ಚಿಕ್ಕಮಗಳೂರಿನಲ್ಲಿ ಲವ್ ಜಿಹಾದ್? ಸ್ಥಳದಲ್ಲಿಯೇ ಮೊಕ್ಕಾಂ ಹೂಡಿರುವ ಜಿಲ್ಲಾ ಎಸ್ಪಿ, ಮಗಳಿಗಾಗಿ ಗೋಗರೆದ ತಾಯಿ
interfaith marriage: ಆ ವೇಳೆ ಮುಸ್ಲಿಂ ಯುವಕನ ವಿರುದ್ಧ ಲವ್ ಜಿಹಾದ್ ಆರೋಪ ಹೊರಸಿದ ಹಿಂದೂ ಸಂಘಟನೆ ಕಾರ್ಯಕರ್ತರು, ಜೋಡಿಯನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಕಾಫಿ ನಾಡು ಚಿಕ್ಕಮಗಳೂರು ನಗರದಲ್ಲಿ ಲವ್ ಜಿಹಾದ್ ಕಲರವ (Suspected Love jihad) ಕೇಳಿಬಂದಿದೆ. ಸಬ್ ರಿಜಿಸ್ಟ್ರಾರ್ ಕಚೇರಿಗೆ ತೆರಳಿದ್ದ ಹಿಂದೂ ಹುಡುಗಿ ( hindu)-ಮುಸ್ಲಿಂ ಹುಡುಗ (muslim) ವಿವಾಹ ಮಾಡಿಕೊಳ್ಳಲು ಮುಂದಾಗಿದ್ದಾರೆ. ಆ ವೇಳೆ ಮುಸ್ಲಿಂ ಯುವಕನ ವಿರುದ್ಧ ಲವ್ ಜಿಹಾದ್ ಆರೋಪ ಹೊರಸಿದ ಹಿಂದೂ ಸಂಘಟನೆ ಕಾರ್ಯಕರ್ತರು, ಜೋಡಿಯನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಠಾಣೆಗೆ ಎಸ್ಡಿಪಿಐ, ದಲಿತ ಸಂಘಟನೆ ಮುಖಂಡರು ಆಗಮಿಸಿದ್ದರು. ಚಿಕ್ಕಮಗಳೂರು ಮಹಿಳಾ ಠಾಣೆಯಲ್ಲಿ ಪೊಲೀಸರಿಂದ ವಿಚಾರಣೆ ನಡೆದಿದೆ. ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (chikmagalur sp) ಉಮಾ ಪ್ರಶಾಂತ್ರಿಂದ ಯುವಕ-ಯುವತಿ ವಿಚಾರಣೆ ಮುಂದುವರಿದಿದೆ.
ಮಗಳ ಜತೆ ಮಾತನಾಡಲು ಬಿಡಿ ಎಂದು ಗೋಗರೆದ ತಾಯಿ:
ಕಾಫಿನಾಡಲ್ಲಿ ಲವ್ ಜಿಹಾದ್ ಆರೋಪ ಪ್ರಕರಣದಲ್ಲಿ ನೈತಿಕ ಪೊಲೀಸ್ ಗಿರಿ ದೂರಿನನ್ವಯ ಹಿಂದೂಪರ ಸಂಘಟನೆ ನಾಲ್ವರು ಕಾರ್ಯಕರ್ತರ ವಿರುದ್ದ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೋಂದಣಿಗೆ ಹೋದ ಸಂದರ್ಭ ನೈತಿಕ ಪೊಲೀಸ್ ಗಿರಿ ನಡೆದಿತ್ತು. ಚಿಕ್ಕಮಗಳೂರು ತಾಲೂಕಿನ ಲಕ್ಷ್ಮೀಪುರ ಮೂಲದ ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿ ಮಧ್ಯೆ ಲವ್ ಜಿಹಾದ್ ನಡೆದಿದೆ ಎನ್ನಲಾಗಿದೆ.
ತಮ್ಮ ಮಗಳ ಲವ್ ಜಿಹಾದ್ ಬಗ್ಗೆ ಚಿಕ್ಕಮಗಳೂರು ನಗರ ಮಹಿಳಾ ಠಾಣೆ ಮುಂದೆ ಮಗಳಿಗಾಗಿ ತಾಯಿ ಕಣ್ಣೀರು ಹಾಕಿದ್ದಾರೆ. ಪ್ರೀತಿಸಿದವನನ್ನೇ ಮದುವೆ ಆಗುತ್ತೇನೆಂದು ಯುವತಿ ನಿರ್ಧರಿಸಿದ್ದಾಳೆ. ಮಗಳು ಪೊಲೀಸ್ ಜೀಪ್ ಹತ್ತುವಾಗ ಕಣ್ಣೀರಿಟ್ಟ ತಾಯಿ, ಮಗಳ ಜತೆ ಮಾತನಾಡಲು ಬಿಡಿ ಎಂದು ಗೋಗರೆದ ಕರುಣಾಜನಕ ದೃಶ್ಯವೂ ಕಂಡುಬಂದಿತು. ನನ್ನ ಮಗಳು ನನಗೆ ಬೇಕು ಅಂತಾ ತಾಯಿ ಕಣ್ಣೀರಿಟ್ಟರು.
ಮಗಳು ಮತ್ತು ಅಳಿಯನಿಗೆ ತೊಂದರೆ ಆಗಬಾರದು, ಅವರ ಮದುವೆಗೆ ನನ್ನ ಸಂಪೂರ್ಣ ಒಪ್ಪಿಗೆ ಇದೆ -ತಾಯಿ ಶೋಭಾ
ಕಾಫಿನಾಡಲ್ಲಿ ಲವ್ ಜಿಹಾದ್ ಆರೋಪ ಪ್ರಕರಣದ ಬಗ್ಗೆ ಯುವತಿಯ ತಾಯಿ ಮಾತನಾಡಿದ್ದಾರೆ. ಅವರು ಹೂವಿನ ಹಾರ ಹಾಕಿಕೊಂಡು ಸೀದಾ ಲಕ್ಷ್ಮೀಪುರಕ್ಕೆ ಬರಬೇಕು. ನನ್ನ ಮಗಳ ಜೀವವೇ ನನಗೆ ಮುಖ್ಯ. ಮದುವೆಗೆ ನನ್ನ ಸಂಪೂರ್ಣ ಒಪ್ಪಿಗೆ ಇದೆ. ಅವಳಿಗೆ ಮತ್ತು ನನ್ನ ಅಳಿಯನಿಗೆ ತೊಂದರೆ ಆಗಬಾರದು. ಅವರು ಮದುವೆಯಾಗಲಿ, ಅದಕ್ಕೆ ನನ್ನ ಸಂಪೂರ್ಣ ಒಪ್ಪಿಗೆ ಇದೆ ಎಂದು ಪೊಲೀಸ್ ಠಾಣೆಯ ಬಳಿ ಯುವತಿಯ ತಾಯಿ ಶೋಭಾ ಅವರು ಹೇಳಿದ್ದಾರೆ.
Published On - 6:08 pm, Wed, 14 September 22