ಚಿಕ್ಕಮಗಳೂರು: ಮಚ್ಚಿನಿಂದ ಕೊಚ್ಚಿ ಮಗನೊಬ್ಬ ಹೆತ್ತ ತಾಯಿಯನ್ನೇ ಹತ್ಯೆಗೈದ ಅಮಾನುಷ ಘಟನೆ ಚಿಕ್ಕಮಗಳೂರು ನಗರದ ಗೌರಿ ಕಾಲುವೆಯಲ್ಲಿ ನಡೆದಿದೆ. ಪುತ್ರ ದುಶ್ಯಂತ್ ತಾಯಿ ಸುಧಾ (48) ಹತ್ಯೆಗೈದಿದ್ದಾನೆ. ಪೊಲೀಸರು ಆರೋಪಿ ದುಶ್ಯಂತ್ ವಶಕ್ಕೆ ಪಡೆದಿದ್ದಾರೆ. ಒಮ್ಮೊಮ್ಮೆ ದುಶ್ಯಂತ್ ಮಾನಸಿಕ ಅಸ್ವಸ್ಥನಂತೆ ವರ್ತಿಸ್ತಿದ್ದ ಎಂದು ತಿಳಿದುಬಂದಿದೆ. ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು: ಪ್ರೀತಿ ಹೆಸರಲ್ಲಿ ಮೋಸ; ಆರೋಪಿ ಬಂಧನ
ಪ್ರೀತಿ ಹೆಸರಿನಲ್ಲಿ ನಂಜನಗೂಡು ಮೂಲದ ಯುವತಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಲ್ಲಿ ಆರೋಪಿ ಯುವಕನನ್ನ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಪೊಲೀಸರು ಮೊಹಮ್ಮದ್ ಅಜ್ವಾನ್ ಎಂಬಾತನನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಮಂಗಳೂರಿನ ಮುಡಿಪು ನಿವಾಸಿ ಮೊಹಮ್ಮದ್ ಅಜ್ವಾನ್ ಬಂಧನವಾಗಿದೆ. ಪ್ರೀತಿಯ ನಾಟಕವಾಡಿ ಅನ್ಯಕೋಮಿನ ಯುವಕನಿಂದ ವಂಚನೆ ನಡೆಸಿದ್ದ. ಯುವತಿಯ ನಗ್ನ ಫೋಟೋ ವೈರಲ್ ಮಾಡುವ ಬೆದರಿಕೆ ಒಡ್ಡಿದ್ದ. ಬೆದರಿಕೆ ಹಾಕಿ 35 ಲಕ್ಷ ರೂಪಾಯಿ ಪಡೆದಿರುವ ಆರೋಪವನ್ನು ಕೂಡ ಆತ ಎದುರಿಸುತ್ತಿದ್ದ. ಈ ಬಗ್ಗೆ ಮಂಗಳೂರಿನ ಮಹಿಳಾ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಯುವತಿ, ಆರೋಪಿ ಮನೆ ಹುಡುಕಿಕೊಂಡು ಮಂಗಳೂರಿಗೆ ಬಂದಿದ್ದರು. ಈ ವೇಳೆ ಅಜ್ವಾನ್ ಕುಟುಂಬಸ್ಥರು ಹಲ್ಲೆ ನಡೆಸಿದ ಆರೋಪ ಕೂಡ ಕೇಳಿಬಂದಿತ್ತು.
ಪ್ರಿಯಕರನ ಹತ್ಯೆ ಕೇಸ್: ಪ್ರಿಯತಮೆ ಸೇರಿ ನಾಲ್ವರ ಬಂಧನ
ಪುತ್ರಿಯರ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದ ಪ್ರಿಯಕರನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರಿಯತಮೆ ಸೇರಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಠಾಣೆ ಪೊಲೀಸರಿಂದ ಆರೋಪಿಗಳ ಬಂಧನ ಮಾಡಲಾಗಿದೆ. ಶ್ವೇತಾ (35), ಡೇವಿಡ್ (31), ಶ್ರೀಕಾಂತ್ (28), ದಿನೇಶ (28) ಸೆರೆ ಸಿಕ್ಕಿದ್ದಾರೆ. ಸೆಪ್ಟೆಂಬರ್ 5 ರಂದು ಹೆಗ್ಗನಹಳ್ಳಿಯ ಕಿರಣ್ ಕುಮಾರ್ (26)ಗೆ ಚಾಕು ಇರಿತ ಮಾಡಲಾಗಿತ್ತು. ಸೆಪ್ಟೆಂಬರ್ 6 ರಂದು ಚಿಕಿತ್ಸೆ ಫಲಿಸದೆ ಕಿರಣ್ ಕುಮಾರ್ ಮೃತಪಟ್ಟಿದ್ದ.
ಇದನ್ನೂ ಓದಿ: Crime News: ಹಾಡಹಗಲೇ ಕಾಲೇಜು ಯುವತಿಯ ಕುತ್ತಿಗೆ ಸೀಳಿ ಕೊಲೆ; ಪ್ರೇಮ ವೈಫಲ್ಯದ ಶಂಕೆ
ಇದನ್ನೂ ಓದಿ: ಜಾರ್ಖಂಡ ಜಡ್ಜ್ ಹತ್ಯೆ ಪ್ರಕರಣ; ಉದ್ದೇಶ ಪೂರ್ವಕವಾಗಿಯೇ ಅಪಘಾತ ಮಾಡಲಾಗಿದೆ ಎಂದ ಸಿಬಿಐ