ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೊಳವೆ ಬಾವಿ ನಿರ್ಮಾಣ ಕಾರ್ಯ ವಿಳಂಬ; ಚಿತ್ರದುರ್ಗದ ರೈತರಿಂದ ಆಕ್ರೋಶ

ಕಳೆದ ಮೂರು ವರ್ಷದಿಂದ ಯಾರಿಗೂ ಕೊಳವೆ ಬಾವಿ ಯೋಜನೆ ನೀಡಿಲ್ಲ. ಹೀಗಾಗಿ, ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದ್ದು ರೈತ ಸಂಘದ ನೇತೃತ್ವದಲ್ಲಿ ಅನೇಕ ಸಲ ಪ್ರತಿಭಟನೆ, ಧರಣಿ ನಡೆಸಲಾಗಿದೆ. ಕೊವಿಡ್ ನೆಪ ಹೇಳಿ ಧರಣಿ ಬಿಡಿಸಲಾಯಿತು. ಆದರೆ ಈವರೆಗೆ ರೈತರಿಗೆ ಕೊಳವೆ ಬಾವಿ ನೀಡಿಲ್ಲ ಎಂದು ಹೊಳಲ್ಕೆರೆ ರೈತ ಸಂಘದ ಅಧ್ಯಕ್ಷ್ಯ ಮಲ್ಲಿಕಾರ್ಜುನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೊಳವೆ ಬಾವಿ ನಿರ್ಮಾಣ ಕಾರ್ಯ ವಿಳಂಬ; ಚಿತ್ರದುರ್ಗದ ರೈತರಿಂದ ಆಕ್ರೋಶ
ಕೊಳವೆ ಬಾವಿ
Follow us
TV9 Web
| Updated By: preethi shettigar

Updated on: Jul 06, 2021 | 8:11 AM

ಚಿತ್ರದುರ್ಗ: ಮಳೆ ಹೆಚ್ಚಾಗಿ ಆಗದ ಬಯಲು ಸೀಮೆಯ ರೈತರ ಪಾಲಿಗೆ ಕೊಳವೆ ಬಾವಿಯೇ ಮೂಲಾಧಾರ. ಹೀಗಾಗಿ ಜಿಲ್ಲೆಯಲ್ಲಿ ಕೊಳವೆ ಬಾವಿಯ ಕನಸು ಹೊತ್ತು ಅನೇಕ ವರ್ಷಗಳಿಂದ ರೈತರು ಕಾಯುತ್ತಿದ್ದಾರೆ. ಆದರೆ ರೈತರ ನಿರೀಕ್ಷೆ ಹುಸಿಯಾಗಿದ್ದು, ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ಕೊಳವೆ ಬಾವಿ ನಿರ್ಮಾಣ ಕಾರ್ಯ ಮಾತ್ರ ಆರಂಭವಾಗಿಲ್ಲ. ಇದರಿಂದ ಬೇಸತ್ತ ಚಿತ್ರದುರ್ಗದ ರೈತರು ನಿರಂತರ ಹೋರಾಟ ಮಾಡುತ್ತಾ ಬಂದಿದ್ದಾರೆ. ಆದರೆ ಹೋರಾಟಕ್ಕಿಳಿದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸುತ್ತಿಲ್ಲ. ಸಮಾಜ ಕಲ್ಯಾಣ ಸಚಿವರು ಪ್ರತಿನಿಧಿಸುವ ಜಿಲ್ಲೆಯಲ್ಲೇ ರಾಜಕೀಯ ಮೇಲಾಟದಿಂದಾಗಿ ಗಂಗಾಕಲ್ಯಾಣ ಯೋಜನೆ ಹಳ್ಳ ಹಿಡಿದಿದ್ದು, ಸಹಜವಾಗಿಯೇ ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

2017-18ರಲ್ಲಿ ಹೊಳಲ್ಕೆರೆ ಕ್ಷೇತ್ರಕ್ಕೆ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ 600 ಕೊಳವೆ ಬಾವಿಗಳು ಮಂಜೂರಾಗಿದ್ದು, ಫಲಾನುಭವಿಗಳ ಆಯ್ಕೆ ಪಟ್ಟಿಯೂ ಅಂತಿಮವಾಗಿದೆ. ಆದರೆ ತದನಂತರ ಆಯ್ಕೆಯಾಗಿ ಬಂದ ಬಿಜೆಪಿ ಶಾಸಕ ಎಂ.ಚಂದ್ರಪ್ಪ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಗಿರುವ ಅದರಲ್ಲೂ ಹೊಳಲ್ಕೆರೆ ಕಾಂಗ್ರೆಸ್ ಶಾಸಕ ಹೆಚ್.ಆಂಜನೇಯ ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಸಿದ್ಧಪಡಿಸಿದ ಪಟ್ಟಿ ಎಂಬ ಕಾರಣಕ್ಕೆ ತಡೆ ಹಿಡಿಯಲಾಗಿದೆ. ಇಬ್ಬರ ರಾಜಕೀಯ ದ್ವೇಷಕ್ಕೆ ರೈತರು ಬಲಿಪಶುಗಳಾಗುವಂತಾಗಿದೆ. ಕಳೆದ ಮೂರು ವರ್ಷದಿಂದ ಯಾರಿಗೂ ಕೊಳವೆ ಬಾವಿ ಯೋಜನೆ ನೀಡಿಲ್ಲ. ಹೀಗಾಗಿ, ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದ್ದು ರೈತ ಸಂಘದ ನೇತೃತ್ವದಲ್ಲಿ ಅನೇಕ ಸಲ ಪ್ರತಿಭಟನೆ, ಧರಣಿ ನಡೆಸಲಾಗಿದೆ. ಕೊವಿಡ್ ನೆಪ ಹೇಳಿ ಧರಣಿ ಬಿಡಿಸಲಾಯಿತು. ಆದರೆ ಈವರೆಗೆ ರೈತರಿಗೆ ಕೊಳವೆ ಬಾವಿ ನೀಡಿಲ್ಲ ಎಂದು ಹೊಳಲ್ಕೆರೆ ರೈತ ಸಂಘದ ಅಧ್ಯಕ್ಷ್ಯ ಮಲ್ಲಿಕಾರ್ಜುನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಬಗ್ಗೆ ಸಮಾಜ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ಶ್ರೀರಾಮುಲು ಅವರನ್ನು ಕೇಳಿದರೆ ಹೊಳಲ್ಕೆರೆ ತಾಲೂಕಿನ ಗಂಗಾ ಕಲ್ಯಾಣ ಯೋಜನೆಯ ಆಯ್ಕೆ ಪಟ್ಟಿ ಗೊಂದಲ ಕೋರ್ಟಿನಲ್ಲಿತ್ತು. ಹೀಗಾಗಿ, ವಿಳಂಬ ಆಗಿದ್ದು, ಶೀಘ್ರ ಗಂಗಾ ಕಲ್ಯಾಣ ಯೋಜನೆ ಅಡಿ ಕೊಳವೆ ಬಾವಿ ನೀಡಲಾಗುವುದು. ಎರಡು ದಿನಗಳ ಹಿಂದಷ್ಟೇ ಗಂಗಾ ಕಲ್ಯಾಣ ಯೋಜನೆ ಅಡಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಖಾತೆಗೆ ಹಣ ಸಂದಾಯ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ಹೊಳಲ್ಕೆರೆ ಕ್ಷೇತ್ರದಲ್ಲಿ ರೈತರಿಗೆ ಕೊಳವೆ ಬಾವಿ ನೀಡುವ ವಿಚಾರದಲ್ಲಿ ರಾಜಕಾರಣ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಹೀಗಾಗಿ, ಸರ್ಕಾರ ಮತ್ತು ಸಚಿವರು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಆ ಮೂಲಕ ರೈತರಿಗೆ ನೆರವಿನ ಹಸ್ತ ಚಾಚಬೇಕಿದೆ.

ಇದನ್ನೂ ಓದಿ: ಅಂತರ್ಜಲ ಅಧ್ಯಯನಕ್ಕಾಗಿಯೇ ರಾಜ್ಯದ 1199 ಗ್ರಾಮಗಳಲ್ಲಿ ಕೊಳವೆ ಬಾವಿ ಕೊರೆಯಲು ಸಿದ್ಧತೆ

ಸಾವಯವ ಕೃಷಿ ಮೂಲಕ ಸೊಪ್ಪು ಬೆಳೆದು ಸ್ವಾವಲಂಬಿ ಬದುಕು ಕಟ್ಟಿಕೊಂಡ ದಾವಣಗೆರೆ ರೈತ; ಸುಡು ಬಿಸಿಲಿನಲ್ಲಿ ಸೊಪ್ಪಿನ ಸಂತೆ

ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ