ಚಿತ್ರದುರ್ಗ: ಪ್ರೀತಿ ತಿರಸ್ಕರಿಸಿದ್ದಕ್ಕೆ ಕಿಡ್ನಾಪ್ ಮಾಡಿ ಅತ್ಯಾಚಾರವೆಸಗಿ ಯುವತಿ ಕೊಂದ ಪಾಗಲ್ ಪ್ರೇಮಿ
ಪ್ರೀತಿ ನಿರಾಕರಿಸಿದಕ್ಕೆ ಆರೋಪಿ ಅಜಯ್ ಅಕ್ಟೋಬರ್ 3ರಂದು ಆಟೋದಲ್ಲಿ ಯುವತಿಯನ್ನು ಅಪಹರಿಸಿ ಅತ್ಯಾಚಾರವೆಸಗಿ ಹಲ್ಲೆ ನಡೆಸಿ ಬಳಿಕ ಆಸ್ಪತ್ರೆಗೆ ಅಡ್ಮಿಟ್ ಮಾಡಿ ಎಸ್ಕೇಪ್ ಆಗಿದ್ದ. ತಲೆಗೆ ಪೆಟ್ಟು ಹಿನ್ನೆಲೆ ಬ್ರೈನ್ ಡೆಡ್‌ನಿಂದಾಗಿ ಯುವತಿ ಮೃತಪಟ್ಟಿದ್ದಾರೆ.
ಚಿತ್ರದುರ್ಗ, ಅ.07: ಪ್ರೀತಿ ತಿರಸ್ಕರಿಸಿದ್ದಕ್ಕೆ ಪಾಗಲ್ ಪ್ರೇಮಿ ತನ್ನ ಪ್ರೇಯಸಿಯ ಕೊಲೆ (Murder) ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಚಿತ್ರದುರ್ಗ ತಾಲೂಕಿನ ಹುಲ್ಲೂರು ನಿವಾಸಿ ಅರ್ಪಿತಾ(19) ಹತ್ಯೆಯಾದ ಯುವತಿ. ಆರೋಪಿ ಅಜಯ್ ಅಕ್ಟೋಬರ್ 3ರಂದು ಆಟೋದಲ್ಲಿ ಯುವತಿಯನ್ನು ಅಪಹರಿಸಿ ಅತ್ಯಾಚಾರವೆಸಗಿ ಹಲ್ಲೆ ನಡೆಸಿ ಬಳಿಕ ಆಸ್ಪತ್ರೆಗೆ ಅಡ್ಮಿಟ್ ಮಾಡಿ ಎಸ್ಕೇಪ್ ಆಗಿದ್ದ. ತಲೆಗೆ ಪೆಟ್ಟು ಹಿನ್ನೆಲೆ ಬ್ರೈನ್ ಡೆಡ್‌ನಿಂದಾಗಿ ಯುವತಿ ಮೃತಪಟ್ಟಿದ್ದಾರೆ. ಚಿಕಿತ್ಸೆ ಫಲಿಸದೆ ನಿನ್ನೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಯುವತಿ ಕೊನೆಯುಸಿರೆಳಿದಿದ್ದಾಳೆ. ಹುಲ್ಲೂರು ಗ್ರಾಮದ ಚಾಲಕ ಅಜಯ್ ವಿರುದ್ಧ ಕೊಲೆ ಆರೋಪ ಕೇಳಿ ಬಂದಿದೆ.
ಆರೋಪಿ ಅಜಯ್ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಯುವತಿ ಪ್ರೀತಿಯನ್ನು ನಿರಾಕರಿಸಿದ್ದಳು. ಇದರಿಂದ ಕೋಪಗೊಂಡ ಅಜಯ್ ಯುವತಿಯನ್ನು ಅಪಹರಿಸಿ, ಗ್ರಾಮದ ಹೊರವಲಯಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ ಹಲ್ಲೆ ಮಾಡಿ ಬಳಿಕ ಆಸ್ಪತ್ರೆಗೆ ದಾಖಲಿಸಿದ್ದಾನೆ ಎನ್ನಲಾಗಿದೆ. ಯುವತಿ ಮೃತಪಟ್ಟಿದ್ದು ಯುವತಿ ಪೋಷಕರು ಚಿತ್ರದುರ್ಗ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಆರೋಪಿ ಅಜಯ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಮಗು ಜನಿಸಿದ ಖುಷಿಗೆ ವಿಮಾನದಲ್ಲೇ ಸಿಹಿ ಹಂಚಿ ಸಂಭ್ರಮಿಸಿದ ಪ್ರಯಾಣಿಕ
ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ ಆರೋಪ, ರೈತ ಮಹಿಳೆ ಆತ್ಮಹತ್ಯೆ
ತೀವ್ರ ಬರಕ್ಕೆ ಹೊಲಗಳಲ್ಲಿ ಬೆಳೆ ಒಣಗುತ್ತಿದೆ. ಮತ್ತೊಂದು ಕಡೆ ಸಾಲ ತೀರಿಸುವಂತೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ. ಹೀಗಾಗಿ ಸಾಲ ತೀರಿಸುವಂತೆ ಕಿರುಕುಳ ತಾಳಲಾರದ ರೈತ ಮಹಿಳೆ ದೇವಿರಮ್ಮ(64)ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಡೂರು ತಾಲೂಕಿನ ತಂಗಲಿ ಗ್ರಾಮದ ಮನೆಯಲ್ಲಿ ರೈತ ಮಹಿಳೆ ನೇಣಿಗೆ ಶರಣಾಗಿದ್ದಾರೆ. ಕಡೂರಿನ ಗ್ರಾಮೀಣ ಕೂಟ ಫೈನಾನ್ಸ್ ನಲ್ಲಿ ದೇವೀರಮ್ಮ 78 ಸಾವಿರ ಸಾಲ ಮಾಡಿದ್ದರು. ಅರ್ಥಿಕ ಸಂಕಷ್ಟದಿಂದ ಒಂದು ತಿಂಗಳಿನಿಂದ ಸಾಲದ ಕಂತನ್ನ ಮರುಪಾವತಿ ಮಾಡಲಾಗಿರಲಿಲ್ಲ. ಹೀಗಾಗಿ ದೇವೀರಮ್ಮನವರ ಮನೆ ಬಳಿ ಬಂದು ಫೈನಾನ್ಸ್ ಸಿಬ್ಬಂದಿ ಕಿರುಕುಳ ನೀಡಿದ್ದರಂತೆ. ಇದರಿಂದ ಮನನೊಂದು ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಗ್ರಾಮಿಣ ಕೂಟ ಫೈನಾನ್ಸ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಶಂಕರ್ ನಾಯಕ್, ಉಷಾ, ರುಬೀನಾ ಸೇರಿ ಮೂವರು ಫೈನಾನ್ಸ್ ಸಿಬ್ಬಂದಿ ವಿರುದ್ಧ ಕಡೂರು ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ರಾಜ್ಯ ಸರ್ಕಾರ ಕಡೂರು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿದೆ. ಬರದಿಂದ ಬೆಳೆ ನಾಶವಾದ ಹಿನ್ನೆಲೆ ಈವರೆಗೆ ಮೂವರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಳೆ ಇಲ್ಲದೆ ತೀವ್ರ ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ಕಡೂರು ತಾಲೂಕು.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ