ಸಿಇಒ ಸುಚನಾ ಅರೆಸ್ಟ್​ ಪ್ರಕರಣ​​: ತಂದೆ ಮಗುವನ್ನು ಭೇಟಿಯಾಗಬಾರದೆಂದು ಹತ್ಯೆಗೈದ ​ತಾಯಿ

ಸ್ಟಾರ್ಟ್ ಅಪ್ ಕಂಪನಿಯ ಸಿಇಓ ಆಗಿರುವ ಸುಚನಾ ಸೇಠ್ ತನ್ನ ಮಗುವನ್ನು ಕೊಲೆ ಮಾಡಿದ್ದ ಪ್ರಕರಣಕ್ಕೆ ಟ್ವಿಸ್ಟ್​​ ಸಿಕ್ಕಿದೆ. ಸುಚನಾ ಸೇಠ್ ನಾಲ್ಕು ವರ್ಷದ ಮಗುವನ್ನು ಕೊಲೆ ಮಾಡಲು ಕಾರಣವೇನೆಂಬುವುದು ಟಿವಿ9 ಡಿಜಿಟಲ್​​​ಗೆ ಲಭ್ಯವಾಗಿದೆ. ಪತಿ ತನ್ನ ಮಗನನ್ನು ಭೇಟಿಯಾಗುವುದು ಸುಚನಾಗೆ ಇಷ್ಟವಿರಲಿಲ್ಲ. ಅದಕ್ಕಾಗಿ ಸುಚನಾ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಸಿಇಒ ಸುಚನಾ ಅರೆಸ್ಟ್​ ಪ್ರಕರಣ​​: ತಂದೆ ಮಗುವನ್ನು ಭೇಟಿಯಾಗಬಾರದೆಂದು ಹತ್ಯೆಗೈದ ​ತಾಯಿ
ಸಿಇಒ ಸುಚನಾ
Follow us
ವಿವೇಕ ಬಿರಾದಾರ
|

Updated on:Jan 09, 2024 | 1:29 PM

ಚಿತ್ರದುರ್ಗ, ಜನವರಿ 09: ಸ್ಟಾರ್ಟ್ ಅಪ್ ಕಂಪನಿಯ ಸಿಇಓ ಆಗಿರುವ ಸುಚನಾ (Suchana) ಸೇಠ್ ತನ್ನ ಮಗುವನ್ನು ಕೊಲೆ ಮಾಡಿದ್ದ ಪ್ರಕರಣಕ್ಕೆ ಟ್ವಿಸ್ಟ್​​ ಸಿಕ್ಕಿದೆ. ಸುಚನಾ ಸೇಠ್ ನಾಲ್ಕು ವರ್ಷದ ಮಗುವನ್ನು ಕೊಲೆ ಮಾಡಲು ಕಾರಣವೇನೆಂಬುವುದು ಟಿವಿ9 ಡಿಜಿಟಲ್​​​ಗೆ ಲಭ್ಯವಾಗಿದೆ. ಪತಿ ತನ್ನ ಮಗನನ್ನು ಭೇಟಿಯಾಗುವುದು ಸುಚನಾಗೆ ಇಷ್ಟವಿರಲಿಲ್ಲ. ಅದಕ್ಕಾಗಿ ಸುಚನಾ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಸುಚನಾ ಪತಿಯು ಮಗನನ್ನು ಭೇಟಿಯಾದರೆ, ಅವರು ಮಗುವನ್ನು ತಮ್ಮ ಬಳಿಯೇ ಇರಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಎಂದು ಸುಚನಾ ನಾಲ್ಕು ವರ್ಷದ ಮಗುವನ್ನು ಕೊಲೆಮಾಡಿದ್ದಾರೆ.  ಸುಚನಾ 2010ರಲ್ಲಿ ವಿವಾಹವಾಗಿದ್ದಾರೆ. 2019 ರಲ್ಲಿ ದಂಪತಿಗೆ ಮಗು ಜನಸಿದೆ. ಆದರೆ 2020ರಲ್ಲಿ ದಂಪತಿ ವಿಚ್ಛೇದನಕ್ಕೆ ಅರ್ಜಿಸಲ್ಲಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ವಿಚ್ಛೇದನ ನೀಡಿದೆ.

ಆದರೆ ಪ್ರತಿಭಾನುವಾರದಂದು ತನ್ನ ಮಗುವನ್ನು ಭೇಟಿಯಾಗಲು ತಂದೆಗೆ ನ್ಯಾಯಾಲಯ ಅನುಮತಿ ನೀಡಿದೆ. ಆದರೆ ಸುಚನಾಗೆ ಮಗುವನ್ನು ಪತಿಗೆ ಭೇಟಿ ಮಾಡಿಸುವ ಇಷ್ಟವಿರಲಿಲ್ಲ. ಹೀಗಾಗಿ ಪತಿ ಮಗುವನ್ನು ಭೇಟಿಯಾಗುವ ಒಂದು ದಿನ ಮುಂಚೆಯೇ ಸುಚನಾ ಕೊಲೆ ಮಾಡಿದ್ದಾರೆ.

ಇದನ್ನೂ ಓದಿ: ಹೆತ್ತಮ್ಮ ಹತ್ಯೆಯಾಗಿರುವುದು ಮೊದಲು ನೋಡಿದ್ದು ಆಕೆಯ ಮಕ್ಕಳು, ಕೊಲೆಯಾಗಿದ್ದು ಏಕೆ?

ಏನಿದು ಪ್ರಕರಣ

ಸ್ಟಾರ್ಟ್ ಅಪ್ ಫೌಂಡರ್ & ಸಿಇಓ ಸುಚನಾ ಅವರು ಗೋವಾದ ಹೋಟೆಲ್​ನಲ್ಲಿ ಉಳಿದುಕೊಂಡಿದ್ದರು. ಇನ್ನೇನು ಹೋಟೆಲ್​ನಿಂದ ಬೆಂಗಳೂರಿಗೆ ಹೋಗಲು ತಮ್ಮ ಸೂಟ್ ಕೇಸ್ ಹಿಡಿದು ಟ್ಯಾಕ್ಸಿಯತ್ತ ಹೊರಟಾಗ ಹೋಟೆಲ್ ಸಿಬ್ಬಂದಿ ನಿಮ್ಮ ಜೊತೆ ಬಂದಿದ್ದ ಮಗು ಎಲ್ಲಿ ಎಂದು ವಿಚಾರಿಸಿದ್ದಾರೆ. ಆಗ ಸುಚನಾ ಅವರು ಸಂಬಂಧಿಕರ ಮನೆಗೆ ಕಳಿಸಿದ್ದೇನೆಂದು ಸುಳ್ಳು ಹೇಳಿ ಟ್ಯಾಕ್ಸಿ ಮೂಲಕ ಬೆಂಗಳೂರಿನತ್ತ ತೆರಳಿದ್ದಾರೆ. ಈ ವೇಳೆ ಅನುಮಾನಗೊಂಡ ಹೋಟೆಲ್​ನವರು ರೂಮ್ ಸ್ವಚ್ಛಗೊಳಿಸಲು ಹೋಗಿದ್ದು ಅಲ್ಲಿ ರಕ್ತದ ಕಲೆಗಳು ಪತ್ತೆ ಆಗಿವೆ. ಇದರಿಂದ ಬೆಚ್ಚಿಬಿದ್ದ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇನ್ನು ಹೋಟೆಲ್ ಸಿಬ್ಬಂದಿ ಗೋವಾ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಪೊಲೀಸರು ನಂಬರ್ ಹುಡುಕಿ ಸುಚನಾ ಪ್ರಯಾಣಿಸುತ್ತಿದ್ದ ಟ್ಯಾಕ್ಸಿ ಡ್ರೈವರ್​ಗೆ ಕರೆ ಮಾಡಿದ್ದಾರೆ. ಹೈವೇ ಬಳಿ ಪೊಲೀಸ್ ಠಾಣೆ ಕಂಡಾಕ್ಷಣ ಕಾರು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಪೊಲೀಸರ ಸೂಚನೆಯಂತೆ ರಾಷ್ಟ್ರೀಯ ಹೆದ್ದಾರಿ 4ರ ಐಮಂಗಲ ಠಾಣೆ ಬಳಿ ಚಾಲಕ ಟ್ಯಾಕ್ಸಿ ನಿಲ್ಲಿಸಿದ್ದು ಐಮಂಗಲ ಪೊಲೀಸರಿಗೆ ಆರೋಪಿ ಸುಚನಾಳನ್ನು ಒಪ್ಪಿಸಿದ್ದಾರೆ. ಕಾರ್​ನ ಡಿಕ್ಕಿಯಲ್ಲಿದ್ದ ಸೂಟ್ ಕೇಸ್ ನಲ್ಲಿ ಮಗುವಿನ ಶವ ಪತ್ತೆಯಾಗಿದೆ. ಮಗುವಿನ ಶವವನ್ನು ಶವಾಗಾರಕ್ಕೆ ಶಿಫ್ಟ್ ಮಾಡಿ ಆರೋಪಿ ಸುಚನಾಳನ್ನ ವಶಕ್ಕೆ ಪಡೆಯಲಾಗಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:21 pm, Tue, 9 January 24

ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ