2019ರ ಮಹಾಮಳೆಯಿಂದಾದ ನಷ್ಟಕ್ಕೆ ಪರಿಹಾರ ಹೇಳಿ 3ದಿನಗಳಿಂದ ಸತ್ಯಾಗ್ರಹ ನಡೆಸುತ್ತಿದ್ದ ಕಳಸ ಮಹಿಳೆ ಅಸ್ವಸ್ಥ; ಆಸ್ಪತ್ರೆಗೆ ದಾಖಲು

2019ರ ಮಹಾಮಳೆಯಿಂದಾದ ನಷ್ಟಕ್ಕೆ ಪರಿಹಾರ ಹೇಳಿ 3ದಿನಗಳಿಂದ ಸತ್ಯಾಗ್ರಹ ನಡೆಸುತ್ತಿದ್ದ ಕಳಸ ಮಹಿಳೆ ಅಸ್ವಸ್ಥ; ಆಸ್ಪತ್ರೆಗೆ ದಾಖಲು
3ದಿನಗಳಿಂದ ಸತ್ಯಾಗ್ರಹ ನಡೆಸುತ್ತಿದ್ದ ಕಳಸ ಮಹಿಳೆ ಅಸ್ವಸ್ಥ; ಆಸ್ಪತ್ರೆಗೆ ದಾಖಲು

ಕಳೆದ 3 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು ಪ್ರತಿಭಟನೆ ವೇಳೆ ಸಂತ್ರಸ್ತೆ ವೇದಾವತಿ ಅಸ್ವಸ್ಥಗೊಂಡಿದ್ದು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

TV9kannada Web Team

| Edited By: Ayesha Banu

Mar 07, 2022 | 7:09 PM

ಚಿಕ್ಕಮಗಳೂರು: ಜಿಲ್ಲೆಯ ಕಳಸ ಪಟ್ಟಣದಲ್ಲಿ ಕಳೆದ 3 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು ಪ್ರತಿಭಟನೆ ವೇಳೆ ಸಂತ್ರಸ್ತೆ ವೇದಾವತಿ ಅಸ್ವಸ್ಥಗೊಂಡಿದ್ದು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. 2019ರ ಮಹಾಮಳೆಯಲ್ಲಿ ಮನೆ, ಜಮೀನು, ಪುತ್ರನನ್ನು ಕಳೆದುಕೊಂಡಿದ್ದ ವೇದಾವತಿಗೆ ಸರ್ಕಾರ ಇದುವರೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಹಾಗೂ ಬಾಡಿಗೆ ಮನೆಯಲ್ಲಿ ವಾಸವಿದ್ದರೂ ಜಿಲ್ಲಾಡಳಿತ ಬಾಡಿಗೆ ಹಣವನ್ನೂ ಪಾವತಿಸದಿದ್ದರಿಂದ ಜೀವನ ದುಸ್ತರವಾಗಿ ದಯಾಮರಣಕ್ಕೆ ಅವಕಾಶ ಕೋರಿದ್ದರು. ಕಳೆದ ಮೂರು ದಿನಗಳಿಂದ ಸಂತ್ರಸ್ತರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಉಪವಾಸವಿದ್ದ ಸಂತ್ರಸ್ತ ಮಹಿಳೆ ವೇದಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆ ಹಿನ್ನೆಲೆ: 2019 ರ ಮಹಾಮಳೆಯಲ್ಲಿ ಮನೆ, ಜಮೀನು ಕಳೆದುಕೊಂಡಿದ್ದ ಜನರಿಗೆ ಈವರೆಗೂ ಪರ್ಯಾಯ ವ್ಯವಸ್ಥೆ ಸಿಕ್ಕಿಲ್ಲ. ಮನೆ, ಜಮೀನು ಕಳೆದುಕೊಂಡ ಜನರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡುವಲ್ಲಿ ಸರ್ಕಾರ ವಿಫಲವಾಗಿದೆ. ಅಷ್ಟೇ ಅಲ್ಲದೆ, ಬಾಡಿಗೆ ಮನೆಯಲ್ಲಿ ವಾಸವಿದ್ದರೂ ಜಿಲ್ಲಾಡಳಿತ ಬಾಡಿಗೆ ಹಣ ನೀಡಿಲ್ಲ. ಸರ್ಕಾರ, ಜಿಲ್ಲಾಡಳಿತದ ಧೋರಣೆ ವಿರೋಧಿಸಿ ಸಂತ್ರಸ್ತರು ಧರಣಿ ನಡೆಸಿದ್ದಾರೆ. ಬದುಕಲು ಬಿಡಿ ಇಲ್ಲಾ ದಯಾಮರಣಕ್ಕೆ ಅವಕಾಶ ಕೊಡಿ ಎಂದು ಸಂತ್ರಸ್ತರು ಪಟ್ಟು ಹಿಡಿದಿದ್ದಾರೆ. ಸಂತ್ರಸ್ತರ ಹಿತಕಾಯಲು ಜನಪ್ರತಿನಿಧಿಗಳು, ಅಧಿಕಾರಿಗಳು ವಿಫಲರಾಗಿದ್ದಾರೆ.

ಪ್ರತಿಭಟನೆ ನಿರತ ಮಹಿಳೆಯರ ಪೈಕಿ ಸಂತ್ರಸ್ತೆ ವೇದಾವತಿ ಅಸ್ವಸ್ಥಗೊಂಡಿದ್ದು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೇದಾವತಿಯವರು 2019ರಲ್ಲಿ ಮನೆ ಜೊತೆ ಪುತ್ರನನ್ನು ಕಳೆದುಕೊಂಡಿದ್ದರು.

ಇದನ್ನೂ ಓದಿ: ಉಕ್ರೇನ್‌ನ ಸುಮಿಯಲ್ಲಿ ಸ್ಥಳಾಂತರ ಪ್ರಕ್ರಿಯೆ ಸದ್ಯ ರದ್ದಾಗಿದೆ ಎಂದ ಭಾರತೀಯ ವಿದ್ಯಾರ್ಥಿಗಳು

ಗ್ರೀನ್ ಡ್ರೆಸ್ನಲ್ಲಿ ಹಾಟ್ ಆಗಿ ಪೂಜಾ ಹೆಗ್ಡೆ

Follow us on

Related Stories

Most Read Stories

Click on your DTH Provider to Add TV9 Kannada