ಹಿರಿಯೂರು ಪೊಲೀಸರಿಗೆ ತಲೆನೋವಾಗಿದ್ದ ಖದೀಮ ಸಿಕ್ಕಿಬಿದ್ದ: 1ಕೆಜಿಗೂ ಅಧಿಕ ಬಂಗಾರ ವಶಕ್ಕೆ
ಹಿರಿಯೂರು ಡಿವೈಎಸ್ಪಿ ಎಸ್.ಚೈತ್ರಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಖತರ್ನಾಕ್ ಖದೀಮನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಇತನಿಂದ ಬರೋಬ್ಬರಿ 69 ಲಕ್ಷ ರೂ. ಮೌಲ್ಯದ 1 ಕೆಜಿ 3 ಗ್ರಾಂ ಚಿನ್ನ, 68 ಸಾವಿರ ನಗದು ಹಾಗೂ 2 ಬೈಕ್ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚಿತ್ರದುರ್ಗ, ಜು.24: ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಖತರ್ನಾಕ್ ಖದೀಮನನ್ನು ಹಿರಿಯೂರು ಪೊಲೀಸರು (Hiriyur Police) ಬಂಧಿಸಿದ್ದಾರೆ. ಬಳ್ಳಾರಿ ಹನುಮಂತ(26) ಬಂಧಿತ ಆರೋಪಿ. ಇತನ ಬಳಿಯಿದ್ದ ಬರೋಬ್ಬರಿ 69 ಲಕ್ಷ ರೂ. ಮೌಲ್ಯದ 1 ಕೆಜಿ 3 ಗ್ರಾಂ ಚಿನ್ನ, 68 ಸಾವಿರ ನಗದು ಹಾಗೂ 2 ಬೈಕ್ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತ 15 ಮನೆಗಳ್ಳತನ ಹಾಗೂ 3 ಬೈಕ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ.
ಈ ಕುರಿತು ಚಿತ್ರದುರ್ಗ ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ‘ಹಿರಿಯೂರು ಡಿವೈಎಸ್ಪಿ ಎಸ್.ಚೈತ್ರಾ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿತ್ತು. ಇದೀಗ ಹಿರಿಯೂರು ಪೊಲೀಸರು ಆತನನ್ನ ಬಂಧಿಸಿದ್ದಾರೆ. ಇತ ವಿವಿಧ ಕಳ್ಳತನ ಪ್ರಕರಗಳಲ್ಲಿ ಭಾಗಿಯಾಗಿ, ಹಿರಿಯೂರು ಪೊಲೀಸರಿಗೆ ದೊಡ್ಡ ತಲೆನೋವಾಗಿದ್ದ. ಈಗಾಗಲೇ ಬಂಧಿತ ಆರೋಪಿಯಿಂದ ಲಕ್ಷಾಂತರ ರೂಪಾಯಿ ಚಿನ್ನ, ನಗದು ಹಾಗೂ ಎರಡು ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ:ಕಳ್ಳತನವಾಗಿದ್ದ ಮುರುಘಾಶ್ರೀ ಪುತ್ಥಳಿ ಪತ್ತೆ: ನಾಲ್ವರು ಶಂಕಿತ ಆರೋಪಿಗಳ ಪಾಲಿಗ್ರಫಿ ಪರೀಕ್ಷೆಗೆ ಪೊಲೀಸರ ಸಿದ್ದತೆ
ಇನ್ನು ಇತನ ಮೇಲೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರ ಠಾಣೆಯಲ್ಲಿಯೇ 8 ಪ್ರಕರಣ, ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ 5, ಹೊಸದುರ್ಗ ಠಾಣೆಯಲ್ಲಿ 2, ಅಬ್ಬಿನಹೊಳೆಯಲ್ಲಿ 1, ಚಿತ್ರದುರ್ಗದ ಬಡಾವಣೆ ಠಾಣೆಯಲ್ಲಿ 1, ಬಳ್ಳಾರಿ ಕೌಲ್ ಬಜಾರ್ ಠಾಣೆಯಲ್ಲಿ 1 ಸೇರಿ ಒಟ್ಟು 15 ಮನೆಗಳ್ಳತನ ಮತ್ತು 3 ಬೈಕ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ದಾವಣಗೆರೆ, ಬಳ್ಳಾರಿ, ಕೊಪ್ಪಳ, ಆಂಧ್ರ ಸೇರಿ ವಿವಿಧ ಕಡೆಗಳಲ್ಲಿ ಕಳ್ಳತನದಲ್ಲಿ ಭಾಗಿಯಾಗಿದ್ದನು. 12 ಪ್ರಕರಣಗಳಲ್ಲಿ ವಾರೆಂಟ್ಗಳಿದ್ದು, ನಾಪತ್ತೆಯಾಗಿದ್ದ ಆರೋಪಿ ಹನುಮಂತನನ್ನು ಪೊಲೀಸರು ಕೊನೆಗೂ ಹೆಡೆಮುರಿ ಕಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ