ಚಿಕ್ಕಮಗಳೂರು: 94ಸಿ ಹಕ್ಕು ಪತ್ರ ನೀಡಲು ಸ್ಥಳೀಯರೊಬ್ಬರು ಮೂಡಿಗೆರೆ ತಹಶೀಲ್ದಾರ್ಗೆ ಮನವಿ ಮಾಡಿದ್ದಾರೆ. ಈ ವೇಳೆ ‘ನಾನು ಚುನಾವಣೆಯ ಕೆಲಸಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾರೆ. ಬಳಿಕ ಸ್ಥಳೀಯರು ಹಾಗೇ ಹೇಳಬೇಡಿ ಎಂದಿದ್ದು, ಇದಕ್ಕೆ ತಹಶೀಲ್ದಾರ್ ಫುಲ್ ಗರಂ ಆಗಿದ್ದಾರೆ. ಈ ವಿಷಯಕ್ಕೆ ಮೂಡಿಗೆರೆ ತಹಶೀಲ್ದಾರ್ ವಿರುದ್ದ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದು, ನಂತರ ಫೈಲ್ಗೆ ಸಹಿ ಹಾಕಿದ್ದಾರೆ. ಇನ್ನು ಈ ತಹಶೀಲ್ದಾರ್ ವಿರುದ್ದ ಚುನಾವಣೆ ಕಾರಣ ಫೈಲ್ಗಳು ಪೇಂಡಿಂಗ್ ಇರುವ ಹಾಗೂ 94ಸಿ ಹಕ್ಕು ಪತ್ರ ನೀಡಲು ಅಲೆದಾಡಿಸುತ್ತಿರುವ ಆರೋಪ ಕೇಳಿಬಂದಿದೆ. ಈ ಕಾರಣಕ್ಕೆ ತಹಶೀಲ್ದಾರ್ ವರ್ಗಾವಣೆಗೆ ಸ್ಥಳಿಯರು ಆಗ್ರಹಿಸಿದ್ದಾರೆ.
ಸೋಲಾರ್ ಅಳವಡಿಸಿಕೊಡುವುದಾಗಿ ನಾಲ್ಕು ಮುಕ್ಕಾಲು ಕೋಟಿ ವಂಚನೆ
ಬೆಂಗಳೂರು: ಸೋಲಾರ್ ಅಳವಡಿಸಿಕೊಡುವುದಾಗಿ ನಾಲ್ಕು ಮುಕ್ಕಾಲು ಕೋಟಿ ವಂಚನೆ ಮಾಡಿರುವ ಆರೋಪ ಪ್ರಮೋದ್ ಪ್ರಕಾಶ್ ರಾವ್ ಎಂಬಾತನ ಮೇಲೆ ಕೇಳಿಬಂದಿದೆ. ಸಮೃದ್ಧಿ ರಿನವಬಲ್ಸ್ ಸಲ್ಯೂಷನ್ ನಿರ್ದೇಶಕ ಎಂದು ಹೇಳಿ ಉದ್ಯಮಿ ಗುಲ್ಲು ತಲರೇಜಾ ಎಂಬುವವರಿಗೆ ವಂಚಿಸಲಾಗಿದೆ.
ಜೆಮಿನಿ ಡೈಯಿಂಗ್ ಅಂಡ್ ಪ್ರಿಂಟಿಂಗ್ ಮಿಲ್ಸ್ ಪ್ರೈ.ಲಿ ಮಾಲೀಕರಾಗಿರುವ ಗುಲ್ಲು. ತಮ್ಮ ಕಂಪನಿಗೆ ಸೋಲಾರ್ ಅಳವಡಿಸಿ ಕೊಡುವುದಾಗಿ ಬಂದಿದ್ದ ಪ್ರಮೋದ್ ಪ್ರಕಾಶ್. ಈ ಹಿಂದೆ ಕೆಲಸ ಮಾಡಿರೋದಾಗಿ ನಕಲಿ ಫೋಟೊ ತೋರಿಸಿದ್ದನಂತೆ. ಅಲ್ಲದೇ ನಕಲಿ ದಾಖಲೆ ತೋರಿಸಿ 5 ಕೋಟಿ 70 ಲಕ್ಷಕ್ಕೆ 1,500 ಕೆವಿಪಿ ಸೋಲಾರ್ ಅಳವಡಿಸಿ ಕೊಡೋದಾಗಿ ಒಪ್ಪಿಸಿ. ಮುಂಗಡವಾಗಿ 4 ಕೋಟಿ 75 ಲಕ್ಷ ಹಣ ಪಡೆದು, ಕೇವಲ ಕ್ಲಾಂಪ್ ಅಳವಡಿಸಿ ಕಳ್ಳಾಟವಾಡಿದ್ದಾನೆ.
ಮಷಿನ್ಗಳು ಬರ್ತಿವೆ ಎಂದು ಹೇಳಿಕೊಂಡು ಬಂದಿದ್ದ ಇತ, ಹೀಗೆ ಎರಡು ವರ್ಷದಿಂದ ಕಳ್ಳಾಟ ಆಡುತ್ತಿದ್ದನಂತೆ. ಮಷಿನ್ಗಳು ಲೋಡ್ ಮಾಡಿದ ರೀತಿಯ ಫೋಟೊ ವಾಟ್ಸ್ ಆ್ಯಪ್ ನಲ್ಲಿ ಕಳಿಸಿ ಹಣ ಪೀಕಿದ್ದಾನೆ. ಆದರೆ ಎರಡು ವರ್ಷದಿಂದ ಹೀಗೆ ಯಾಮಾರಿಸಿದ್ದ ಆರೋಪಿಯ ವಿರುದ್ದ ಇದೀಗ ಹಣ ಕಳೆದುಕೊಂಡ ಗುಲ್ಲು ತಲರೇಜಾ ಎಂಬಾತ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರಿನ್ವಯ ಆರೋಪಿ ಪ್ರಮೋದ್ ಪ್ರಕಾಶ್ನನ್ನ ಬಂಧಿಸಲಾಗಿದ್ದು, ತನಿಖೆ ವೇಳೆ ಆರೋಪಿ ಹಲವರಿಗೆ ಇದೇ ರೀತಿ ವಂಚಿಸಿರೋದು ಬೆಳಕಿಗೆ ಬಂದಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:33 pm, Fri, 24 March 23