ನರ್ಸ್ ವೇಷದಲ್ಲಿ ಒಂದು ಮಗುವನ್ನ ಕದ್ದು ಮಹಿಳೆ ಪರಾರಿ, ಮಗುವಿಗಾಗಿ ಕಣ್ಣೀರಿಟ್ಟ ತಾಯಿ

ನರ್ಸ್ ವೇಷದಲ್ಲಿ ಒಂದು ಮಗುವನ್ನ ಕದ್ದು ಮಹಿಳೆ ಪರಾರಿ, ಮಗುವಿಗಾಗಿ ಕಣ್ಣೀರಿಟ್ಟ ತಾಯಿ

ಚಿಕ್ಕಮಗಳೂರು: ನರ್ಸ್ ವೇಷದಲ್ಲಿ ಬಂದ ಮಹಿಳೆಯಿಂದ ಮಗು ಕಳ್ಳತನವಾಗಿರುವ ಘಟನೆ ಚಿಕ್ಕಮಗಳೂರಿನ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿದೆ. ಅಸ್ಸಾಂ ಮೂಲದ ಅಂಜಲಿ-ಸುನಿಲ್ ಎಂಬ ದಂಪತಿಗೆ ಹೊಸ ವರ್ಷಕ್ಕೆ ಜನಿಸಿದ ನಾಲ್ಕು ದಿನದ ನವಜಾತ ಶಿಶು ಕಳ್ಳತನವಾಗಿದೆ.

ನರ್ಸ್ ವೇಷದಲ್ಲಿ ಬಂದ ಮಹಿಳೆ ತಾಯಿಯ ಬಳಿ ನರ್ಸ್ ಎಂದು ಹೇಳಿ ಮಗುವಿಗೆ ತಪಾಸಣೆ ಮಾಡಿಸಬೇಕು ಎಂದು ಮಗುವನ್ನು ತಾಯಿಯಿಂದ ದೂರ ಮಾಡಿದ್ದಾಳೆ. ನಾಲ್ಕೇ ದಿನಕ್ಕೆ ಕಂದಮ್ಮನನ್ನು ಕಳೆದುಕೊಂಡು ತಾಯಿ ಕಣ್ಣೀರು ಹಾಕುತ್ತಿದ್ದಾರೆ. ಆಸ್ಪತ್ರೆಯಲ್ಲಿ ಸಿಸಿಟಿವಿಗಳು ತಮ್ಮ ಕಾರ್ಯ ನಿಲ್ಲಿಸಿವೆ. ಎಲ್ಲಾ ಸಿಸಿಟಿವಿಗಳು ಕೆಟ್ಟು ಹಾಳಾಗಿವೆ.

Click on your DTH Provider to Add TV9 Kannada