ಮುರುಘಾಮಠದ ವಸತಿ ಶಾಲೆಯಲ್ಲಿ ನಾಲ್ಕೂವರೆ ವರ್ಷದ ಹೆಣ್ಣು ಮಗು ಪತ್ತೆ

ಮಠದ ವಸತಿ ಶಾಲೆಯಲ್ಲಿ ನಾಲ್ಕೂವರೆ ವರ್ಷದ ಹೆಣ್ಣು ಮಗು ಪತ್ತೆಯಾಗಿದೆ. ಮಗುವಿನ ಪೋಷಕರ ಪತ್ತೆಗೆ ಮಹಿಳಾ ರಕ್ಷಣಾ ಸಮಿತಿಯಿಂದ ಕ್ರಮಕೈಗೊಳ್ಳಲಾಗುತ್ತಿದೆ.

ಮುರುಘಾಮಠದ ವಸತಿ ಶಾಲೆಯಲ್ಲಿ ನಾಲ್ಕೂವರೆ ವರ್ಷದ ಹೆಣ್ಣು ಮಗು ಪತ್ತೆ
ಮಡಿಲು ದತ್ತು ಸ್ವೀಕಾರ ಕೇಂದ್ರ (ಸಂಗ್ರಹ ಚಿತ್ರ)
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Oct 14, 2022 | 10:16 PM

ಚಿತ್ರದುರ್ಗದ: ಕೋಟೆನಾಡು ಚಿತ್ರದುರ್ಗದ ಮುರುಘಾಶ್ರೀ (Murugha Mutt) ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಇದರ ಬೆನ್ನಲ್ಲೇ ಮಠದ ಆವರಣದಲ್ಲಿರುವ ವಸತಿ ಶಾಲೆಯಲ್ಲಿ ನಾಲ್ಕೂವರೆ ವರ್ಷದ ಹೆಣ್ಣು ಮಗು ಪತ್ತೆಯಾಗಿದೆ. ಮಠದ ವಸತಿ ಶಾಲೆಯಲ್ಲಿ ಅನಧಿಕೃತವಾಗಿ ಪುಟ್ಟ ಹೆಣ್ಣು ಮಗುವನ್ನು ಇರಿಸಲಾಗಿತ್ತು ಎಂಬಂಶ ಬಯಲಾಗಿದ್ದು, ಈ ಕುರಿತಾಗಿ ಅನೇಕ ಅನುಮಾನಗಳು ಹುಟ್ಟುಕೊಂಡಿವೆ. ಮಗುವಿನ ಪೋಷಕರ ಪತ್ತೆಗೆ ಮಹಿಳಾ ರಕ್ಷಣಾ ಸಮಿತಿಯಿಂದ ಕ್ರಮಕೈಗೊಳ್ಳಲಾಗುತ್ತಿದೆ. ಅನಧಿಕೃತವಾಗಿ ಮಕ್ಕಳನ್ನಿರಿಸಿಕೊಂಡ ಬಗ್ಗೆ ಕ್ರಮಕ್ಕೆ ಸಾಮಾಜಿಕ ಕಾರ್ಯಕರ್ತ ಮಧು ಆಗ್ರಹಿಸಿದ್ದಾರೆ. ಹೌದು, ಮುರುಘಾಶ್ರೀ ವಿರುದ್ಧ ಆಗಷ್ಟ್ 26 ರಂದು ಫೋಕ್ಸೋ ಪ್ರಕರಣ ದಾಖಲಾಗಿದ್ದು ಬಂಧನವೂ ಆಗಿದೆ. ಹೀಗಾಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಠದ ಅಕ್ಕ ಮಹಾದೇವಿ ಹಾಸ್ಟೆಲ್​ಗೆ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದರು.

ಅಂತೆಯೇ ಹಾಸ್ಟೆಲ್​ನಲ್ಲಿದ್ದ ಮಕ್ಕಳನ್ನು ಸರ್ಕಾರಿ ಹಾಸ್ಟೆಲ್ ಹಾಗೂ ಬಾಲ‌ಮಂದಿರಕ್ಕೆ ಶಿಫ್ಟ್ ಮಾಡಿದ್ದರು. ಆದರೆ ನಾಲ್ಕೂವರೆ ವರ್ಷದ ಚಿಗುರು ಎಂಬ ಹೆಸರಿನ ಹೆಣ್ಣುಮಗುವಿನ ದಾಖಲೆಗಳು ಮಾತ್ರ ಪತ್ತೆ ಆಗಿಲ್ಲ. ಹೀಗಾಗಿ, ಅಧಿಕಾರಿಗಳು ಇಂದು ಪತ್ರಿಕೆಗೆ ಜಾಹೀರಾತು ನೀಡಿದ್ದು ಮಗುವಿನ ಪೋಷಕರು ಇಲಾಖೆಯನ್ನು ಸಂಪರ್ಕಿಸುವಂತೆ ಕೋರಿದ್ದಾರೆ. ಇನ್ನು ಈಗಾಗಲೇ ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಮಧು, ಮಕ್ಕಳ ರಕ್ಷಣಾ ಸಮಿತಿ ಹಾಗೂ ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ನಂಬಲರ್ಹ ಮೂಲಗಳಿಂದ ಚಿಗುರು ಎಂಬ ಹೆಸರಿನ ಹೆಣ್ಣು ಮಗುವನ್ನು ಮಠದಲ್ಲಿ ಅಕ್ರಮವಾಗಿ ಸಾಕಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಡಿಲು ಯೋಜನೆಯಲ್ಲಿ ಮಗುವಿನ ಬಗ್ಗೆ ಯಾವುದೇ ದಾಖಲೆ, ಮಾಹಿತಿ ಎಂಟ್ರಿ ಮಾಡಿಲ್ಲ. ಇದೇ ರೀತಿ ಅನೇಕ‌ ಮಕ್ಕಳನ್ನು ಅಕ್ರಮವಾಗಿ ಸಾಕಲಾಗಿದೆ. ಅನೈತಿಕ ದಂಧೆಗೆ ಬಳಸಿಕೊಳ್ಳಾಲಾಗಿದೆ ಎಂದು ಆರೋಪಿಸಿದ್ದಾರೆ. ಅಂತೆಯೇ ಅಧಿಕಾರಿಗಳು ಸಹ ಈ ಬಗ್ಗೆ ನಿರ್ಲಕ್ಷ ತೋರಿದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ

ಚಿಗುರು ಎಂಬ ಮಗು ಅನಾಥ ಮಗು ಮಠದ ಮುಂದಿನ ರಸ್ತೆಯಲ್ಲಿ ಪತ್ತೆ: ಮಹಿಳೆ ಫೈರೋಜಾ

ಮುರುಘಾಮಠದ ಎದುರಿನ ಟೀಸ್ಟಾಲ್ ಮಹಿಳೆ ಫೈರೋಜಾ ಹೇಳಿಕೆ ನೀಡಿದ್ದು, ನಾಲ್ಕೂವರೆ ವರ್ಷದ ಹಿಂದೆ ಮಠದ ಮುಂದಿನ ರಸ್ತೆ ಬಳಿ ನಾಲ್ಕು ದಿನದ ಮಗು ಪತ್ತೆ ಆಗಿತ್ತು. ರಸ್ತೆಯಲ್ಲಿ ಹೋಗುವವರು ಮಗುವಿನ ಅಳು ಕೇಳಿ ನನಗೆ ಹೇಳಿದರು. ನಾನೇ ಹೋಗಿ ನಾಲ್ಕು ದಿನದ ಮಗುವನ್ನು ನೋಡಿದೆ. ಮಗುವಿನ ಜೊತೆಗೆ ಪತ್ರವೊಂದಿದ್ದು, ಮಠಕ್ಕೆ ನೀಡುವಂತೆ ಬರೆಯಲಾಗಿತ್ತು. ಪುಟ್ಟ ಮಗುವಿದ್ದ ಬಟ್ಟೆಯಲ್ಲಿ ಇರುವೆ ಸೇರಿಕೊಂಡಿದ್ದವು. ಮಗುವನ್ನು ತಂದು ಕ್ಲೀನ್ ಮಾಡಿ ಹಾಲು ಕುಡಿಸಿದೆ. ಅಷ್ಟರಲ್ಲೇ ಮಠದ ಸೆಕ್ಯುರಿಟಿ ಪತ್ರವನ್ನು ತೆಗೆದುಕೊಂಡು ಹೋಗಿ ಮುರುಘಾಶ್ರೀಗೆ ತೋರಿಸಿದ್ದರು. ಬಳಿಕ ಮಗುವನ್ನು ತೆಗೆದುಕೊಂಡು ಹೋದರು. ಪಕ್ಕದ ಗ್ರಾಮದವರು ಬಂದು ಮಗು ನಮಗೆ ಕೊಡಬೇಕಿತ್ತು ಎಂದು ಕೇಳಿದರು. ನಾನು ಮಠಕ್ಕೆ ಹೋಗಿ ಮುರುಘಾಶ್ರೀಗೆ ಕೇಳಿ ಎಂದು ಹೇಳಿದ್ದೆನು. ಮಠಕ್ಕೆ ಹೋದವರಿಗೆ ನಿಮ್ಮ ಆಸ್ತಿ ಮಗುವಿನ ಹೆಸರಿಗೆ ಮಾಡಿ ಎಂದು ಮುರುಘಾಶ್ರೀ ಕೇಳಿದ್ದರು. ಆಗಿನಿಂದ ಮಗು ಮಠದಲ್ಲಿ ಚೆನ್ನಾಗಿಯೇ ಬೆಳೆಯುತ್ತಿದೆ. ಆಗಾಗ ಮಗು ಕಂಡು ನಾನು ಮುದ್ದಾಡಿದ್ದೇನೆ ಎಂದು ಹೇಳಿದರು.

ಒಟ್ಟಾರೆಯಾಗಿ ಮುರುಘಾಶ್ರೀಗಳ ವಿರುದ್ಧ ಫೋಕ್ಸೋ ಪ್ರಕರಣಗಳು ದಾಖಲಾಗುತ್ತಿವೆ. ಕೇಸ್ ದಾಖಲಾಗುತ್ತಿರುವಂತೆಯೇ ಮುರುಘಾಶ್ರೀ ವಿರುದ್ಧ ಆರೋಪಗಳ ಸರಣಿಯೇ ಶುರುವಾಗಿದೆ.

ವರದಿ: ಬಸವರಾಜ ಮುದನೂರ್ tv9 ಚಿತ್ರದುರ್ಗ

Published On - 10:03 pm, Fri, 14 October 22

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ