ಮುರುಘಾಮಠದ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ವಿರುದ್ಧವೂ ಎಫ್‌ಐಆರ್

ಮುರುಘಾಮಠದ ಹಾಸ್ಟೆಲ್‌ ಲೇಡಿ ವಾರ್ಡನ್‌ ನೀಡಿದ ಕಂಪ್ಲೇಂಟ್ ಆಧರಿಸಿ ಕೇಸ್ ದಾಖಲಾಗಿದ್ದು ಈ ಪ್ರಕರಣದಲ್ಲಿ ಎ1 S.K.ಬಸವರಾಜನ್, ಎ2 ಪತ್ನಿ ಸೌಭಾಗ್ಯ. ಹಾಸ್ಟೆಲ್‌ನಲ್ಲಿ ಯಾರೂ ಇಲ್ಲದಿದ್ದಾಗ ರೇಪ್ ಮಾಡಲು ಯತ್ನಿಸಿದ್ದಾರೆ ಎಂದು ಲೇಡಿ ವಾರ್ಡನ್‌ ಆರೋಪಿಸಿದ್ದಾರೆ.

ಮುರುಘಾಮಠದ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ವಿರುದ್ಧವೂ ಎಫ್‌ಐಆರ್
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on:Aug 27, 2022 | 6:04 PM

ಚಿತ್ರದುರ್ಗ: ತಮ್ಮದೇ ಮಠದ ಮಕ್ಕಳ ಮೇಲೆ ಲೈಂಗಿಕ ದೌರ್ಜ್ಯ ಎಸಗಿದ್ದಾರೆ ಎಂಬ ಆರೋಪದಡಿ ಚಿತ್ರದುರ್ಗದ ಮುರುಘಾಮಠದ ಶ್ರೀಗಳ(Murugha Mutt Seer)ವಿರುದ್ಧ ಫೋಕ್ಸೋ ಪ್ರಕರಣ(Pocso) ದಾಖಲಾಗಿದೆ. ಇದರ ಜೊತೆಗೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮುರುಘಾಮಠದ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ.

ಮುರುಘಾಮಠದ ಹಾಸ್ಟೆಲ್‌ ಲೇಡಿ ವಾರ್ಡನ್‌ ನೀಡಿದ ಕಂಪ್ಲೇಂಟ್ ಆಧರಿಸಿ ಕೇಸ್ ದಾಖಲಾಗಿದ್ದು ಈ ಪ್ರಕರಣದಲ್ಲಿ ಎ1 S.K.ಬಸವರಾಜನ್, ಎ2 ಪತ್ನಿ ಸೌಭಾಗ್ಯ. ಹಾಸ್ಟೆಲ್‌ನಲ್ಲಿ ಯಾರೂ ಇಲ್ಲದಿದ್ದಾಗ ರೇಪ್ ಮಾಡಲು ಯತ್ನಿಸಿದ್ದಾರೆ ಎಂದು ಲೇಡಿ ವಾರ್ಡನ್‌ ಆರೋಪಿಸಿದ್ದಾರೆ. ಅಲ್ಲದೆ ಮುರುಘಾಮಠದ ಶ್ರೀ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಮಾಜಿ ಶಾಸಕ ಬಸವರಾಜನ್‌ ವಿರುದ್ಧ ಜೀವಬೆದರಿಕೆ ಹಾಕಿದ್ದಾರೆ ಎಂದು ಎಫ್ಐಆರ್ನಲ್ಲಿ ಆರೋಪಿಸಲಾಗಿದೆ. ‘ಮಠದ ಹಾಸ್ಟೆಲ್‌ನ ಇಬ್ಬರು ಬಾಲಕಿಯರನ್ನು ಎಸ್.ಕೆ.ಬಸವರಾಜನ್, ಪತ್ನಿ ಸೌಭಾಗ್ಯ ವಶಕ್ಕೆ ಪಡೆದಿದ್ದಾರೆ’ ಮಠದ ಬಾಲಕಿಯರ ಪೋಷಕರ ಮಾಹಿತಿ ಪಡೆಯಲು ನನಗೆ ನಿರಂತರ ಹಿಂಸೆ ನೀಡುತ್ತಿದ್ದರೆಂದು ಸಂತ್ರಸ್ತೆ ಆರೋಪ ಮಾಡಿದ್ದಾರೆ.

ಮಕ್ಕಳು ತಮಗಾದ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಾರೆ

ಇನ್ನು ಚಿತ್ರದುರ್ಗದ ಮುರುಘಾಶ್ರೀಗಳ ವಿರುದ್ಧ ಕೇಳಿ ಬಂಧ ಗಂಭೀರ ಆರೋಪಕ್ಕೆ ಸಂಬಂಧಿಸಿ ಒಡನಾಡಿ ಸಂಸ್ಥೆಯ ಕೌನ್ಸಿಲರ್ ಸರಸ್ವತಿ ಕೆಲವು ಮಾಹಿತಿ ನೀಡಿದ್ದಾರೆ. ಮಕ್ಕಳನ್ನ ಈಗಾಗಲೇ ಕೌನ್ಸೆಲಿಂಗ್ ಮಾಡಲಾಗಿದೆ. ಮಕ್ಕಳ ಆಯೋಗದ ಮುಂದೆ ಹಾಜರಾಗಿ ಮಕ್ಕಳು ತಮಗಾದ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ಮಕ್ಕಳು ನೀಡಿದ ಮಾಹಿತಿ ಮೇರೆಗೆ ದೂರು ದಾಖಲಾಗಿದೆ. ಶ್ರೀಗಳು ಸಂಜೆ 6 ಗಂಟೆ ವೇಳೆಗೆ ಮಕ್ಕಳನ್ನ ಕರೆಸಿಕೊಳ್ಳುತ್ತಿದ್ರು. ಕರೆಸಿಕೊಂಡು ದೌರ್ಜನ್ಯ ಎಸಗುತ್ತಿದ್ರು ಎಂದು ಮಕ್ಕಳು ಮಾಹಿತಿ ನೀಡಿದ್ದಾರೆ. ಮಠದಲ್ಲಿನ ಸಿಬ್ಬಂದಿ ಸ್ವಾಮೀಜಿಗೆ ಸಹಾಯ ಮಾಡುತ್ತಿದ್ದರು. ಇದೇ ರೀತಿ ಮಠದಲ್ಲಿ ಹಲವು ಮಕ್ಕಳ ಮೇಲೆ ದೌರ್ಜನ್ಯ ಆಗುತ್ತಿದೆ ಎಂದು ಮಾಹಿತಿ ಇದೆ ಎಂದು ಒಡನಾಡಿ ಸಂಸ್ಥೆಯ ಕೌನ್ಸಿಲರ್ ಸರಸ್ವತಿ ತಿಳಿಸಿದ್ದಾರೆ.

ಮುರುಘಾಮಠದಲ್ಲಿನ ಶಾಲೆಯಲ್ಲಿ ಓದುತ್ತಿದ್ದ ಬಾಲಕಿಯರ ಮೇಲೆ ಲೈಂಗಿಕ ದೌರ್ಜ್ಯ ಎಸಗಿದ್ದಾರೆ ಎಂಬ ಆರೋಪದಡಿ ಚಿತ್ರದುರ್ಗದ ಮುರುಘಾಮಠದ ಶ್ರೀಗಳ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗಿದೆ. ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ನಿನ್ನೆ FIR ದಾಖಲಾಗಿದೆ. ಮೈಸೂರಿನ ಒಡನಾಡಿ ಸಂಸ್ಥೆ ಮೂಲಕ ಮೈಸೂರು ಮಕ್ಕಳರಕ್ಷಣಾ ಘಟಕದ ಅಧಿಕಾರಿಯಿಂದ ಇಬ್ಬರು ಬಾಲಕಿಯರ ಆರೋಪ ದಡಿ FIR ದಾಖಲಾಗಿದೆ.

ಈ ಪ್ರಕರಣದಲ್ಲಿ 1ನೇ ಆರೋಪಿ ಡಾ.ಶಿವಮೂರ್ತಿ ಮುರುಘಾಶ್ರೀಗಳು, ಪ್ರಕರಣದ 2ನೇ ಆರೋಪಿ ಮಠದ ಹಾಸ್ಟೆಲ್‌ನ ಲೇಡಿ ವಾರ್ಡನ್, 3ನೇ ಆರೋಪಿ ಮುರುಘಾಮಠದ ಬಸವಾದಿತ್ಯ, 4ನೇ ಆರೋಪಿ ಮಠದ ಕಾರ್ಯದರ್ಶಿ ಪರಮಶಿವಯ್ಯ, 5ನೇ ಆರೋಪಿ ವಕೀಲ ಗಂಗಾಧರಯ್ಯ. ಸದ್ಯಕ್ಕೆ ಮಕ್ಕಳ ಕಲ್ಯಾಣ ಸಮಿತಿ ಆದೇಶದಂತೆ ಒಡನಾಡಿ ಸಂಸ್ಥೆಯಲ್ಲೇ ಬಾಲಕಿಯರಿಬ್ಬರಿಗೆ ಆಶ್ರಯ ನೀಡಲಾಗಿದೆ.

ಸಲಹಾ ಸಮಿತಿ ಸಭೆ ಕರೆದಿರುವ ಮುರುಘಾಶ್ರೀಗಳು

ಘಟನೆ ಬೆಳಕಿಗೆ ಬರುತ್ತಿದ್ದಂತೆ ಚಿತ್ರದುರ್ಗದ ಮುರುಘಾಮಠದತ್ತ ಕೆಲವು ಭಕ್ತರು ಆಗಮಿಸಿದ್ದಾರೆ. ಹೀಗಾಗಿ ಮುರುಘಾಶ್ರೀಗಳು ಸಲಹಾ ಸಮಿತಿ ಸಭೆ ಕರೆದಿದ್ದಾರೆ. ಸಭೆಯಲ್ಲಿ ವಕೀಲರು, ಭಕ್ತರು, ವಿವಿಧ ಸಮಾಜಗಳ ಮುಖಂಡರು ಭಾಗಿಯಾಗಿದ್ದಾರೆ. ಅಲ್ಲದೆ ವಿವಿಧ ಮಠಗಳ ಸ್ವಾಮೀಜಿಗಳು ಮುರುಘಾಶ್ರೀ ಭೇಟಿಯಾಗಿದ್ದಾರೆ. ವಿರಕ್ತ ಮಠದ ಬಸವಪ್ರಭು, ಹೆಬ್ಬಾಳ ಮಠದ ಮಹಾಂತರುದ್ರ, ಒಳಹೊನ್ನಳ್ಳಿ ಮಠದ ಕಿರಣಶ್ರೀ, ಮಡಿವಾಳ ಮಾಚಿದೇವಶ್ರೀ, ಇಮ್ಮಡಿ ಸಿದ್ದರಾಮೇಶ್ವರಶ್ರೀ, ಶಾಂತವೀರಶ್ರೀ, ಯಾದವಾನಂದಶ್ರೀ ಭೇಟಿಯಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಮೈಸೂರಿನಲ್ಲಿ ದಾಖಲಾಗಿದ್ದ ಕೇಸ್‌ ಚಿತ್ರದುರ್ಗಕ್ಕೆ ವರ್ಗಾವಣೆ

ಅಪ್ರಾಪ್ತ ಬಾಲಕಿಯರ ಮೇಲೆ ದೌರ್ಜನ್ಯ ಎಸಗಿದ ಆರೋಪ ಸಂಬಂಧ ಮೈಸೂರಿನಲ್ಲಿ ದಾಖಲಾಗಿದ್ದ ಕೇಸ್‌ ಚಿತ್ರದುರ್ಗಕ್ಕೆ ವರ್ಗಾವಣೆ ಮಾಡಲಾಗಿದೆ. ಮೈಸೂರಿನ ನಜರ್‌ಬಾದ್​​​ ಠಾಣೆಯಿಂದ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ಪ್ರಕರಣ ವರ್ಗಾಯಿಸಲಾಗಿದೆ.

Published On - 4:34 pm, Sat, 27 August 22