ ಅವನ ವರ್ತನೆಯು ಕೂಡ ಹಾಗೆ ಇದೆ. ನಿಷ್ಠಾವಂತ ಕಾರ್ಯಕರ್ತನ ಜೊತೆ ಮಾತನಾಡುವುದನ್ನ ನಲಪಾಡ್ ಕಲಿಯಬೇಕು ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಇನ್ನು ಮತ್ತೊಂದೆಡೆ ಜಿಲ್ಲಾ ಮಟ್ಟದ ಜವಾಬ್ದಾರಿಯಲ್ಲಿರುವ ಕಾರ್ಯಕರ್ತರು ಯಾರೂ ಅನ್ನುವುದೇ ನಲಪಾಡ್ಗೆ ಗೊತ್ತಿಲ್ವಾ ಎಂದು ಕೆಲ ಕಾಂಗ್ರೆಸ್ ಕಾರ್ಯಕ್ರತರು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ರಾಜ್ಯ ಯೂತ್ ಕಾಂಗ್ರೆಸ್ನಿಂದ ನೀಡಿರುವ ಜವಾಬ್ದಾರಿ ಪತ್ರ TV9 ಗೆ ಲಭ್ಯವಾಘಿದೆ. 21-8-21ರಂದು ಇಲಿಯಾಸ್ ನನ್ನ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಯೂತ್ ಕಾಂಗ್ರೆಸ್ ನೇಮಕ ಮಾಡಿದೆ. ಚಿಕ್ಕಮಗಳೂರು ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂತೋಷ ನೇಮಕ ಮಾಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:13 pm, Mon, 23 January 23

ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ