ಚಿಕ್ಕಮಗಳೂರು: ಶೃಂಗೇರಿ ಶ್ರೀಗಳಿಗೆ ಅವಮಾನ ಮಾಡಿದ್ದ ಮುನ್ನಾ ಅಜರ್ಗೆ 3 ವರ್ಷ ಜೈಲು, 10 ಸಾವಿರ ರೂ. ದಂಡ ವಿಧಿಸಿ ಶೃಂಗೇರಿ ಕೋರ್ಟ್ ತೀರ್ಪು ಪ್ರಕಟಿಸಿದೆ. 2015ರ ನವೆಂಬರ್ 19ರಂದು ಮುನ್ನಾ ಅಜರ್ ಶೃಂಗೇರಿ ಶ್ರೀಗಳ ಕುರಿತು ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದನು. ಕರ್ನಾಟಕ ಹಿಂದೂಸ್ ಫೇಸ್ಬುಕ್ ಪೇಜ್ನಲ್ಲಿ ಗುರುಪರಂಪರೆ ಪೋಸ್ಟ್ ಹಾಕಿದ್ದರು. ಪೋಸ್ಟ್ನಲ್ಲಿದ್ದ ಶ್ರೀಗಳ ಫೋಟೋಗೆ ಅವಹೇಳನಕಾರಿ ಕಮೆಂಟ್ ಹಾಕಿದ್ದನು.
ಈ ಸಂಬಂಧ ರಾಜ್ಯದ ವಿವಿಧೆಡೆ ಶೃಂಗೇರಿ ಮಠದ ಭಕ್ತರು ಪ್ರತಿಭಟನೆ ನಡೆಸಿದ್ದರು. ನಂತರ ಹುಬ್ಬಳ್ಳಿ ಮೂಲದ ಮುನ್ನಾ ಅಜರ್ನನ್ನು ಶೃಂಗೇರಿ ಪೊಲೀಸರು ಬಂಧಿಸಿದ್ದರು. ಸದ್ಯ ಪ್ರಕರಣದ ವಿಚಾರಣೆ ನಡೆಸಿ ಮುನ್ನಾ ಅಜರ್ಗೆ ಕೋರ್ಟ್ ಶಿಕ್ಷೆ ವಿಧಿಸಿದೆ.
Published On - 10:38 pm, Tue, 19 July 22