ಚಿತ್ರದುರ್ಗ: ಕೆರೆಯಲ್ಲಿ ಮುಳುಗಿ (drown) ತಾಯಿ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿರುವಂತಹ (death) ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ನಡೆದಿದೆ. ದುರ್ಗಮ್ಮ(25), ಮಗ ಅಜ್ಜಯ್ಯ(6), ಪುತ್ರಿ ಸೇವಂತಿ(4) ಮೃತರು. ಚಳ್ಳಕೆರೆ ತಾಲೂಕಿನ ಹಿರೇಹಳ್ಳಿಯ ನಿವಾಸಿಗಳು. ಬೋಸೇದೇವರಹಟ್ಟಿ ಜಾತ್ರೆಗೆಂದು ಸಂಬಂಧಿಕರ ಮನೆಗೆ ಪತಿ ಮಹಾಂತೇಶ ಕರೆತಂದಿದ್ದರು. ಈ ವೇಳೆ ಗಂಗಾ ಪೂಜೆಗೆಂದು ನಾಯಕನಹಟ್ಟಿ ಹಿರೇಕೆರೆಗೆ ಮಹಾಂತೇಶ ಕರೆದುಕೊಂಡು ಹೋಗಿದ್ದಾರೆ. ಪತ್ನಿ ಮತ್ತು ಮಕ್ಕಳನ್ನು ಕೆರೆ ನೀರಿಗೆ ತಳ್ಳಿ ಪತಿಯೇ ಕೊಂದಿರುವ ಶಂಕೆ ವ್ಯಕ್ತವಾಗಿದೆ. ಪತಿ ಮಹಾಂತೇಶನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಹಿರೇಕೆರೆಯಲ್ಲಿ ಶವಗಳಿಗಾಗಿ ಅಗ್ನಿಶಾಮಕ ದಳ ಶೋಧ ಆರಂಭಿಸಿದೆ. ನಾಯಕನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ನಾಪತ್ತೆಯಾಗಿದ್ದ ಗೃಹಿಣಿ ಸೃಷ್ಟಿ ಶವವಾಗಿ ಪತ್ತೆ
ಕಲಬುರಗಿ: ಡಿ.13ರಂದು ನಾಪತ್ತೆಯಾಗಿದ್ದ ಗೃಹಿಣಿ ಶವವಾಗಿ ಪತ್ತೆಯಾಗಿರುವಂತಹ ಘಟನೆ ಜಿಲ್ಲೆಯ ಕಮಲಾಪುರ ತಾಲೂಕಿನ ಕುರಿಕೋಟಾ ಗ್ರಾಮದಲ್ಲಿ ನಡೆದಿದೆ. ನಾವದಗಿ ಗ್ರಾಮದ ನಿವಾಸಿ ಸೃಷ್ಟಿ ಮಾರುತಿ ಮೃತ ಗೃಹಿಣಿ. ಡಿಗ್ರಿ 5ನೇ ಸೆಮಿಸ್ಟರ್ನಲ್ಲಿ ವಿದ್ಯಾಭ್ಯಾಸ ಮಾಡಿದ್ದಳು. ಡಿ.13ರಂದು ಕಾಲೇಜಿಗೆ ಹೋಗಿದ್ದಾಗ ನಾಪತ್ತೆಯಾಗಿದ್ದಳು. ಮೂರು ವರ್ಷಗಳ ಹಿಂದೆ ಮಾರುತಿ ಜೊತೆ ಸೃಷ್ಟಿ ವಿವಾಹವಾಗಿತ್ತು. ಇವತ್ತು ಬೆಣ್ಣೆತೋರಾ ಜಲಾಶಯದ ಹಿನ್ನೀರಿನಲ್ಲಿ ಸೃಷ್ಟಿ ಶವ ಪತ್ತೆಯಾಗಿದೆ. ಗೃಹಿಣಿ ಸೃಷ್ಟಿ ಸಾವಿನ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಮಹಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಇದನ್ನೂ ಓದಿ: udapi: ಹೆಜ್ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ನೀರಿಗೆ ಹಾರಿ ಓರ್ವ ಸಾವು, ಓರ್ವನ ಸ್ಥಿತಿ ಗಂಭೀರ
ಮದುವೆಯಾಗು ಅಂದಿದ್ದಕ್ಕೆ ಪ್ರಿಯತಮೆಯನ್ನು ಕೊಂದ ಪ್ರಿಯಕರ
ಬೆಂಗಳೂರು: ಮದುವೆಯಾಗು ಅಂದಿದ್ದಕ್ಕೆ ಪ್ರಿಯತಮೆಯನ್ನು ಪ್ರಿಯಕರ ಕೊಂದಿರುವಂತಹ ಘಟನೆ ನಗರದ ಸಿಂಗಸಂದ್ರದಲ್ಲಿ ನಡೆದಿದೆ. ಸುನೀತಾ ಅಲಿಯಾಸ್ ದೀಪು ಹತ್ಯೆ ಮಾಡಲಾಗಿದೆ. 4 ವರ್ಷಗಳಿಂದ ಪ್ರಶಾಂತ್-ಸುನೀತಾ ಲಿವಿಂಗ್ ಟುಗೆದರ್ನಲ್ಲಿದ್ದರು. ಮದುವೆ ಆಗು ಅಂದಿದ್ದಕ್ಕೆ ಪ್ರಶಾಂತ್ ನಾಟಕವಾಡುತ್ತಿದ್ದ. ತಂಗಿಯ ಮದುವೆ ಬಳಿಕ ಮದುವೆ ಆಗೋಣ ಎಂದಿದ್ದ.
ಸುನೀತಾ ಪದೇಪದೆ ಮದುವೆ ವಿಚಾರ ಪ್ರಸ್ತಾಪಿಸುತ್ತಿದ್ದಳು. ಡಿಸೆಂಬರ್ 6ರಂದು ರಾತ್ರಿ ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳವಾಗಿದೆ. ಕತ್ತಿನ ಮೇಲೆ ಮೊಣಕಾಲಿಟ್ಟು ಪ್ರಶಾಂತ್ ಸುನೀತಾಳನ್ನು ಕೊಲೆಗೈದಿದ್ದ.
ಇದನ್ನೂ ಓದಿ: ಬೆಂಗಳೂರು: ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಹೈದರಾಬಾದ್ ಮೂಲದ ಉದ್ಯಮಿ ಮೇಲೆ ಹಲ್ಲೆ, ಐವರು ಅರೆಸ್ಟ್
ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ಬಿಂಬಿಸಿದ್ದ. ನಂತರ ಕುತ್ತಿಗೆಗೆ ಮೊನಚಾದ ಲೋಹದಿಂದ ಗಾಯ ಮಾಡಿದ್ದಾನೆ. ಅನುಮಾನ ಬರದಂತೆ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಇಟ್ಟಿದ್ದ. ಬಳಿಕ ತಾನೇ ಖಾಸಗಿ ಆಸ್ಪತ್ರೆಗೆ ಶವ ಸಾಗಿಸಿದ್ದ. ಮರಣೋತ್ತರ ಪರೀಕ್ಷೆಯಲ್ಲಿ ಸುನೀತಾ ಕೊಲೆ ರಹಸ್ಯ ಬಯಲಾಗಿದೆ. ವೇಲ್ನಿಂದ ಬಿಗಿಯುವ ಮೊದಲೇ ಉಸಿರು ಚೆಲ್ಲಿರುವ ಸಾಕ್ಷಿ ಪತ್ತೆಯಾಗಿದೆ. ವಿಚಾರಣೆಗೆ ಕರೆದು ಪ್ರಶಾಂತ್ನನ್ನು ಪೊಲೀಸರು ಬಂಧಿಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.