ಹಿಮ ಬೀಳುತ್ತಿರುವ ಬಗ್ಗೆ ಅಧ್ಯಯನ ಪ್ರವಾಸ; ಹಿಮಾಲಯ ತೋರಿಸಲು ಕುಟುಂಬಸ್ಥರನ್ನು ಕರೆದೊಯ್ಯುತ್ತಿರುವೆ: ಎ ನಾರಾಯಣಸ್ವಾಮಿ

| Updated By: ganapathi bhat

Updated on: Jul 06, 2021 | 4:47 PM

ಕೇಂದ್ರದ ಸಚಿವ ಸಂಪುಟದ ವಿಸ್ತರಣೆ ಬಗ್ಗೆ ಪ್ರಶ್ನಿಸಿದಾಗ, ಜುಲೈ 8ರಂದು ಕೇಂದ್ರ ಸಚಿವ ಸಂಪುಟ ವಿಸ್ತರಣೆಯಿದೆ. ಆದರೆ, ರಾಜ್ಯದಿಂದ ಯಾಱರು ಸಚಿವರಾಗುತ್ತಾರೆಂದು ನನಗೆ ಗೊತ್ತಿಲ್ಲ ಎಂದು ನಾರಾಯಣಸ್ವಾಮಿ ಹೇಳಿದ್ದಾರೆ.

ಹಿಮ ಬೀಳುತ್ತಿರುವ ಬಗ್ಗೆ ಅಧ್ಯಯನ ಪ್ರವಾಸ; ಹಿಮಾಲಯ ತೋರಿಸಲು ಕುಟುಂಬಸ್ಥರನ್ನು ಕರೆದೊಯ್ಯುತ್ತಿರುವೆ: ಎ ನಾರಾಯಣಸ್ವಾಮಿ
ಎ ನಾರಾಯಣಸ್ವಾಮಿ
Follow us on

ದೇವನಹಳ್ಳಿ: ನಾನು 2 ಸ್ಟ್ಯಾಂಡಿಂಗ್​ ಕಮಿಟಿಯಲ್ಲಿದ್ದೇನೆ, ನಾಳೆ ಸಭೆ ಇದೆ. ನಾಳಿನ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಹೋಗುತ್ತಿದ್ದೇನೆ ಎಂದು ಚಿತ್ರದುರ್ಗ ಕ್ಷೇತ್ರದ ಬಿಜೆಪಿ ಸಂಸದ ಎ. ನಾರಾಯಣಸ್ವಾಮಿ ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಹೇಳಿಕೆ ನೀಡಿದ್ದಾರೆ. ಅಧ್ಯಯನ ಪ್ರವಾಸ, ಕೇಂದ್ರ ಸಚಿವ ಸಂಪುಟ ವಿಸ್ತರಣೆ ವಿಚಾರಗಳ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಹಿಮಾಲಯದಲ್ಲಿ ಹಿಮ ಬೀಳುತ್ತಿರುವ ಬಗ್ಗೆ ಅಧ್ಯಯನ ಪ್ರವಾಸ ನಡೆಸಲಾಗುತ್ತಿದೆ. ಹಿಮಾಲಯ ತೋರಿಸಲು ಕುಟುಂಬಸ್ಥರನ್ನೂ ಕರೆದೊಯ್ಯುತ್ತಿರುವೆ. ಯಾವಾಗಲೂ ಎಲ್ಲೂ ಕರೆದೊಯ್ಯಲ್ಲ ಎಂದು ಹೇಳುತ್ತಿದ್ದರು. ಹಾಗಾಗಿ ಕುಟುಂಬ ಸದಸ್ಯರನ್ನ ನನ್ನ ಜತೆ ಕರೆದೊಯ್ಯುತ್ತಿರುವೆ ಎಂದು ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ನಾರಾಯಣಸ್ವಾಮಿ ಹೇಳಿದ್ದಾರೆ.

ಕೇಂದ್ರದ ಸಚಿವ ಸಂಪುಟದ ವಿಸ್ತರಣೆ ಬಗ್ಗೆ ಪ್ರಶ್ನಿಸಿದಾಗ, ಜುಲೈ 8ರಂದು ಕೇಂದ್ರ ಸಚಿವ ಸಂಪುಟ ವಿಸ್ತರಣೆಯಿದೆ. ಆದರೆ, ರಾಜ್ಯದಿಂದ ಯಾಱರು ಸಚಿವರಾಗುತ್ತಾರೆಂದು ನನಗೆ ಗೊತ್ತಿಲ್ಲ ಎಂದು ನಾರಾಯಣಸ್ವಾಮಿ ಹೇಳಿದ್ದಾರೆ. ನನಗೆ ಸಚಿವಸ್ಥಾನ ನೀಡುವ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ನಾನು ಶಾಸಕನಾಗಿದ್ದೆ, ಸಚಿವನಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ನಾನು ಯಾವುದೇ ಹುದ್ದೆಗಳಿಗೆ ಆಸೆ ಪಟ್ಟವನಲ್ಲ, ಪಡೋದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ನನಗೆ ಯಾವುದೇ ಜವಾಬ್ದಾರಿ ನೀಡಿದರೂ ನಿರ್ವಹಿಸುತ್ತೇನೆ. ಪಕ್ಷದ ಸಾಮಾನ್ಯ ಕಾರ್ಯಕರ್ತನ ರೀತಿಯಲ್ಲಿ ದುಡಿಯುವೆ. ಪಕ್ಷದ ಸೂಚನೆಗಳನ್ನ ಪಾಲಿಸುತ್ತೇನೆ, ನನಗಿನ್ನೂ ಕರೆ ಬಂದಿಲ್ಲ. ಆದರೆ, ಸಚಿವ ಸಂಪುಟ ವಿಸ್ತರಣೆ ಕಾರ್ಕ್ರಮ ಕಣ್ತುಂಬಿಕೊಳ್ಳುತ್ತೇನೆ. ನನಗೆ ಕೇಂದ್ರ ಸಚಿವಸ್ಥಾನ ನೀಡಿದರೆ ನಿರ್ವಹಿಸುವ ಶಕ್ತಿಯಿದೆ. ಯಾವಾಗಲೂ ಖುಷಿಯಿಂದಿರುತ್ತೇನೆ, ಈಗಲೂ ನಗುತ್ತಿದ್ದೇನೆ ಎಂದು ಅವರು ಮಾತನಾಡಿದ್ದಾರೆ.

ಇದನ್ನೂ ಓದಿ: ಪಂಚ ರಾಜ್ಯ ಚುನಾವಣೆ ಮೇಲೆ ಕಣ್ಣಿಟ್ಟು ಗುರುವಾರ ಬೆಳಗ್ಗೆ ಕೇಂದ್ರ ಸಚಿವ ಸಂಪುಟ ವಿಸ್ತರಣೆ: ಹೊಸ ಮುಖಗಳಿಗೆ ಮಣೆ

ಮೋದಿ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್​: ಗುರುವಾರದ ವಿಸ್ತರಣೆಯಲ್ಲಿ ಕರ್ನಾಟಕಕ್ಕೆ ಸಿಗಬಹುದೇ ಹೆಚ್ಚಿನ ಸ್ಥಾನ?

Published On - 4:40 pm, Tue, 6 July 21