ಬಸವರಾಜ ಬೊಮ್ಮಾಯಿಗೆ ಜವಾಬ್ದಾರಿ ನೀಡಿದರೆ ಬಿಜೆಪಿ ಮತ್ತೆ ನೆಲಕಚ್ಚುವುದು ಖಚಿತ: ಎಸ್ ಲಿಂಗಮೂರ್ತಿ

ಕರ್ನಾಟಕ ರಾಜ್ಯದಲ್ಲಿ ವಿಪಕ್ಷ ಸ್ಥಾನದ ಆಯ್ಕೆಗೆ ಬಿಜೆಪಿ ಕಸರತ್ತು ನಡೆಸುತ್ತಿದೆ. ಹಲವರ ಹೆಸರು ಮುನ್ನಲೆಯಲ್ಲಿ ಇದೆ. ಈ ನಡುವೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಜವಾಬ್ದಾರಿ ನೀಡದಂತೆ ಹೊಸದುರ್ಗ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಎಸ್​.ಲಿಂಗಮೂರ್ತಿ ಹೇಳಿದ್ದಾರೆ.

ಬಸವರಾಜ ಬೊಮ್ಮಾಯಿಗೆ ಜವಾಬ್ದಾರಿ ನೀಡಿದರೆ ಬಿಜೆಪಿ ಮತ್ತೆ ನೆಲಕಚ್ಚುವುದು ಖಚಿತ: ಎಸ್ ಲಿಂಗಮೂರ್ತಿ
ಎಸ್.ಲಿಂಗಮೂರ್ತಿ ಮತ್ತು ಬಸವರಾಜ ಬೊಮ್ಮಾಯಿ
Follow us
| Updated By: Rakesh Nayak Manchi

Updated on: Jul 30, 2023 | 8:12 PM

ಚಿತ್ರದುರ್ಗ, ಜುಲೈ 30: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅಂತಹವರಿಗೆ ಜವಾಬ್ದಾರಿ ನೀಡಿದರೆ ಬಿಜೆಪಿ ಮತ್ತೆ ನೆಲಕಚ್ಚುವುದು ಖಚಿತ ಎಂದು ಹೊಸದುರ್ಗ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಎಸ್​.ಲಿಂಗಮೂರ್ತಿ (S. Lingamurthy) ಹೇಳಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ವಿಪಕ್ಷ ಸ್ಥಾನದ ಆಯ್ಕೆಗೆ ಬಿಜೆಪಿ ಕಸರತ್ತು ನಡೆಸುತ್ತಿದೆ. ಹಲವರ ಹೆಸರು ಮುನ್ನಲೆಯಲ್ಲಿ ಇದೆ. ಈ ಪೈಕಿ ಬೊಮ್ಮಾಯಿ ಹೆಸರು ಕೂಡ ಒಂದು.

ವಿಪಕ್ಷ ಸ್ಥಾನದ ಪೈಪೋಟಿಯಲ್ಲಿ ಬಸವರಾಜ್ ಬೊಮ್ಮಾಯಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಹೆಸರು ಮುಂಚೂಣಿಯಲ್ಲಿದೆ. ಪಕ್ಷದ ನಾಯಕರು ಬೊಮ್ಮಾಯಿ ಕಡೆ ಬೆರಳು ತೋರಿಸಿದರೆ, ಕಾರ್ಯಕರ್ತರು ಯತ್ನಾಳ್ ಪರ ಬ್ಯಾಟ್ ಬೀಸುತ್ತಿದ್ದಾರೆ. ಅದೇ ರೀತಿ ರಾಜ್ಯಧ್ಯಕ್ಷ ಸ್ಥಾನಕ್ಕೂ ಸಮರ್ಥ ನಾಯಕನ ಹುಡುಕಾಟದಲ್ಲಿ ಹೈಕಮಾಂಡ್ ನಿರತವಾಗಿದೆ.

ಇದನ್ನೂ ಓದಿ: ವರ್ಗಾವಣೆ ಪೈಪೋಟಿ, ಭ್ರಷ್ಟಾಚಾರದ ಪೈಪೋಟಿ ಇದ್ದಿದ್ದರಿಂದ ಸಿಪಿಎಲ್​ ಸಭೆ ನಡೆಸಿದರು: ಬೊಮ್ಮಾಯಿ

ಈ ನಡುವೆ ಟ್ವೀಟ್ ಮಾಡಿದ ಕೇಂದ್ರ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರೂ ಆಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ಎಸ್. ಲಿಂಗಮೂರ್ತಿ, “ಈಗಾಗಲೆ ಕರ್ನಾಟಕ ರಾಜ್ಯದಲ್ಲಿ ಸೋತು ಸುಣ್ಣವಾಗಿರುವ ಬಿಜೆಪಿ ಪಕ್ಷ, ಬಸವರಾಜ ಬೋಮ್ಮಾಯಿ ಅಂತಹ ವ್ಯಕ್ತಿಗಳಿಗೆ ಜವಾಬ್ದಾರಿ ಕೊಟ್ಟರೆ ಮತ್ತೆ ನೆಲ ಕಚ್ಚುವುದು ಕಚಿತ” ಎಂದಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಖನಿಜ ನಿಗಮದ ಮಾಜಿ ಅಧ್ಯಕ್ಷ ಲಿಂಗಮೂರ್ತಿ ಅವರಿಗೆ ಹೊಸದುರ್ಗ ಕ್ಷೇತ್ರದ ಟಿಕೆಟ್ ಸಿಕ್ಕಿತ್ತು. ಆದರೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸೋಲುಂಡಿದ್ದಾರೆ. ತನ್ನ ಸೋಲಿಗೆ ಲಿಂಗಮೂರ್ತಿ ಅವರು ಬೊಮ್ಮಾಯಿ ಕಡೆ ಬೆರಳು ಮಾಡಿದ್ದರು. ಇದೀಗ ಮತ್ತೆ ಟ್ವೀಟ್ ಮೂಲಕ ಬೊಮ್ಮಾಯಿ ಹೆಸರು ಪ್ರಸ್ತಾಪಿಸಿ ಆಕ್ರೋಶ ಹೊರಹಾಕಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ