udapi: ಹೆಜ್ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ನೀರಿಗೆ ಹಾರಿ ಓರ್ವ ಸಾವು, ಓರ್ವನ ಸ್ಥಿತಿ ಗಂಭೀರ
ಹೆಜ್ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ನೀರಿನಲ್ಲಿ ಮುಳುಗಿ ಓರ್ವ ಸಾವನ್ನಪ್ಪಿದ್ದು, ಓರ್ವನ ಸ್ಥಿತಿ ಗಂಭೀರವಾಗಿರುವಂತಹ ಘಟನೆ ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರೆ ಬೀಚ್ ಬಳಿ ಘಟನೆ ನಡೆದಿದೆ.
ಉಡುಪಿ: ಹೆಜ್ಜೇನು ದಾಳಿ (bee attack) ಯಿಂದ ತಪ್ಪಿಸಿಕೊಳ್ಳಲು ಹೋಗಿ ನೀರಿನಲ್ಲಿ ಮುಳುಗಿ ಓರ್ವ ಸಾವನ್ನಪ್ಪಿದ್ದು, ಓರ್ವನ ಸ್ಥಿತಿ ಗಂಭೀರವಾಗಿರುವಂತಹ ಘಟನೆ ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರೆ ಬೀಚ್ ಬಳಿ ಘಟನೆ ನಡೆದಿದೆ. ವಾಸುದೇವ ಡಿ.ಸಾಲಿಯಾನ್(65) ಮೃತಪಟ್ಟವರು. ಚಂದ್ರಶೇಖರ್ (65) ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪಡುಬಿದ್ರೆ ಬೀಚ್ ಬಳಿ ಅಡ್ಡಾಡುತ್ತಿದ್ದಾಗ ಹೆಜ್ಜೇನು ದಾಳಿ ಮಾಡಿದೆ. ಹಾಗಾಗಿ ಹೆಜ್ಜೇನಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಇಬ್ಬರು ನೀರಿಗೆ ಹಾರಿದ್ದಾರೆ. ಹೆಜ್ಜೇನು ತೆರವು ಮಾಡುವಂತೆ ಅರಣ್ಯ ಇಲಾಖೆಗೆ ಸ್ಥಳೀಯರು ದೂರು ಸಲ್ಲಿಸಿದ್ದಾರೆ.
ದುಷ್ಕರ್ಮಿಗಳಿಂದ ಕೆರೆ ವಿಷ: ನೂರಾರು ಮೀನುಗಳ ಮಾರಣಹೋಮ
ದಾವಣಗೆರೆ: ನೂರಾರು ಮೀನುಗಳ ಮಾರಣಹೋಮ ನಡೆದಿರುವಂತಹ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಚಿಕ್ಕರಿಕೆರೆ ಗ್ರಾಮದಲ್ಲಿ ನಡೆದಿದೆ. ದುಷ್ಕರ್ಮಿಗಳಿಂದ ಕೆರೆ ವಿಷ ಹಾಕಲಾಗಿದೆ ಎಂದು ಶಂಕೆ ವ್ಯಕ್ತವಾಗಿದೆ. ಮೀನುಗಳ ಮಾರಣಹೋಮದಿಂದಾಗಿ ಸುತ್ತಲಿನ ಪ್ರದೇಶದಲ್ಲಿ ಕೆಟ್ಟ ವಾಸನೆ ಬರುತ್ತಿದೆ. ನಿನ್ನೆ ಸಂಜೆ ಕೆರೆಗೆ ವಿಷ ಹಾಕಿರುವ ಶಂಕೆವಾಗಿದ್ದು, ಕೆರೆಯಲ್ಲಿ ಮೀನುಗಳು ಸತ್ತು ತೇಲಾಡುತ್ತಿವೆ. ಬಳಕ ಎಚ್ಚತ್ತುಕೊಂಡ ಗ್ರಾಮಸ್ಥರು ಜನ ಜಾನುವಾರು ಕೆರೆ ಕಡೆ ಬರದಂತೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: Chikkaballapur: ನೀಲಗಿರಿ ಮರದಲ್ಲಿ ಅನುಮಾನಸ್ಪದವಾಗಿ ಶವ ಪತ್ತೆ -ಕೊಲೆಯೊ, ಆತ್ಮಹತ್ಯೆಯೊ ಅನ್ನೊ ಅನುಮಾನ
ಉದ್ದೇಶ ಪೂರ್ವಕವಾಗಿ ಕೆರೆಗೆ ವಿಷ ಹಾಕಲಾಗಿದೆ ಎನ್ನಲಾಗುತ್ತಿದೆ. ಸಣ್ಣ ನೀರಾವರಿ ಇಲಾಖೆಯಿಂದ ಮೀನು ಸಾಗಾಣಿಕೆ ಗುತ್ತಿಗೆ ಪಡಿದ ವ್ಯಕ್ತಿಗಳಿಗೆ ಲಕ್ಷಾಂತರು ರೂಪಾಯಿ ನಷ್ಟವಾಗಿದೆ. ಜಗಳೂರು ಪೊಲೀಸ್ ಠಾಣೆಗೆ ಗ್ರಾಮಸ್ಥರು ದೂರು ನೀಡಿದ್ದು, ಆರೋಪಿಗಳ ಪತ್ತೆಗೆ ಆಗ್ರಹಿಸಿದ್ದಾರೆ.
ಜಮೀನಿನಲ್ಲಿ ನೇಣಿಗೆ ಶರಣಾದ ರೈತ
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಅಸಗೋಡ ಬಳಿಯ ವಡ್ಡರಹಳ್ಳಿ ಗ್ರಾಮದಲ್ಲಿ ತಿಮ್ಮಣ್ಣ (55) ಎಂಬ ರೈತ ಸಾಲ ಬಾದೆಗೆ ನೇಣಿಗೆ ಶರಣಾಗಿದ್ದಾರೆ. ನಾಲ್ಕು ಜನ ಹೆಣ್ಣು ಮಕ್ಕಳು, ಮೂರು ಎಕರೆ ಜಮೀನು ಹೊಂದಿದ್ದ ತಿಮ್ಮಣ್ಣ, ಮಗಳ ಮದ್ವೆಗೆ ಐದು ಲಕ್ಷ ರೂಪಾಯಿ ಸಾಲ ಮಾಡಿದ್ದ. ಸಾಲಗಾರರ ಕಾಟ, ಜಮೀನಿನಲ್ಲಿದ್ದ ಬೆಳೆ ಅತಿ ಮಳೆ ಹಾನಿಯಿಂದ ಬೇಸತ್ತು ಗ್ರಾಮದ ಹೊರವಲಯದ ಜಮೀನಿನಲ್ಲಿ ನೇಣಿಗೆ ಶರಣಾಗಿದ್ದಾರೆ. ಬಿಳಿಚೋಡು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಮುರುಘಾಶ್ರೀ ವಿರುದ್ಧ ಪಿತೂರಿ ಪ್ರಕರಣ: ಸೌಭಾಗ್ಯ ಬಸವರಾಜನ್ ಅರೆಸ್ಟ್
ಪ್ರೀತಿಸಿದ ಹುಡುಗಿಯ ಬೈಕ್ ಸುಟ್ಟು ಹಾಕಿದ ಪಾಗಲ್ ಪ್ರೇಮಿ
ಬೆಂಗಳೂರು: ಯುವಕನೊಬ್ಬ ತಾನು ಪ್ರೀತಿಸಿದ ಹುಡುಗಿಯ ದ್ವಿಚಕ್ರ ವಾಹನಕ್ಕೆ ಬೆಂಕಿ ಇಟ್ಟ ಘಟನೆ ನಗರದ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿಕ್ರಮ್ ಎಂಬ ಪಾಗಲ್ ಪ್ರೇಮಿಯಿಂದ ಈ ಕೃತ್ಯ ಎಸಗಲಾಗಿದ್ದು, ಬೈಕ್ಗೆ ಬೆಂಕಿ ಹಚ್ಚಿ ಪರಾರಿಯಾಗುವ (Lover sets bike on fire) ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೃತ್ಯ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ. ಈ ಹಿಂದೆ ಡ್ರಗ್ಸ್ ಕೇಸ್ (Drug Case)ನಲ್ಲಿ ಸಿಕ್ಕಿಹಾಕಿಕೊಂಡಿದ್ದ ವಿಕ್ರಮ್ ಕೆಲವು ತಿಂಗಳು ಜೈಲು ಪಾಲಾಗಿದ್ದನು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:49 pm, Fri, 16 December 22