ಚಿಕ್ಕಮಗಳೂರಿನಲ್ಲಿ ದತ್ತಜಯಂತಿಗೆ ಶ್ರೀ ರಾಮ ಸೇನೆ ನಿರ್ಧಾರ; ಜಿಲ್ಲೆಗೆ ಪ್ರವೇಶಿಸದಂತೆ ಪ್ರಮೋದ್ ಮುತಾಲಿಕ್ಗೆ ನಿರ್ಬಂಧ
ನಾಗೇನಹಳ್ಳಿ ದರ್ಗಾದಲ್ಲಿ ದತ್ತಜಯಂತಿಗೆ ಶ್ರೀ ರಾಮ ಸೇನೆ(Sri Ram Sena) ನಿರ್ಧಾರ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಗೆ ಪ್ರವೇಶಿಸದಂತೆ ಪ್ರಮೋದ್ ಮುತಾಲಿಕ್(Pramod Muthalik) ಹಾಗೂ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿಗೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.
ಚಿಕ್ಕಮಗಳೂರು, ಡಿ.24: ನಾಗೇನಹಳ್ಳಿ ದರ್ಗಾದಲ್ಲಿ ದತ್ತಜಯಂತಿಗೆ ಶ್ರೀ ರಾಮ ಸೇನೆ(Sri Ram Sena) ನಿರ್ಧಾರ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಗೆ ಪ್ರವೇಶಿಸದಂತೆ ಪ್ರಮೋದ್ ಮುತಾಲಿಕ್(Pramod Muthalik) ಹಾಗೂ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿಗೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇಂದಿನಿಂದ 2024 ಜನವರಿ 22ರ ವರೆಗೂ ಇಬ್ಬರಿಗೂ ಕೋಮು ಪ್ರಚೋದನೆ , ಗಲಭೆಗೆ ಕುಮ್ಮಕ್ಕು ಕಾರಣ ನೀಡಿ ಚಿಕ್ಕಮಗಳೂರು ಜಿಲ್ಲಾ ಪೊಲೀಸರಿಂದ ನೋಟಿಸ್ ಜಾರಿ ಮಾಡಲಾಗಿದೆ.
ಡಿ: 26 ರಂದು ನಾಗೇನಹಳ್ಳಿ ದರ್ಗಾದಲ್ಲಿ ದತ್ತಜಯಂತಿಗೆ ಸಿದ್ದತೆ
ದತ್ತ ಜಯಂತಿ ಆಚರಣೆಗೆ ಶ್ರೀರಾಮ ಸೇನೆ ಮುಂದಾಗಿದ್ದು, ಡಿ.26 ರಂದು ಸಿದ್ದತೆ ಮಾಡಿಕೊಂಡಿದೆ. ಆ ಮೂಲಕ ದರ್ಗಾದಲ್ಲಿಇದೆ ಮೊದಲ ಬಾರಿಗೆ ದತ್ತಜಯಂತಿ ಆಚರಣೆಗೆ ಶ್ರೀ ರಾಮ ಸೇನೆ ಪ್ಲ್ಯಾನ್ ಮಾಡಿಕೊಂಡಿತ್ತು. ಈ ವೇಳೆ ಮಾತನಾಡಿದ್ದ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ, ‘ಮುಸ್ಲಿಂರು ನಮ್ಮ ದತ್ತಪೀಠದಲ್ಲಿ ಉರುಸ್ ಆಚರಣೆ ಮಾಡುತ್ತಾರೆ. ನಾವು ನಾಗೇನಹಳ್ಳಿ ದರ್ಗಾದಲ್ಲಿ ಡಿ.26ರಂದು ದತ್ತಜಯಂತಿ ಆಚರಣೆ ಮಾಡುತ್ತೇವೆ ಎಂದಿದ್ದರು.
ಇದನ್ನೂ ಓದಿ:ಕೇಸರಿ ಧ್ವಜ ಕಟ್ಟಿದ ದತ್ತಮಾಲಾಧಾರಿಗಳ ಮೇಲೆ ಅನ್ಯಕೋಮಿನವರಿಂದ ಹಲ್ಲೆ ಪ್ರಕರಣ; ನಾಲ್ವರ ವಿರುದ್ಧ FIR ದಾಖಲು
ಜಿಲ್ಲೆಯಾದ್ಯಂತ ಬೀಗಿ ಬಂದೋಬಸ್ತ್
ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ದತ್ತಜಯಂತಿ ಆಚರಣೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿ 28 ಚೆಕ್ಪೋಸ್ಟ್, 300ಕ್ಕೂ ಹೆಚ್ಚು ಸಿಸಿ ಕ್ಯಾಮರಾ, 50ಕ್ಕೂ ಬಾಡಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಜೊತೆಗೆ ಪ್ರತಿಯೊಂದು ಚೆಕ್ಪೋಸ್ಟ್ಗೂ ವಿಶೇಷ ದಂಡಾಧಿಕಾರಿಗಳ ನೇಮಕ ಮಾಡಲಾಗಿದೆ. 7 ಎಎಸ್ಪಿ, 30 ಡಿವೈಎಸ್ಪಿ, 30 ಇನ್ಸ್ಪೆಕ್ಟರ್ಗಳು, 100 ಹೋಂಗಾರ್ಡ್, 20 ಕೆಎಸ್ಆರ್ಪಿ, 25 ಡಿಎಆರ್ ನಿಯೋಜನೆ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.