ಪೋಕ್ಸೋ ಪ್ರಕರಣ: ನಿವೃತ್ತ ನ್ಯಾಯಮೂರ್ತಿ ವಸ್ತ್ರದಮಠ್​ಗೆ ಪವರ್ ಆಫ್​ ಅಟಾರ್ನಿ ನೀಡಿದ ಮುರುಘಾಶ್ರೀ

ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರಿಗೆ ಪವರ್ ಆಫ್ ಅಟಾರ್ನಿ ಜಾರಿಗೆ ಹೈಕೋರ್ಟ್ ಅನುಮತಿ ನೀಡಿತ್ತು. ಅದರಂತೆ ವಸ್ತ್ರದಮಠ್​ ಅವರಿಗೆ ಮುರುಘಾಶ್ರೀ ಪವರ್ ಆಫ್​ ಅಟರ್ನಿ ನೀಡಿದ್ದಾರೆ.

ಪೋಕ್ಸೋ ಪ್ರಕರಣ: ನಿವೃತ್ತ ನ್ಯಾಯಮೂರ್ತಿ ವಸ್ತ್ರದಮಠ್​ಗೆ ಪವರ್ ಆಫ್​ ಅಟಾರ್ನಿ ನೀಡಿದ ಮುರುಘಾಶ್ರೀ
ನಿವೃತ್ತ ನ್ಯಾಯಮೂರ್ತಿ ವಸ್ತ್ರದಮಠ್​ಗೆ ಪವರ್ ಆಫ್​ ಅಟಾರ್ನಿ ನೀಡಿದ ಮುರುಘಾಶ್ರೀ
Follow us
TV9 Web
| Updated By: Rakesh Nayak Manchi

Updated on:Oct 15, 2022 | 3:47 PM

ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಜೈಲಿನಲ್ಲಿರುವ ಮುರುಘಾ ಶ್ರೀಗಳು ವಿವಿಧ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳುವ ಪವರ್ ಆಫ್​ ಅಟಾರ್ನಿಯನ್ನು ಮುರುಘಾ ಮಠದ ಎಸ್​​​​ಜೆಎಂ ವಿದ್ಯಾಪೀಠದ ಕಾರ್ಯದರ್ಶಿಯೂ ಆಗಿರುವ ನಿವೃತ್ತ ನ್ಯಾ.ಎಸ್.ಬಿ.ವಸ್ತ್ರದಮಠ್ ಅವರಿಗೆ ನೀಡಿದ್ದಾರೆ. ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ-ಪೋಕ್ಸೋ ಕೇಸ್‌ನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗದ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರಿಗೆ ಪವರ್ ಆಫ್ ಅಟಾರ್ನಿ ಜಾರಿಗೆ ಹೈಕೋರ್ಟ್ ಅನುಮತಿ ನೀಡಿತ್ತು. ಅದರಂತೆ ವಸ್ತ್ರದಮಠ್​ ಅವರಿಗೆ ಮುರುಘಾಶ್ರೀ ಪವರ್ ಆಫ್​ ಅಟರ್ನಿ ನೀಡಿದ್ದಾರೆ. ಎಸ್​​​​ಜೆಎಂ ವಿದ್ಯಾಪೀಠದ ಚೆಕ್ ಸಹಿ ಸೇರಿದಂತೆ ವಿವಿಧ ಆಡಳಿತಾತ್ಮಕ ನಿರ್ಧಾರಕ್ಕಾಗಿ ವಸ್ತ್ರದಮಠ್​ಗೆ ಅಧಿಕೃತವಾಗಿ ನೋಟರಿ ಮಾಡಿ ಪವರ್ ಆಫ್​ ಅಟರ್ನಿ ಹಸ್ತಾಂತರ ಮಾಡಿದರು.

ಮುರುಘಾಮಠದ ಎಸ್​ಜೆಎಂ ವಿದ್ಯಾಪೀಠದ ಕಾರ್ಯದರ್ಶಿಗೆ ಪವರ್ ಆಫ್ ಅಟರ್ನಿ ಹಸ್ತಾಂತರ ಹಿನ್ನೆಲೆ ಎಸ್​ಜೆಎಂ ವಿದ್ಯಾಪೀಠದ ಆಡಳಿತ ಅಧಿಕಾರ ಕಾರ್ಯದರ್ಶಿಗೆ ಸಿಗಲಿದೆ. ಮುರುಘಾಶ್ರೀ, ಎಸ್​ಜೆಎಂ ವಿದ್ಯಾಪೀಠದ ಅದ್ಯಕ್ಷರು, ಮಠದ ಪೀಠಾದ್ಯಕ್ಷರು ಆಗಿರುವ ಮುರುಘಾ ಶ್ರೀಗಳು ಫೋಕ್ಸೋ ಪ್ರಕರಣದಲ್ಲಿ ಬಂಧನ ಹಿನ್ನೆಲೆ ಎಸ್ ಜೆ ಎಂ ವಿದ್ಯಾಪೀಠದ ಆಡಳಿತಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆ ಸಂಸ್ಥೆಯ ಸಿಬ್ಬಂದಿಗೆ ಸಂಬಳ ನೀಡುವುದು ತಡವಾಗಿತ್ತು. ಹೈಕೋರ್ಟ್ ಅನುಮತಿ ಪಡೆದು ಜೈಲಿನಲ್ಲೇ ಮುರುಘಾಶ್ರೀ ಸಹಿ ಮಾಡಿದ್ದರು.

ಪವರ್ ಆಫ್ ಅಟಾರ್ನಿ ಎಂದರೇನು?

ಪವರ್ ಆಫ್ ಅಟಾರ್ನಿ (POA) ಒಂದು ಪ್ರಮುಖ ಕಾನೂನು ದಾಖಲೆಯಾಗಿದ್ದು, ಒಬ್ಬ ವ್ಯಕ್ತಿಯು ತನ್ನ ಅನುಪಸ್ಥಿತಿಯಲ್ಲಿ ಅವನ/ಅವಳ ಆಸ್ತಿಯನ್ನು , ವೈದ್ಯಕೀಯ ವ್ಯವಹಾರಗಳು ಮತ್ತು ಹಣಕಾಸುಗಳನ್ನು ಅವನ ಪರವಾಗಿ ನಿರ್ವಹಿಸಲು ಇನ್ನೊಬ್ಬ ವ್ಯಕ್ತಿ ಅಥವಾ ಸಂಸ್ಥೆಯನ್ನು ನೇಮಿಸಲು ಅನುಮತಿಸುತ್ತದೆ. ಅಧಿಕೃತವಾಗಿ ಆ ವ್ಯಕ್ತಿಯನ್ನು ಪವರ್ ಆಫ್ ಅಟಾರ್ನಿ ಎಂದು ಕರೆಯಲಾಗುತ್ತದೆ.

ಮಕ್ಕಳ ಹೇಳಿಕೆಯನ್ನ ಪಡೆಯಲು ಮನವಿ

ಮೈಸೂರು: ಇಲ್ಲಿರುವ ಮಕ್ಕಳ ಹೇಳಿಕೆಯನ್ನ ಪಡೆದು ಕಾನೂನು ಕ್ರಮ ಜರುಗಿಸುವಮತೆ ಮೈಸೂರಿನ ಒಡನಾಡಿ ಸಂಸ್ಥೆಯಿಂದ ಚಿತ್ರದುರ್ಗ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆಯಲಾಗಿದೆ. “ಮಕ್ಕಳು ಪೋಷಕರೊಂದಿಗೆ ಮೈಸೂರಿನಲ್ಲಿ ಇದ್ದಾರೆ. ಪ್ರಕರಣದ ಸಂಬಂಧ ಮಕ್ಕಳ ಹೇಳಿಕೆಯನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಬೇಕು ಎಂದು ಟಿವಿ9ಗೆ ಓಡನಾಡಿ ಸಂಸ್ಥೆಯ ಸಂಸ್ಥಾಪಕ ಸ್ಟಾನ್ಲಿ ಮಾಹಿತಿ ನೀಡಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:42 pm, Sat, 15 October 22

ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ