AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nayakanahatti Thipperudra Swamy Teppotsavam: ತಿಪ್ಪೇರುದ್ರಸ್ವಾಮಿ ತೆಪ್ಪೋತ್ಸವದಲ್ಲಿ ಜನ ಸಾಮಾನ್ಯರಂತೆ ಕೆರೆಯಲ್ಲಿ ಇಳಿದು ಸಂಭ್ರಮಿಸಿದ ಶಾಸಕ ಶ್ರೀರಾಮುಲು

ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದ ಐತಿಹಾಸಿಕ ಹಿರೇಕೆರೆಯಲ್ಲಿ ಈ ಅದ್ಧೂರಿಯಾಗಿ ಗುರು ತಿಪ್ಪೇರುದ್ರಸ್ವಾಮಿ ತೆಪ್ಪೋತ್ಸವ ನಡೆದಿದೆ.

TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on: Dec 03, 2022 | 10:05 AM

Share
ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದ ಹಿರೇಕೆರೆಯಲ್ಲಿ ಈ ವರ್ಷ ಭರ್ತಿ ಮಳೆ ಸುರಿದಿದ್ದು, ಇದೇ ಸಂದರ್ಭದಲ್ಲಿ ಐತಿಹಾಸಿಕ ಹಿರೇಕೆರೆಯಲ್ಲಿ ತಿಪ್ಪೇರುದ್ರಸ್ವಾಮಿ ತೆಪ್ಪೋತ್ಸವ ನಡೆದಿದೆ. ಸಾವಿರಾರು ಜನರು ತೆಪ್ಪೋತ್ಸವದಲ್ಲಿ ಭಾಗಿಯಾಗಿದ್ದಾರೆ.

1 / 6
ದಶಕದ ಬಳಿಕ ಈವರ್ಷ ಹಿರೇಕೆರೆ ತುಂಬಿ ಕೋಡಿ ಬಿದ್ದಿದೆ. ಹೀಗಾಗಿ, ಗ್ರಾಮದ ಜನರು, ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇಗುಲದ ಭಕ್ತರು ವಿಶೇಷ ತೆಪ್ಪೋತ್ಸವ ಆಯೋಜಿಸಿದ್ದರು.

2 / 6
ಹಿರೇಕೆರೆಯಲ್ಲಿ ಅದ್ಧೂರಿಯಾಗಿ ಗುರು ತಿಪ್ಪೇರುದ್ರಸ್ವಾಮಿ ತೆಪ್ಪೋತ್ಸವ ನಡೆದಿದ್ದು, ತೆಪ್ಪೋತ್ಸವಕ್ಕೆ ಮೊಳಕಾಲ್ಮೂರು ಕ್ಷೇತ್ರದ ಶಾಸಕರು ಆಗಿರುವ ಸಾರಿಗೆ ಸಚಿವ ಬಿ.ಶ್ರೀರಾಮುಲು ಖುದ್ದಾಗಿ ತೆಪ್ಪೋತ್ಸವದಲ್ಲಿ ಭಕ್ತನಾಗಿ ಭಾಗಿಯಾಗಿ ತೆಪ್ಪೋತ್ಸವಕ್ಕೆ ದಾರಿ ಮಾಡಿಕೊಡುವ ಕೆಲಸ ಮಾಡಿದರು.

3 / 6
ಈ ಭಾಗಕ್ಕೆ ಭಗೀರಥನಂತೆ ಬಂದ ಸಂತ ಗುರು ತಿಪ್ಪೇರುದ್ರಸ್ವಾಮಿ ‘ಮಾಡಿದಷ್ಟು ನೀಡು ಭೀಕ್ಷೆ' ಎಂಬ ನುಡಿಯೊಂದಿಗೆ ಜನರನ್ನು ಒಳಗೂಡಿಸಿಕೊಂಡು ಏಳು ಕೆರೆಗಳನ್ನು ನಿರ್ಮಿಸಿದ್ದರು. ಗರ್ಭಿಣಿಯರಿಗೆ ಒಂದೂವರೆ ಪಟ್ಟು ಕೂಲಿ ಕೊಟ್ಟಿದ್ದರು ಎಂಬ ಪ್ರತೀತಿಯಿದೆ.

4 / 6
ಆ ಮೂಲಕ ಈ ಭಾಗದ ಜನರ ಪಾಲಿಗೆ ಭಗೀರಥನಾಗಿ ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ ನೀಡಿ ದೈವತ್ವಕ್ಕೇರಿದರು ಎಂಬ ನಂಬಿಕೆಯಿದೆ. ಅಂತೆಯೇ ನಾಯಕನಹಟ್ಟಿಯಲ್ಲಿ ಇಂದಿಗೂ ಗುರು ತಿಪ್ಪೇರುದ್ರಸ್ವಾಮಿ ಭವ್ಯ ದೇಗುಲವಿದ್ದು ಲಕ್ಷಾಂತರ ಜನ ಭಕ್ತರು ಜಾತ್ರೆಗೆ ಸೇರುತ್ತಾರೆ.

5 / 6
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ನಾಯಕನಹಟ್ಟಿಯ ಹಿರೇಕರೆಯ ತೆಪ್ಪೋತ್ಸವ ಅದ್ಧೂರಿಯಾಗಿ ನಡೆದಿದೆ. ಸಚಿವರಿಂದ ಹಿಡಿದು ಜನ ಸಾಮಾನ್ಯರವರೆಗೆ ಸಾಗರೋಪಾದಿಯಲ್ಲಿ ಜನರು ಭಾಗಿಯಾಗಿದ್ದಾರೆ. ತೆಪ್ಪೋತ್ಸವದ ಸಂಭ್ರಮದೊಂದಿಗೆ ಗುರು ತಿಪ್ಪೇರುದ್ರಸ್ವಾಮಿಗೆ ನಮಿಸಿ ಕೃತಾರ್ಥ ಭಾವ ಅನುಭವಿಸಿದ್ದಾರೆ.

6 / 6
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ

ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ

ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ

ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್

ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?