AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿರಿಗೆರೆ ಮಠದ ಶ್ರೀಗಳ ವಿರುದ್ಧ ಕೋಟ್ಯಂತರ ಆಸ್ತಿ ಕಬಳಿಕೆ ಆರೋಪ: ಸ್ವಾಮೀಜಿ ವಿರುದ್ಧ ತೀವ್ರಗೊಂಡ ಹೋರಾಟ

ಚಿತ್ರದುರ್ಗ ಸಿರಿಗೆರೆ ತರಳುಬಾಳು ಗುರುಪೀಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿರುದ್ಧ ತೀವ್ರ ಹೋರಾಟ ಶುರುವಾಗಿದೆ. ಸ್ವಾಮೀಜಿ ವಿರುದ್ಧ ಇನ್ನೊಂದು ಸಲ ಸಮಾಜದ ಪ್ರಮುಖ ಭಕ್ತರ ಸಭೆ ಮಾಡಲಾಗಿದೆ. ಸುಮಾರು ಎರಡು ಸಾವಿರ ಕೋಟಿ ರೂ ಆಸ್ತಿ ಸ್ವಾಮೀಜಿ ತಮ್ಮ ಹೆಸರಿನಲ್ಲಿ ಮಾಡಿಕೊಂಡಿದ್ದಾರೆ ಎಂದು ಸ್ವಾಮೀಜಿ ವಿರುದ್ಧ ಭಕ್ತರ ಗಂಭೀರ ಆರೋಪ ಕೇಳಿ ಬಂದಿದೆ.

ಸಿರಿಗೆರೆ ಮಠದ ಶ್ರೀಗಳ ವಿರುದ್ಧ ಕೋಟ್ಯಂತರ ಆಸ್ತಿ ಕಬಳಿಕೆ ಆರೋಪ: ಸ್ವಾಮೀಜಿ ವಿರುದ್ಧ ತೀವ್ರಗೊಂಡ ಹೋರಾಟ
ಸಿರಿಗೆರೆ ಮಠದ ಶ್ರೀಗಳ ವಿರುದ್ಧ ಕೋಟ್ಯಂತರ ಆಸ್ತಿ ಕಬಳಿಕೆ ಆರೋಪ: ಸ್ವಾಮೀಜಿ ವಿರುದ್ಧ ತೀವ್ರಗೊಂಡ ಹೋರಾಟ
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಗಂಗಾಧರ​ ಬ. ಸಾಬೋಜಿ|

Updated on:Sep 01, 2024 | 6:08 PM

Share

ದಾವಣಗೆರೆ, ಸೆಪ್ಟೆಂಬರ್​ 01: ಸಿರಿಗೆರೆ ಸ್ವಾಮೀಜಿ (Sirigere Shivamurthy Shivacharya Swamiji) ವಿರುದ್ಧ ದಿನದಿಂದ ದಿನಕ್ಕೆ ಹೋರಾಟ ತೀವ್ರಗೊಳ್ಳುತ್ತಿದೆ. ವಿಚಿತ್ರ ಅಂದ್ರೆ ಟ್ರಸ್ಟ ಬೈಲಾ ತಿದ್ದುಪಡಿ ಮಾಡಿ ಸ್ವಾಮೀಜಿ ಇಡಿ ಮಠದ ಆಸ್ತಿ ತಮ್ಮಂತೆ ಮಾಡಿಕೊಂಡಿದ್ದಾರೆ. ಅದು ಎರಡು ಸಾವಿರ ಕೋಟಿ ರೂಪಾಯಿ ಆಸ್ತಿಯಲ್ಲಾ ಸ್ವಾಮೀಜಿ ಹೆಸರಿಗೆ ಮಾಡಿಕೊಂಡಿದ್ದಾರೆ ಎಂದು ಲಿಂಗಾಯತ ಸಮುದಾಯದ ಮುಖಂಡ ಅಣಬೇರು ರಾಜಣ್ಣ ಗಂಭೀರ ಆರೋಪ ಮಾಡಿದ್ದಾರೆ. ಬಂಡವಾಳ್ ಶಾಹಿ ಎನ್ನುವ ಸ್ವಾಮೀಜಿ ತಾವೇ ಎರಡು ಸಾವಿರ ಕೋಟಿ ರೂ. ಒಡೆಯ ಎಂಬ ಆರೋಪ ಕೇಳಿ ಬಂದಿದೆ. ಬೈಲಾದಲ್ಲಿ ಮಠದ ಹೆಸರು ಬದಲಿ ಸ್ವಂತ ಆಸ್ತಿ ಮಾಡಿಕೊಂಡಿದ್ದಾರಂತೆ ಸ್ವಾಮೀಜಿ.

ಚಿತ್ರದುರ್ಗ ಸಿರಿಗೆರೆ ತರಳುಬಾಳು ಗುರುಪೀಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿರುದ್ಧ ತೀವ್ರ ಹೋರಾಟ ಶುರುವಾಗಿದೆ. ಸ್ವಾಮೀಜಿ ವಿರುದ್ಧ ಇನ್ನೊಂದು ಸಲ ಸಮಾಜದ ಪ್ರಮುಖ ಭಕ್ತರ ಸಭೆ ಮಾಡಲಾಗಿದೆ. ಸ್ವಾಮೀಜಿ ಪೀಠ ತ್ಯಾಗ ಮಾಡಿ ಎಂದು ಭಕ್ತರು ಪಟ್ಟು ಹಿಡಿದಿದ್ದಾರೆ. ಸಿರಿಗೆರೆ ಮಠದ ಸುಮಾರು ಎರಡು ಸಾವಿರ ಕೋಟಿ ರೂಪಾಯಿ ಆಸ್ತಿ ಸ್ವಾಮೀಜಿ ತಮ್ಮ ಹೆಸರಿನಲ್ಲಿ ಮಾಡಿಕೊಂಡಿದ್ದಾರೆ. ಸಿರಿಗೆರೆ ಮಠದ ಡಾ.‌ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿರುದ್ಧ ಭಕ್ತರ ಗಂಭೀರ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: ಸಿರಿಗೆರೆ ಸ್ವಾಮೀಜಿ‌ಯನ್ನು ಪೀಠದಿಂದ ಕೆಳಗಿಳಿಸಲು ದೃಢ ನಿರ್ಧಾರ, ಶಾಮನೂರು ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ರಚನೆ

ದಾವಣಗೆರೆ ನಗರದ ಹೊರ ವಲಯದ ಅಪೂರ್ವ ರೆಸಾರ್ಟ್​ನಲ್ಲಿ ನಡೆದ ಸಿರಿಗೆರೆ ಮಠದ ಭಕ್ತರ ಸಭೆಯಲ್ಲಿ ಗಂಭೀರ ಆರೋಪ‌ ಕೇಳಿ ಬಂದಿದ್ದು ಇಡಿ ಸಮಾಜವೇ ಅಚ್ಚರಿ ಪಡುವಂತಾಗಿದೆ. ಎರಡು ಸಾವಿರ ಕೋಟಿ ರೂ. ಹಣ ಆಸ್ತಿ ನಮ್ಮ ಹೆಸರಿಗೆ ಮಾಡಿಕೊಂಡು ಸ್ವಾಮೀಜಿ ಸಾಧು ಲಿಂಗಾಯತ ಸಮಾಜಕ್ಕೆ ಮೋಸ ಮಾಡಬಾರದು. ಭಕ್ತರು ದಾನ, ಧರ್ಮ ಮಾಡಿದ್ದು ಸಮಾಜಕ್ಕೆ. ಆದರೆ ಸ್ವಾಮೀಜಿ ತಮ್ಮ ಹೆಸರಿನಲ್ಲಿ ಮಾಡಿಕೊಂಡಿದ್ದಾರೆ. ಮಠದ ಬೈಲಾ ತಿದ್ದು ಮಾಡಿದ್ದಾರೆ. ನಾವು ರೆಸಾರ್ಟ್​ನಲ್ಲಿ ಸಭೆ ಮಾಡಿದ್ರೆ ಕುಡುಕರ ಸಭೆ ಎಂದಿದ್ದಾರೆ. ನಾವು ಕುಡುಕರು ಆದರೆ ನೀವು ಹಾಲು ‌ಕುಡಿದವರು ಚೆನ್ನಾಗಿ‌ ಮಾತಾಡಲಿ ಎಂದಿದ್ದಾರೆ.

ಈಗ 78 ವರ್ಷ ಆಗಿದೆ ಸ್ವಾಮೀಜಿ. 60ನೇ ವರ್ಷಕ್ಕೆ ಪೀಠ ತ್ಯಾಗ ಮಾಡಬೇಕಿತ್ತು. ಆದರೆ ಮೂಲ ಬೈಲಾ ತಿದ್ದುಪಡಿ ಮಾಡಿದ್ದಾರೆ. 1938 ರಲ್ಲಿ ಹಿರಿಯ ಸ್ವಾಮೀಜಿ ಒಂದು ಬೈಲಾ ಮಾಡಿದ್ದಾರೆ. ಭಕ್ತರು ಮಠದ ಪೀಠಾಧೀಶರನ್ನ ಆಯ್ಕೆ ಮಾಡುವ ಸ್ವಾತಂತ್ರ್ಯವಿತ್ತು. ಆದಾಯ ತೆರಿಗೆ ಕಾರಣ ಹೇಳಿ, ಬೈಲಾದಲ್ಲಿ‌ ಮಠದ ಹೆಸರೇ ಬದಲಿಸಿ ಇವರದ್ದೇ ಸ್ವಂತ ಮಠ ಮಾಡಿಕೊಂಡಿದ್ದಾರೆ. ಟ್ರಸ್ಟ ಮಾಡಿಕೊಂಡು ಮಠದ ಎಲ್ಲ ಆಸ್ತಿ ಟ್ರಸ್ಟ್ ವ್ಯಾಪ್ತಿಗೆ ಬರುತ್ತದೆ. ಉತ್ತರಾಧಿಕಾರಿ ನೇಮಕ‌ ಅಧಿಕಾರ ಸ್ವಾಮೀಜಿ ತಮ್ಮ‌ಬಳಿಯೇ ಇಟ್ಟುಕೊಂಡಿದ್ದಾರೆ ಎಂದು ಲಿಂಗಾಯತ ಸಮುದಾಯದ ಮುಖಂಡ ಅಣಬೇರು ರಾಜಣ್ಣ ಹೇಳಿದ್ದಾರೆ.

ಸಭೆ ಬಳಿಕ ಮಾತನಾಡಿದ ಮಾಜಿ ಸಚಿವ ಬಿಸಿ ಪಾಟೀಲ್, ಸ್ವಾಮೀಜಿಗೆ ಕೈ‌ಮುಗಿದು ಕೇಳುವೆ, ಸಮಾಜ ಒಡೆಯ ಬೇಡಿ. ಭಕ್ತರ ಮನಸ್ಸಿನಲ್ಲಿ ವಿಷ ಬಿತ್ತಬೇಡಿ. ನಾವು ಬಂಡವಾಳ ಶಾಹಿಗಳಲ್ಲ‌. ನೀವು ಎರಡು ಸಾವಿರ ಕೋಟಿ ರೂಪಾಯಿ ನಿಮ್ಮ ಹೆಸರಿನಲ್ಲಿ ಮಾಡಿಕೊಂಡು ನಮಗಿಂತ ಬಂಡವಾಳ ಶಾಹಿ‌ ನೀವೇ ಆಗಿದ್ದೀರಿ. ಸುತ್ತೂರ ಮಠ ಹಾಗೂ ಮಾದಾರ ಚನ್ನಯ್ಯ ಸ್ವಾಮೀಜಿ ಉತ್ತಾಧಿಕಾರಿ ನೇಮಕ‌ಮಾಡಿದ್ದಾರೆ. ಸಿರಿಗೆರೆ ಸ್ವಾಮೀಜಿ ಏನಾಗಿದೆ.‌ ಉತ್ತಾಧಿಕಾರಿ ನೇಮಕ ಮಾಡಿ. ನಾವು ಈ ಹಿಂದೆ 4 ರಂದು ಇಲ್ಲಿಯೇ ಸಭೆ ಮಾಡಿದೇವು. ಕುಡುಕರ ಸಭೆ ಮಾಡಿದ್ದಾರೆ ಎಂದು ಸ್ವಾಮೀಜಿ ಹೇಳಿದ್ದರು. ನಾವು ಕುಡುಕರು ನೀವು ಹಾಲು, ಅದರಲ್ಲಿ ಗೋವಿನ ಹಾಲು ಕುಡಿದವರು ನ್ಯಾಯಯುತವಾಗಿ ನಡೆದುಕೊಳ್ಳಿ ಎಂಬ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಕಲ್ಲು ನಾಗರಕ್ಕೆ ಹಾಲು ಎರೆಯುವುದನ್ನು ತಡೆಯಲು 26 ವರ್ಷಗಳಿಂದ ಸ್ವಾಮೀಜಿ ವಿನೂತನ ಪ್ರಯತ್ನ

ಕಳೆದ ನಾಲ್ಕರಂದು ಅದೇ ಅಪೂರ್ವ ರೆಸಾರ್ಟ್​ನಲ್ಲಿ ನಡೆದ ಸಭೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಪಾಲ್ಗೊಂಡಿದ್ದರು. ಆದರೆ ಇಂದಿನ ಸಭೆಗೆ ಅವರು ಗೈರು ಹಾಜರಾಗಿದ್ದು, ಹತ್ತಾರು ಸಂಶಯಗಳಿಗೆ ಕಾರಣವಾಗಿದೆ. ಮೇಲಾಗಿ ಟ್ರಸ್ಟ್ ಬೈಲಾದಲ್ಲಿ ಸರ್ವಾಧಿಕಾರಿಯಂತೆ ವರ್ತಿಸಿದ್ದಾರೆ. ಉತ್ತರಾಧಿಕಾರಿ ಅಧಿಕಾರ ಸಹ ಅವರೆ ಇಟ್ಟುಕೊಂಡಿದ್ದಾರೆ. ಸಿರಿಗೆರೆ ಸಮಾಜದ ಮಠದ ಆಗುವ ಮೊದಲು ಸ್ವಾಮೀಜಿ ಮಠವಾಗಿದೆ. ಜೊತೆಗೆ ಎರಡು ಸಾವಿರ ಕೋಟಿ ರೂಪಾಯಿ ಆಸ್ತಿಯನ್ನ ಸ್ವಾಮೀಜಿ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಇದೇ ಮೊದಲ ಬಾರಿಗೆ ಕೇಳಿ ಬಂದಿದೆ.

ಇನ್ನು ಸಭೆಯಲ್ಲಿ ಮಾಜಿ ಸಚಿವ ಬಿಸಿ ಪಾಟೀಲ್, ಎಸ್ ಎ ರವೀಂದ್ರನಾಥ, ಮಾಜಿ ಶಾಸಕ ವಡ್ನಾಳ್ ರಾಜಣ್ಣ ಸಾಧು ಲಿಂಗಾಯತ ಸಮಾಜದ ಹಿರಿಯ ಮುಖಂಡ ಅಣಬೇರು ರಾಜಣ್ಣ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 6:07 pm, Sun, 1 September 24