ಚಿಕ್ಕಮಗಳೂರು, ಜನವರಿ 09: ನಿನ್ನೆ ಸಿಎಂ ಸಿದ್ದರಾಮಯ್ಯ (Siddaramaiah) ಸೂಚನೆಯಂತೆ ಬೆಂಗಳೂರಿನ ಗೃಹ ಕಚೇರಿ ಕೃಷ್ಣದಲ್ಲಿ 6 ಜನ ನಕ್ಸಲರು ಶರಣಾಗಿದ್ದಾರೆ. ಆ ಮೂಲಕ ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ಸಿಎಂ ಎದುರು ಕರ್ನಾಟಕದ ನಾಲ್ವರು, ಹೊರ ರಾಜ್ಯದ ಇಬ್ಬರು ನಕ್ಸಲರು ಶರಣಾಗಿದ್ದಾರೆ. ಆದರೆ ನಕ್ಸಲರ ಪಟ್ಟಿಯಲ್ಲಿ ಏಕೈಕ ನಕ್ಸಲ್ ರವೀಂದ್ರ ಮಾತ್ರ ಉಳಿದುಕೊಂಡಿದ್ದಾರೆ. ಇದುವರೆಗೂ ಯಾರ ಸಂಪರ್ಕಕ್ಕೂ ಬಂದಿಲ್ಲ.
8 ನಕ್ಸಲರ ಪೈಕಿ ಇತ್ತೀಚೆಗೆ ವಿಕ್ರಂಗೌಡ ಎನ್ಕೌಂಟರ್ ಮಾಡಲಾಗಿದೆ. 7 ಜನರ ಪೈಕಿ ನಿನ್ನೆ 6 ನಕ್ಸಲರ ಶರಣಾಗತಿಯಾಗಿದ್ದಾರೆ. ಆದರೆ ಏಕೈಕ ನಕ್ಸಲ್ ರವೀಂದ್ರ ಮಾತ್ರ ಶರಣಾಗಿಲ್ಲ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮೂಲದ ರವೀಂದ್ರ ವಿರುದ್ಧ 14 ಕೇಸ್ಗಳಿವೆ. ನಕ್ಸಲ್ ಶರಣಾಗತಿ ಕಮಿಟಿ ಸಂಪರ್ಕಕ್ಕೂ ಸಿಕ್ಕಿಲ್ಲ. ಕಳೆದ 18 ವರ್ಷಗಳಿಂದ ಭೂಗತವಾಗಿರುವ ನಕ್ಸಲ್ ರವೀಂದ್ರ, ಯಾರ ಸಂಪರ್ಕಕ್ಕೆ ಸಿಕ್ಕಿಲ್ಲ. ಆ ಮೂಲಕ ರಾಜ್ಯದ ನಕ್ಸಲರ ಪಟ್ಟಿಯಲ್ಲಿ ಉಳಿದುಕೊಂಡಿದ್ದಾರೆ.
ಇದನ್ನೂ ಓದಿ: ನಕ್ಸಲರು ಶರಣಾದ ನಂತರ ಕಾನೂನು ಪ್ರಕ್ರಿಯೆಗಳು ಏನೇನಿರುತ್ತವೆ? ಇಲ್ಲಿದೆ ಮಾಹಿತಿ
ಶರಣಾಗತಿಯಾದ 6 ನಕ್ಸಲರಾದ ಮುಂಡಗಾರು ಲತಾ, ಜಯಣ್ಣ, ಸುಂದರಿ, ವನಜಾಕ್ಷಿ, ಜೀಶಾ, ವಸಂತ ಅಲಿಯಾಸ್ ರಮೇಶ್ನಿಂದ ಕೂಡ ಕೊಪ್ಪ ಡಿವೈಎಸ್ಪಿ ಬಾಲಾಜಿ ಸಿಂಗ್ರಿಂದ ಮಾಹಿತಿ ಸಂಗ್ರಹ ಮಾಡಲಾಗಿದೆ. ಎಎನ್ಎಫ್, ಗುಪ್ತಚರ ಇಲಾಖೆಯಿಂದಲೂ ಮಾಹಿತಿ ಸಂಗ್ರಹಿಸಲಾಗಿದೆ.
ಇನ್ನು ಶರಣಾಗತಿ ವೇಳೆ ನಕ್ಸಲರು ಶಸ್ತ್ರಾಸ್ತ್ರಗಳನ್ನು ಸರೆಂಡರ್ ಮಾಡಿದ್ದಾರೆ. ನಕ್ಸಲರ ಶಸ್ತ್ರಾಸ್ತ್ರಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಶಸ್ತ್ರಾಸ್ತ್ರ ಸಮೇತ ಚಿಕ್ಕಮಗಳೂರು ಕಾಡಿನಲ್ಲಿ ನಕ್ಸಲರು ಓಡಾಡುತ್ತಿದ್ದರು. ಶಸ್ತ್ರಾಸ್ತ್ರ ಇರುವ ಬಗ್ಗೆ 4 ತಿಂಗಳ ಹಿಂದೆ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ನಕ್ಸಲರ ತನಿಖೆಗೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಡಿವೈಎಸ್ಪಿ ಬಾಲಾಜಿ ಸಿಂಗ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದ್ದು, ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಬಾಲಾಜಿ ಸಿಂಗ್ ತಂಡ ತೆರಳಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ 6 ನಕ್ಸಲರ ಶರಣಾಗತಿಗೆ ಚಿಕ್ಕಮಗಳೂರಿನ ಬಿಜೆಪಿ ಯುವ ಮೋರ್ಚಾದಿಂದ ವಿರೋಧ ವ್ಯಕ್ತಪಡಿಸಿದೆ. ನಮ್ಮ ಮೇಲು ಕೇಸ್ಗಳಿವೆ, ವಾಪಸ್ ಪಡೆದು ಪ್ಯಾಕೇಜ್ ನೀಡಿ. ಸಂಪೂರ್ಣ ಕೇಸ್ ಕ್ಲಿಯರ್ ಮಾಡಿ ಭೂಮಿ ನೀಡಿ ಎಂದು ಆಕ್ರೋಶ ಹೊರಹಾಕಲಾಗಿದೆ. ಈ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಫೇಸ್ಬುಕ್ ಅಭಿಯಾನ ಮಾಡಲಾಗುತ್ತಿದೆ. ನಕ್ಸಲರ ಶರಣಾಗತಿ ಸಂಬಂಧ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:56 pm, Thu, 9 January 25